ಮೇ 22, ಭಾರತದಲ್ಲಿ ಇಂದಿನ ಚಿನ್ನದ ಬೆಲೆ: ಭಾರತದಲ್ಲಿ ಚಿನ್ನದ ಬೆಲೆ ಈ ವಾರ ಗಗನಕ್ಕೇರಿದೆ. ನಿನ್ನೆ ದಾಖಲೆಯ ಬೆಲೆ ಏರಿಕೆಯನ್ನು ನೋಡಿದ್ದ ಚಿನ್ನ, ಇಂದು ಕೂಡ ಇಳಿಕೆಯಾಗಿಲ್ಲ. ಬೆಲೆ ಏರಿಕೆಯನ್ನು ನೋಡಿ ಚಿನ್ನ ಖರೀದಿದಾರರ ಕನಸು ಭಗ್ನವಾಗಿದೆ. ಕೊಂಚವಾದರೂ ಇಳಿಕೆಯಾಗಬಹುದು ಎಂದು ಕಾದಿದ್ದವರಿಗೆ ನಿರಾಸೆಯ ಭಾರ ತಲೆ ಮೇಲೆ ನಿಂತಿದೆ. ನಿನ್ನೆ ಒಂದೇ ದಿನ ₹24,000 ಏರಿಕೆಯಾಗಿತ್ತು. ಆದರೆ ಇಂದು ಕೂಡ 24 ಕ್ಯಾರಟ್ ಚಿನ್ನದಲ್ಲಿ ₹4,900 ಏರಿಕೆಯಾಗಿದೆ. ಅಂದರೆ ಚಿನ್ನದ ಬೆಲೆ ಇಂದು ಹತ್ತು ಲಕ್ಷದ ಆಸುಪಾಸಿನಲ್ಲಿದೆ. ಆದರೆ ಇಂದು ಅವರ ನಿರಾಳೆತೆಗೆ ನೀರೆರಚಿ ಎಬ್ಬಿಸಿದಂತಾಗಿದೆ. ಏಕೆಂದರೆ ನಿನ್ನೆ ದಾಖಲೆಯಷ್ಟು ಕುಸಿದಿದ್ದ ಚಿನ್ನದ ಬೆಲೆ, ಇಂದು ದಾಖಲೆಯಷ್ಟೇ ಏರಿಕೆಯಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಕೊಂಚ ತಣ್ಣಗಾದ ಬೆನ್ನಲ್ಲೇ ಚಿನ್ನದ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಳಿತ ನೋಡುತ್ತಿದೆ. ಈ ಕುಸಿತವು ಮುಖ್ಯವಾಗಿ ಭಾರತ-ಪಾಕಿಸ್ತಾನ ಉದ್ವಿಗ್ನತೆ ಮತ್ತು ದುರ್ಬಲ ಜಾಗತಿಕ ಬೇಡಿಕೆಯಿಂದಾಗಿ ಸಂಭವಿಸಿದೆ. ಹೂಡಿಕೆಗೆ ಆಸಕ್ತರಾಗಿರುವವರಿಗೆ ಈ ಪರಿಸ್ಥಿತಿ ಎರಡು ಬಗೆಯ ಪ್ರಭಾವ ಬೀರಬಹುದು.ಹೀಗಾಗಿ ಒಂದೆಡೆ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ಈಗಲೇ ಹೂಡಿಕೆ ಮಾಡೋದು ಸೂಕ್ತವೆಂಬ ಯೋಚನೆ,ಮತ್ತೊಂದೆಡೆ ಈಗ ತಕ್ಷಣ ಹೂಡಿಕೆಗೆ ಮುನ್ನುಡಿಯಿಟ್ಟರೆ ನಷ್ಟವೋ ಎಂಬ ಆತಂಕ.ಅಂತಾರಾಷ್ಟ್ರೀಯ ಮಾರುಕಟ್ಟೆಯ ಒತ್ತಡ,ಜಿಯೋಪಾಲಿಟಿಕಲ್ ಅನಿಶ್ಚಿತತೆಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಹಾಗಾದರೆ ಇಂದು ಯಾವ್ಯಾವ ಕ್ಯಾರಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,975 ಇದೆ.ಅಂದರೆ ನಿನ್ನೆ ₹8,930 ಆಗಿದ್ದು ಇಂದು ₹45 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದಬೆಲೆ 10 ಗ್ರಾಂಗೆ ₹89 ಸಾವಿರದ 750 ರೂ. ಇದೆ. ಅಂದರೆ ನಿನ್ನೆ ₹89 ಸಾವಿರದ 300 ರೂ. ಆಗಿದ್ದು ಇಂದು ₹450 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷದ 97 ಸಾವಿರದ 500 ರೂ. ಆಗಿದೆ. ಅಂದರೆ ನಿನ್ನೆ 8 ಲಕ್ಷ 93 ಸಾವಿರ ರೂ. ಆಗಿದ್ದು ಇಂದು ₹4,500 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,791 ಇದೆ. ಅಂದರೆ ನಿನ್ನೆ ₹9,742 ಆಗಿದ್ದು ಇಂದು ₹49 ಹೆಚ್ಚಳವಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ ₹97 ಸಾವಿರದ 910 ರೂ. ಇದೆ. ಅಂದರೆ ನಿನ್ನೆ ₹97 ಸಾವಿರದ 420 ರೂ. ಆಗಿದ್ದು ಇಂದು ₹490 ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ 79 ಸಾವಿರದ 100 ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 74 ಸಾವಿರದ 200 ರೂ. ಆಗಿದ್ದು ಇಂದು ₹4,900 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,344 ಇದೆ. ಅಂದರೆ ನಿನ್ನೆಯ ಬೆಲೆ ₹7,307 ಆಗಿದ್ದು ಇಂದು ಪ್ರತಿ ಗ್ರಾಂಗೆ ₹37 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ ₹73 ಸಾವಿರದ 440 ರೂ. ಇದೆ. ಅಂದರೆ ನಿನ್ನೆಯ ಬೆಲೆ ₹73 ಸಾವಿರದ 70 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹900 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 7 ಲಕ್ಷ 34 ಸಾವಿರದ 400 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 7 ಲಕ್ಷದ 30 ಸಾವಿರದ 700 ರೂ. ಆಗಿದ್ದು ಇಂದು ₹3,700 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,791 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,975 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,395 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,791 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,975 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,344 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,806 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,990 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,356 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,806 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,990 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,356 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,806 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,990 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,356 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,806 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,990 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,356 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,806 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,990 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,356 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,806 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,990 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,356 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,796 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,980 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,348 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,796 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,980 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,348 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಪ್ರತಿ ಗ್ರಾಂ ಬೆಳ್ಳಿ ಬೆಲೆ ಇಂದು ₹101 ತಲುಪಿದೆ. ನಿನ್ನೆ ಈ ಬೆಲೆ ₹100 ಆಗಿದ್ದು, ನಿನ್ನೆಗಿಂತ ಇಂದು ₹1 ಹೆಚ್ಚಳವಾಗಿದೆ. ಪ್ರತಿ 10 ಬೆಳ್ಳಿ ಬೆಲೆ ಇಂದು ₹1,010 ತಲುಪಿದೆ. ನಿನ್ನೆ ಈ ಬೆಲೆ ₹1,000 ಆಗಿದ್ದು, ನಿನ್ನೆಗಿಂತ ಇಂದು ₹10 ಹೆಚ್ಚಳವಾಗಿದೆ. 100 ಬೆಳ್ಳಿ ಬೆಲೆ ಇಂದು ₹10,100 ತಲುಪಿದೆ. ನಿನ್ನೆ ಈ ಬೆಲೆ ₹10,000 ಆಗಿದ್ದು, ನಿನ್ನೆಗಿಂತ ಇಂದು ₹100 ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆ ಇಂದು ₹1,01,000 ತಲುಪಿದೆ. ನಿನ್ನೆ ಈ ಬೆಲೆ ₹1,00,000 ಆಗಿದ್ದು, ನಿನ್ನೆಗಿಂತ ಇಂದು ₹1,000 ಹೆಚ್ಚಳವಾಗಿದೆ.
ಸ್ಪಾಟ್ ಚಿನ್ನದ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಮೇ 22, 2025 ರಂತೆ, ಸ್ಪಾಟ್ ಚಿನ್ನದ ಬೆಲೆ ಪ್ರತಿಯೌನ್ಸ್ $3,330.54ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ದಿನದ ಬೆಲೆಯಿಂದ 0.50% ಹೆಚ್ಚಳವಾಗಿದೆ. ಅಮೆರಿಕ ಸರ್ಕಾರದ ಸಾಲದ ಪ್ರಮಾಣ ಹೆಚ್ಚುತ್ತಿರುವುದು ಮತ್ತು 20 ವರ್ಷದ ಟ್ರೆಜರಿ ಬಾಂಡ್ಗಳ ಮೇಲೆ ಕಡಿಮೆ ಬೇಡಿಕೆ ಇರುವ ಕಾರಣದಿಂದ, ಚಿನ್ನವು ಸುರಕ್ಷಿತ ಹೂಡಿಕೆಯಾಗಿರುವುದರಿಂದ ಅದರ ಬೇಡಿಕೆ ಹೆಚ್ಚುತ್ತಿರುವುದು ಈ ಬೆಲೆ ಏರಿಕೆಗೆ ಕಾರಣವಾಗಿದೆ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.


Click it and Unblock the Notifications