India Gold Rate Falls:ಚಿನ್ನದ ಬೆಲೆಯಲ್ಲಿ ಮತ್ತೊಂದು ದಾಖಲೆ..24K ಗೋಲ್ಡ್‌ನಲ್ಲಿ ₹30,000 ಕುಸಿತ! 22K,18K ಚಿನ್ನಕ್ಕೆಷ್ಟು?

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ಎರಡ್ಮೂರು ದಿನಗಳಲ್ಲಿ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈಗ ದಿಢೀರ್ ಕುಸಿದಿದೆ. ಚಿನ್ನದ ಬೆಲೆ ಸದಾ ಹತ್ತು, ಇಪ್ಪತ್ತು, ಐವತ್ತು ರೂಗಳಲ್ಲಿ ಕುಸಿತವಾಗುತ್ತಿತ್ತು. ಆದರೆ ಇಂದು ಚಿನ್ನಪ್ರಿಯರು ಹುಬ್ಬೇರಿಸಿ ಆಶ್ಚರ್ಯ ಪಡುವಷ್ಟು, ಚಿನ್ನದ ಬೆಲೆ ಕುಸಿದಿದೆ. ಇತ್ತೀಚೆಗೆ ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನ ಹಿಡಿತವಿಲ್ಲದಷ್ಟು ಏರಿಕೆ ನೋಡುತ್ತಿದೆ. ಏರಿಳಿತಗಳ ಮಧ್ಯೆ ಗ್ರಾಹಕರು ಚಿನ್ನ ಕೊಳ್ಳುವ ಆಸೆಯನ್ನೇ ಬಿಟ್ಟುಬಿಡುವಂತಾಗುತ್ತಿದೆ. ಇತ್ತೀಚೆಗೆ ಆಗುತ್ತಿರುವ ಜಾಗತಿಕ ಬೆಳವಣಿಗೆಗಳಿಂದ, ಚಿನ್ನಪ್ರಿಯರಿಗೆ ಕೊಂಚ ಅಸಮಾಧಾನ ನೀಡುವ ಸುದ್ದಿ ಸಿಗುತ್ತಿದೆ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಸುಡುವ ಭೂಮಿ ಮೇಲೆ ನೀರೆರಚಿದಂತಾಗಿದೆ.

India Gold Rate Falls: 24K ಗೋಲ್ಡ್‌ನಲ್ಲಿ ₹30,000 ಕುಸಿತ!

ಹೌದು, ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವವಾದ ಸ್ಥಾನವಿದೆ. ಚಿನ್ನವೆಂದರೆ ಭಾರತೀಯರಿಗೆ ಅಚ್ಚು ಮೆಚ್ಚು. ಒಂದು ಹಂತದಲ್ಲಿ ದೊಡ್ಡ ಮಟ್ಟದ ಸಂಪತ್ತು ಎಂತಲೂ ಹೇಳಬಹುದು. ದೊಡ್ಡ ಮಟ್ಟದ ಹೂಡಿಕೆ ಸಾಧನವಾಗಿರುವ ಚಿನ್ನ, ಭಾರತದಲ್ಲಿ ಪ್ರತಿಷ್ಠೆಯ ಸಂಕೇತವೂ ಹೌದು. ಇನ್ನು ಮಹಿಳೆಯರಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಷ್ಟಿಷ್ಟಲ್ಲ. ಚಿನ್ನ ಎಂದರೆ ಪ್ರಾಣ ಬಿಡುತ್ತಾರೆ. ಸಭೆ ಸಮಾರಂಭಗಳಲ್ಲಿ ಪ್ರತಿಷ್ಠೆ ತಂದುಕೊಡುವುದೇ ಚಿನ್ನ. ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಆಭರಣದ ರೂಪದಲ್ಲಿ ಮಹಿಳೆಯರಿಗೆ ಆಕರ್ಷಣೆ ನೀಡುವ ಈ ಚಿನ್ನಕ್ಕೆ ಭಾರತದಲ್ಲಿ ದಿನೇ ದಿನೆ ಡಿಮ್ಯಾಂಡ್ ಹೆಚ್ಚುತ್ತಲೇ ಇದೆ..ಹಾಗಾದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ತಿಳಿಯಿರಿ. ಮೊದಲು ಚಿನ್ನದ ಬೆಲೆಯಲ್ಲಿನ ಬದಲಾವಣೆ ಬಗ್ಗೆ ತಿಳಿದು, ನಂತರ ಈ ಏರಿಳಿತಗಳಿಗೆ ಕಾರಣ ಏನೆಂದು ಓದಿರಿ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ:

22 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹9,015 ಆಗಿದೆ. ನಿನ್ನೆ ಇದರ ಬೆಲೆ ₹9,290 ಆಗಿದ್ದು ನಿನ್ನೆಗಿಂತ ಇಂದು, ₹275 ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹90,150 ಆಗಿದೆ. ನಿನ್ನೆಯ ಬೆಲೆ ₹92,900 ಆಗಿದ್ದು ನಿನ್ನೆಗಿಂತ ಇಂದಿಗೆ ₹2,750 ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು ₹9,01,50 ರೂ. ಆಗಿದೆ. ನಿನ್ನೆಯ ಬೆಲೆ ₹9,29,000 ಆಗಿದ್ದು ನಿನ್ನೆಗಿಂತ ಇಂದು ₹27,500 ಇಳಿಕೆಯಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹9,835 ಆಗಿದೆ. ನಿನ್ನೆ ಇದರ ಬೆಲೆ ₹10,135 ಆಗಿದ್ದು ನಿನ್ನೆಗಿಂತ ಇಂದು, ₹300 ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹98,350 ಆಗಿದೆ. ನಿನ್ನೆಯ ಬೆಲೆ ₹1,01,350 ಆಗಿದ್ದು ನಿನ್ನೆಗಿಂತ ಇಂದಿಗೆ ₹3,000 ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು ₹9,83,500 ಆಗಿದೆ. ನಿನ್ನೆಯ ಬೆಲೆ ₹10,13,500 ಆಗಿದ್ದು ನಿನ್ನೆಗಿಂತ ಇಂದು ₹30,000 ಇಳಿಕೆಯಾಗಿದೆ.

18 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹7,376 ಆಗಿದೆ. ನಿನ್ನೆ ಇದರ ಬೆಲೆ ₹7,601 ಆಗಿದ್ದು ನಿನ್ನೆಗಿಂತ ಇಂದು, 225 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹73,760 ಆಗಿದೆ. ನಿನ್ನೆಯ ಬೆಲೆ ₹76,010 ಆಗಿದ್ದು ನಿನ್ನೆಗಿಂತ ಇಂದಿಗೆ 2,250 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 7,37,600 ರೂ. ಆಗಿದೆ. ನಿನ್ನೆಯ ಬೆಲೆ ₹7,60,100 ಆಗಿದ್ದು ನಿನ್ನೆಗಿಂತ ಇಂದು 22,500 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)

ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,015 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,835 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,465 ಆಗಿದೆ.

ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,015 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,835 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,376 ಆಗಿದೆ.

ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,030 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,850 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,389 ಆಗಿದೆ.

ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,015 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,835 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,376 ಆಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,015 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,835 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,376 ಆಗಿದೆ.

ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,015 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,835 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,376 ಆಗಿದೆ.

ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,015 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,835 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,376 ಆಗಿದೆ.

ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,015 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,835 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,376 ಆಗಿದೆ.

ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,840 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,840 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ಭಾರತದಲ್ಲಿ ಇಂದು ಬೆಳ್ಳಿ ಬೆಲೆ:

ಬೆಳ್ಳಿ ಬೆಲೆಯಲ್ಲೂ ಇಂದು ಭಾರಿ ಇಳಿಕೆಯನ್ನು ನೋಡಬಹುದಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ಬೆಲೆ 101 ಆಗಿದೆ. ನಿನ್ನೆ ಈ ಬೆಲೆ ₹101.10 ಆಗಿದ್ದು. ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ ₹0.10 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಬೆಳ್ಳಿ ಬೆಲೆ ₹1,010 ಆಗಿದೆ. ನಿನ್ನೆ ಈ ಬೆಲೆ ₹1,011 ಆಗಿದ್ದು. ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ ₹1 ರೂ. ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹10,100 ಆಗಿದೆ. ನಿನ್ನೆ ಈ ಬೆಲೆ ₹10,110 ಆಗಿದ್ದು. ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ ₹10 ರೂ. ಇಳಿಕೆಯಾಗಿದೆ. ಹಾಗೆಯೇ ಒಂದು ಕೆ.ಜಿ ಬೆಳ್ಳಿ ಬೆಲೆ ₹1,01,000 ಆಗಿದೆ. ನಿನ್ನೆ ಈ ಬೆಲೆ ₹1,01,100 ಆಗಿದ್ದು. ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ ₹100 ರೂ. ಇಳಿಕೆಯಾಗಿದೆ.

ಸ್ಪಾಟ್ ಗೋಲ್ಡ್ ವಿವರ:

ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಏಪ್ರಿಲ್ 23ರಂದು ಸ್ಪಾಟ್ ಚಿನ್ನದ ಬೆಲೆಯು, 0428 GMT ವೇಳೆಯಲ್ಲಿ 1.2% ಇಳಿದಿದೆ. ಅಂದರೆ $3,339.53 ಪ್ರತಿ ಔನ್ಸ್ ಗೆ ವಹಿವಾಟು ನಡೆಸಿದೆ. ಅದೇ ರೀತಿಯಾಗಿ ಅಮೆರಿಕಾದ ಫ್ಯೂಚರ್ ಗೋಲ್ಡ್ ಕೂಡ 2% ಇಳಿಕೆ ಕಂಡಿದ್ದು, $3,349.80ಗೆ ವಹಿವಾಟು ನಡೆಸಿದೆ.

ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?

ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.

ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+