ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹಾವು-ಏಣಿಯಾಟ ಆಡುತ್ತಿದೆ. ಮೊನ್ನೆಗಿಂತ ನಿನ್ನೆ ಬಂಗಾರದ ಬೆಲೆ ಹೆಚ್ಚಾಗಿತ್ತು. ಆದರೆ ಇಂದು ಬಂಗಾರದ ಬೆಲೆಯಲ್ಲಿ ಯಾವುದೇ ಏರಿಕೆ-ಇಳಿಕೆ ಕಂಡು ಬಂದಿಲ್ಲ. ಮಹಿಳೆಯರ ಪಾಲಿಗೆ ಇದೊಂದು ಸಮಾಧಾನಕರವಾದ ವಿಚಾರ ಎಂದರೆ ತಪ್ಪಾಗಲ್ಲ. ಮಹಿಳೆಯರು ಸದಾ ಚಿನ್ನದ ಮೇಲೆ ಆಸಕ್ತಿ ಹೊಂದಿರುತ್ತಾರೆ ಇದರಿಂದ ಅವರು ಸದಾ ಚಿನ್ನದ ಬೆಲೆಯಲ್ಲಿ ಇಳಿಕೆಯನ್ನೇ ಬಯಸುತ್ತಾರೆ. ಚಿನ್ನವು ಇಂದಿನ ಪೀಳಿಗೆಗೆ ದೊಡ್ಡ ಸಂಪತ್ತಿಗೆ ಸಮಾನವಾಗಿದೆ ಎಂದರೆ ತಪ್ಪಾಗಲ್ಲ. ಚಿನ್ನದ ಬೆಲೆ ಎಷ್ಟೇ ದುಬಾರಿಯಾದರೂ ಮಹಿಳೆಯರ ಆಸಕ್ತಿ ಕಡಿಮೆಯಾಗಲ್ಲ. ಹೀಗಿರುವಾಗ ಚಿನ್ನದ ಬೆಲೆಯಲ್ಲಿ ಏರಿಕೆಯೇ ಕಂಡು ಬಂದಿಲ್ಲವೆಂದರೆ, ಇದು ಅವರು ಸಮಾಧಾನಪಡುವ ಸಂಗತಿಯಾಗಿದೆ.

ಭಾರತದಲ್ಲಿ ಚಿನ್ನಕ್ಕೆ ತನ್ನದೇ ಆದ ಮಹತ್ವವಿದೆ. ಇದರ ಬೆಲೆ ಎಷ್ಟೇ ಹೆಚ್ಚಾದರೂ ಇದರ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಹಾಗಾದರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾದಾಗ ಸಾಮಾನ್ಯವಾಗಿ ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಚಿನ್ನದ ಬೆಲೆ ಏರಿಕೆ ಹಾಗೂ ಇಳಿಕೆಗೆ ಜಾಗತಿಕ ಮಾರುಕಟ್ಟೆಯೇ ಮೂಲವಾಗಿರುತ್ತದೆ.
ಭಾರತದಲ್ಲಿ ಚಿನ್ನ ಒಂದು ಪ್ರತಿಷ್ಠೆಯ ಸಂಕೇತ ಹಾಗೂ ಚಿನ್ನವನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ. ಹಾಗೆ ಚಿನ್ನವು ಸಾಂಪ್ರದಾಯಿಕವಾಗಿ ಮದುವೆಗಳು ಮತ್ತು ಇತರ ವಿಧ್ಯುಕ್ತ ಸಂದರ್ಭಗಳಲ್ಲಿ ಅತ್ಯಗತ್ಯ ಭಾಗವಾಗಿದೆ. ಬೆಂಗಳೂರಿನಲ್ಲಿ ಚಿನ್ನಾಭರಣಗಳ ಬೇಡಿಕೆ ನಿರಂತರವಾಗಿ ಹೆಚ್ಚಿದ್ದು, ಅನೇಕ ಪ್ರಸಿದ್ಧ ಆಭರಣ ಬ್ರ್ಯಾಂಡ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಸ್ಥಾಪನೆಗೆಕಾರಣವಾಗಿದೆ. ನಗರವು ಪ್ರಮುಖವಾದ ಚಿನ್ನದ ಆಭರಣ ಶೋರೂಮ್‌ಗಳನ್ನು ಹೊಂದಿದೆ. ಇನ್ನು ಚಿನ್ನದ ದರಗಳು ಮಜೂರಿ, ವೇಸ್ಟೇಜ್ ಇತ್ಯಾದಿ ಅಂಶಗಳಿಂದ ಚಿನ್ನದ ಅಂಗಡಿಗಳಲ್ಲಿ ವ್ಯತ್ಯಾಸ ಹೊಂದಬಹುದು. ಆದ್ದರಿಂದ, ಚಿನ್ನ ಖರೀದಿಸುವ ಮೊದಲು ಸ್ಥಳೀಯ ಚಿನ್ನದ ಅಂಗಡಿಗಳಲ್ಲಿ ಇಂದಿನ ದರಗಳನ್ನು ಪರಿಶೀಲಿಸುವುದು ಉತ್ತಮ.
ಭಾರತದಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿಲ್ಲ. ಹಾಗೆಯೇ ಕಡಿಮೆಯೂ ಆಗಿಲ್ಲ ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,040 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 80,400 ರೂ. ಇದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 8 ಲಕ್ಷದ 4,000 ಇದೆ. ಈ ಬೆಲೆ ನಿನ್ನೆ (ಶನಿವಾರ) ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ.
24 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,771 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 87,710 ರೂ. ಇದೆ. ಹಾಗೆಯೇ ಪ್ರತಿ 100 ಗ್ರಾಂ ಚಿನ್ನದ ಬೆಲೆ 8 ಲಕ್ಷ 77 ಸಾವಿರದ 100 ಇದೆ. ಅಂದರೆ 24 ಕ್ಯಾರಟ್ ಚಿನ್ನದ ಬೆಲೆಯೂ ನಿನ್ನೆ (ಶನಿವಾರ) ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ
18 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,578 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 65,780 ರೂ. ಇದೆ. ಹಾಗೆಯೇ ಪ್ರತಿ 100 ಗ್ರಾಂ ಚಿನ್ನದ ಬೆಲೆ 6 ಲಕ್ಷ 57 ಸಾವಿರದ 800 ಇದೆ. ಅಂದರೆ 18 ಕ್ಯಾರಟ್ ಚಿನ್ನದ ಬೆಲೆಯೂ ನಿನ್ನೆ (ಶನಿವಾರ) ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ..?
ಚೆನ್ನೈ: ಚೆನ್ನೈ ನಗರದಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ ₹8,040 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,771 ಆಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ಬೆಲೆ ₹6,630 ಆಗಿದೆ.
ಮುಂಬೈ: ಮುಂಬೈ ನಗರದಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ ₹8,040 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,771 ಆಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ಬೆಲೆ ₹6,578 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ ₹8,055 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,786 ಆಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ಬೆಲೆ ₹6,591 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ ₹8,040 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,771 ಆಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ಬೆಲೆ ₹6,578 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ ₹8,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,776 ಆಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ಬೆಲೆ ₹6,583 ಆಗಿದೆ.
ಭಾರತದಲ್ಲಿ ಬೆಳ್ಳಿ ಬೆಲೆ:
ಇನ್ನು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಯಾವುದೇ ಇಳಿಕೆಯಾಗಲಿ, ಏರಿಕೆಯಾಗಲೀ ಆಗಿಲ್ಲ. ಅಂದರೆ ಪ್ರತಿ ಗ್ರಾಂ ಬೆಳ್ಳಿಗೆ ₹99.10 ಇದೆ. ಪ್ರತಿ ಹತ್ತು ಗ್ರಾಂ ಬೆಳ್ಳಿ ಬೆಲೆಗೆ ₹991 ಆಗಿದೆ. ಹಾಗೆಯೇ ಪ್ರತಿ 100 ಗ್ರಾಂ ಬೆಳ್ಳಿಗೆ ₹9,910 ಆಗಿದ್ದು, ಒಂದು ಕೆ.ಜಿ ಬೆಳ್ಳಿಗೆ ₹99,100 ಆಗಿದೆ. ಭಾರತದಲ್ಲಿ ಬೆಳ್ಳಿ ಬೆಲೆ ನಿನ್ನೆ (ಶನಿವಾರ) ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ.
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು:
ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ 03:25 GMT ಸಮಯಕ್ಕೆ, ಸ್ಪಾಟ್ ಚಿನ್ನದ ಬೆಲೆ 0.2% ಇಳಿದು USD 2,904.98 ಪ್ರತಿ ಔನ್ಸ್ ಆಗಿತ್ತು, ಆದರೆ ಇದು ವಾರದಲ್ಲಿ 1.6% ಏರಿಕೆಯಾಗಿದೆ. ಅಮೆರಿಕದ ಚಿನ್ನದ ಭವಿಷ್ಯಧಾರಣೆ ದರ 0.5% ಕುಸಿದು USD 2,911.90 ಪ್ರತಿ ಔನ್ಸ್ ಆಗಿತ್ತು. ಸ್ಪಾಟ್ ಬೆಳ್ಳಿ ಬೆಲೆ ಕೂಡ 0.4% ಇಳಿದು USD 32.51 ಪ್ರತಿ ಔನ್ಸ್ ಗೆ ತಲುಪಿದೆ.
More From GoodReturns

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ



Click it and Unblock the Notifications