ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕೇಳೋದೇ ಬೇಡ ಅನಿಸುತ್ತದೆ. ನಿನ್ನೆ ಮೊನ್ನೆವರೆಗೂ 9 ಸಾವಿರದ ಆಸುಪಾಸಿನಲ್ಲಿ ಆಟವಾಡ್ತಿದ್ದ ಬಂಗಾರ, ಈಗ ದಿಢೀರ್ ಹತ್ತು ಸಾವಿರದ ಗಡಿ ದಾಟಿದೆ. ಈ ಪರಿಯ ಬೆಲೆ ಹೆಚ್ಚಳದಿಂದ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂದಿರುವವರಿಗೆ, ನಿಜಕ್ಕೂ ಆಘಾತ ಸಂಭವಿಸಿದೆ. ಚಿನ್ನ ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೆ ಬೆವರಿಳಿಯುವ ಸಂದರ್ಭ ಬಂದೊದಗಿದೆ. ಅದರಲ್ಲೂ ಚಿನ್ನ ಕೊಳ್ಳಬೇಕು ಎಂದು ಕನಸು ಹೊತ್ತ ಮಹಿಳೆಯರಿಗೆ ಭಾರಿ ನಿರಾಸೆಯಾಗಿದೆ. ನಿರಾಸೆ ಎಂದರೆ ಅಂತಿಂಥಾ ನಿರಾಸೆಯಲ್ಲ. ಚಿನ್ನದ ಮೇಲೆ ಹಣ ಹೂಡುವ ಬದಲು ಒಂದು ಜಾಗ ಖರೀದಿಸಬಹುದು. ಅಷ್ಟಾಗಿದೆ ಇಂದಿನ ಚಿನ್ನದ ಬೆಲೆ.

ಹೂಡಿಕೆಗೆ ಆಸಕ್ತರಾಗಿರುವವರಿಗೆ ಈ ಪರಿಸ್ಥಿತಿ ಎರಡು ಬಗೆಯ ಪ್ರಭಾವ ಬೀರಬಹುದು.ಹೀಗಾಗಿ ಒಂದೆಡೆ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ಈಗಲೇ ಹೂಡಿಕೆ ಮಾಡೋದು ಸೂಕ್ತವೆಂಬ ಯೋಚನೆ,ಮತ್ತೊಂದೆಡೆ ಈಗ ತಕ್ಷಣ ಹೂಡಿಕೆಗೆ ಮುನ್ನುಡಿಯಿಟ್ಟರೆ ನಷ್ಟವೋ ಎಂಬ ಆತಂಕ.ಅಂತಾರಾಷ್ಟ್ರೀಯ ಮಾರುಕಟ್ಟೆಯ ಒತ್ತಡ,ಜಿಯೋಪಾಲಿಟಿಕಲ್ ಅನಿಶ್ಚಿತತೆಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಹಾಗಾದರೆ ಇಂದು ಯಾವ್ಯಾವ ಕ್ಯಾರಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,290ಇದೆ.ಅಂದರೆ ನಿನ್ನೆ ₹9,015ಆಗಿದ್ದು ಇಂದು ₹275 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದಬೆಲೆ 10 ಗ್ರಾಂಗೆ 92 ಸಾವಿರದ 900 ರೂ. ಇದೆ. ಅಂದರೆ ನಿನ್ನೆ 90 ಸಾವಿರದ 150 ರೂ. ಆಗಿದ್ದು ಇಂದು ₹2,750 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ 29 ಸಾವಿರ ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 1ಸಾವಿರ 500 ರೂ. ಆಗಿದ್ದು ಇಂದು ₹27,500 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,135ಇದೆ. ಅಂದರೆ ನಿನ್ನೆ ₹9,835ಆಗಿದ್ದು ಇಂದು ₹27ಹೆಚ್ಚಳವಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 1 ಲಕ್ಷದ 1 ಸಾವಿರದ350 ರೂ. ಇದೆ. ಅಂದರೆ ನಿನ್ನೆ 98 ಸಾವಿರದ 350 ರೂ. ಆಗಿದ್ದು ಇಂದು ₹3,000 ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 10 ಲಕ್ಷದ13 ಸಾವಿರದ 500ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 83 ಸಾವಿರದ 500 ರೂ. ಆಗಿದ್ದು ಇಂದು ₹30,000 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,601 ಇದೆ. ಅಂದರೆ ನಿನ್ನೆಯ ಬೆಲೆ ₹7,376 ಆಗಿದ್ದು ಇಂದು ಪ್ರತಿ ಗ್ರಾಂಗೆ ₹225 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 76ಸಾವಿರದ 10 ರೂ. ಇದೆ. ಅಂದರೆ ನಿನ್ನೆಯ ಬೆಲೆ 73 ಸಾವಿರದ 760 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹2,250 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 7 ಲಕ್ಷ 60 ಸಾವಿರದ 100 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 7 ಲಕ್ಷದ 37 ಸಾವಿರದ 600 ರೂ. ಆಗಿದ್ದು ಇಂದು ₹22,500 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,290 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,135 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,690 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,290 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,135 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,601 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,305 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,150 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,614 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,290 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,135 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,601 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,290 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,135 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,601 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,290 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,135 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,601 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,290 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,135 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,601 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,290 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,135 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,601 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,295 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,140 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,605 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,295 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹10,140 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,605 ಆಗಿದೆ.
ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಗೆ ಇದ್ದು ₹101.10 ನಿನ್ನೆ ಈ ಬೆಲೆ ₹101 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹0.10ರಷ್ಟು ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ₹1,011ಇದ್ದು ನಿನ್ನೆ ಈ ಬೆಲೆ 1,010 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹1 ರಷ್ಟು ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿಗೆ ₹10,110ಇದ್ದು ನಿನ್ನೆ ಈ ಬೆಲೆ ₹₹10,100 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹10 ರಷ್ಟು ಏರಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿಗೆ ₹1,01,100 ಇದ್ದು ನಿನ್ನೆ ಈ ಬೆಲೆ ₹1,01,000 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹100 ರಷ್ಟು ಏರಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿಯ ಪ್ರಕಾರ ಇಂದು ಮಂಗಳವಾರ..ಅಂದರೆ ಏಪ್ರಿಲ್ 22ರಂದು ಸ್ಪಾಟ್ ಚಿನ್ನದ ಬೆಲೆಯು 1.4% ರಷ್ಟು ಏರಿಕೆ ಕಂಡಿದೆ. ಇದು ಪ್ರತಿ ಔನ್ಸ್‌ಗೆ $3,472.49 ವಹಿವಾಟು ನಡೆಸಿದೆ. ಭಾರತೀಯ ಕರೆನ್ಸಿ ಲೆಕ್ಕದಲ್ಲಿ ನೋಡುವುದಾದರೆ ಈ ಮೊತ್ತ ₹2,89,000 ಎನ್ನಬಹುದು. ಅದೇ ರೀತಿ ಒಂದೇ ದಿನದಲ್ಲಿ ಇತಿಹಾಸದ ಗರಿಷ್ಠ ಮಟ್ಟವಾದ $3,473.03 ಅನ್ನು ತಲುಪಿದ್ದವು. ಈ ಬೆಳವಣಿಗೆ ಮಂಗಳವಾರದ ಬೆಳಗಿನ ಜಾವ 02:47 ಜಿಎಂಟಿ ಸಮಯದ ಲೆಕ್ಕಾಚಾರದಲ್ಲಿ ದಾಖಲಾಯ್ತು.
ಚಿನ್ನದ ಬೆಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಈ ಪರಿಯ ಏರಿಕೆ ನೋಡುತ್ತಿರುವುದು ಆತಂಕ ಎದುರಾಗಿಸುವ ಸಂಗತಿಯಾಗಿದೆ. ಟ್ರಂಪ್ ಅವರ ಈ ತೀರ್ಮಾನದಿಂದ ತಕ್ಷಣವೇ ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬಂದಿತು. ಇದರಿಂದ ಹೂಡಿಕೆದಾರರಲ್ಲಿ ಭೀತಿಯಿಂದಾಗಿ ಉಂಟಾಗಿದ್ದ ಒತ್ತಡ ಕಡಿಮೆಯಾಯಿತು.ಈ ನಿರ್ಧಾರವು ಜಾಗತಿಕ ಆರ್ಥಿಕ ಸ್ಥಿತಿಗೆ ತಾತ್ಕಾಲಿಕ ಉಸಿರಾಟ ನೀಡಿದರೂ, ಮುಂದಿನ ದಿನಗಳಲ್ಲಿ ಟ್ರಂಪ್ ಆಡಳಿತದ ವ್ಯಾಪಾರ ನೀತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.
ಮದುವೆ ಸೀಸನ್‌ಗೆ ಚಿನ್ನ ಖರೀದಿ ಯೋಜಿಸುತ್ತಿದ್ದ ಕುಟುಂಬಗಳು ಹಿಂದಕ್ಕೆ ಜಾರುವ ಸ್ಥಿತಿ ಎದುರಾಗಿದೆ. ಇದರೊಂದಿಗೆ, ಬಂಗಾರ ಹೂಡಿಕೆಗೆ ಇದು ಸರಿಯಾದ ಸಮಯವೇ ಎಂಬ ಪ್ರಶ್ನೆ ಇನ್ನಷ್ಟು ಗಂಭೀರವಾಗಿ ಎದುರಾಗುತ್ತಿದೆ. ಇಂಧನ ದರ, ಡಾಲರ್-ರೂಪಾಯಿ ವಿನಿಮಯ ಮೌಲ್ಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಚಲನೆಗಳು ಈ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ, ಚಿನ್ನದ ಖರೀದಿಗೆ ಮೊದಲು ನಿಖರ ಮಾಹಿತಿ ಪಡೆದು, ಸಮಗ್ರ ಹೂಡಿಕೆ ಯೋಚನೆಯೊಂದಿಗೆ ಮುಂದಾಗುವುದು ಸೂಕ್ತ.
ಒಟ್ಟಿನಲ್ಲಿ, ಅಮೆರಿಕಾ-ಚೀನಾ ಸಂಘರ್ಷ, ಯುದ್ಧದ ಭೀತಿ, ರೂಪಾಯಿಯ ಮೌಲ್ಯ ಕುಸಿತ, ಜಾಗತಿಕ ಬ್ಯಾಂಕುಗಳ ಬಂಗಾರದ ಸಂಗ್ರಹ, ಹಾಗೂ ದೇಶೀಯ ಮದುವೆ ಅವಧಿಯ ಬೇಡಿಕೆಸೇರಿ ಎಲ್ಲ ಅಂಶಗಳ ಸಮೂಹ ಪರಿಣಾಮವಾಗಿ ಚಿನ್ನದ ದರ ಜಿಗಿತ ಕಂಡಿದೆ. ಹೀಗಾಗಿ ಹೂಡಿಕೆದಾರರು ಶೇರು ಮಾರುಕಟ್ಟೆ ಅಥವಾ ಕ್ರಿಪ್ಟೋ ಮಾರುಕಟ್ಟೆಯ ಬದಲು ಚಿನ್ನವನ್ನು ಭದ್ರ ಹೂಡಿಕೆ ಮಾಧ್ಯಮವೆಂದು ಆಯ್ಕೆ ಮಾಡುತ್ತಿದ್ದಾರೆ.


Click it and Unblock the Notifications