ವಿವಿಧ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ, ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಹೆಚ್ಚಿನ ಆಸಕ್ತಿ ತೋರಿಸಿರುವುದರಿಂದ ಚಿನ್ನ-ಬೆಳ್ಳಿ ದರಗಳು ಭಾರೀ ಏರಿಕೆ ಕಾಣುತ್ತಿದೆ. ಭಾರತೀಯರು ಮೊದಲೇ ಚಿನ್ನ ಪ್ರಿಯರು. ಆದ್ರೆ ಇತ್ತೀಚಿನ ಚಿನ್ನದ ದರ ಏರಿಕೆಯಿಂದಾಗಿ (Gold Rate Rise) ತಬ್ಬಿಬ್ಬಾಗಿದ್ದಾರೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಇಂದು 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹16,026 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಇಂದು ಮುಂದುವರೆದಿದೆ. 8 ಗ್ರಾಂ ಬೆಲೆ ಇಂದು ₹1,28,208 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಇಂದು ₹1,60,260 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,02,600 ರೂ. ಆಗಿದೆ. ಅತ್ತ ಚಿನ್ನದ ಬೆಲೆ ಏರಿಕೆಯೂ ಆಗದೆ, ಇಳಿಕೆಯೂ ಆಗದೆ, ಸ್ಥಿರವಾಗಿಬಿಟ್ಟಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ ಬೆಲೆ ಇಂದು 14,690 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,17,520 ರೂ. ಆಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ₹1,46,900 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ 14,69,000 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಕಡಿಮೆ ಬೆಲೆಗೆ ಸಿಗೋದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು 1 ಗ್ರಾಂ ಚಿನ್ನದ ಬೆಲೆ 12,019 ರೂ. ಇದ್ದು, ನಿನ್ನೆಯಷ್ಟೇ ಬೆಲೆ ಸ್ಥಿರವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹96,152 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,20,190 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 12,01,900 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 15,949, 22K ರೂ. 14,750, 18K ರೂ. 12,300
ಮುಂಬೈ: 24K ರೂ. 16,026, 22K ರೂ. 14,690, 18K ರೂ. 12,019
ದೆಹಲಿ: 24K ರೂ. 16,041, 22K ರೂ. 14,705, 18K ರೂ. 12,034
ಕೋಲ್ಕತ್ತಾ: 24K ರೂ. 16,026, 22K ರೂ. 14,690, 18K ರೂ. 12,019
ಬೆಂಗಳೂರು: 24K ರೂ. 16,026, 22K ರೂ. 14,690, 18K ರೂ. 12,019
ಹೈದರಾಬಾದ್: 24K ರೂ. 16,026, 22K ರೂ. 14,690, 18K ರೂ. 12,019
ಕೇರಳ: 24K ರೂ. 16,026, 22K ರೂ. 14,690, 18K ರೂ. 12,019
ಪುಣೆ: 24K ರೂ. 16,026, 22K ರೂ. 14,690, 18K ರೂ. 12,019
ವಡೋದರಾ: 24K ರೂ. 16,031, 22K ರೂ. 14,695, 18K ರೂ. 12,024
ಅಹಮದಾಬಾದ್: 24K ರೂ. 16,031, 22K ರೂ. 14,695, 18K ರೂ. 12,024
ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ದರ ಸ್ಥಿರವಾಗಿಬಿಟ್ಟಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹335 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ಇನ್ನು 8 ಗ್ರಾಂ ಬೆಳ್ಳಿ ದರ ₹2,680 ರೂ. ಆಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ಬೆಲೆ ₹3,350 ರೂ., 100 ಗ್ರಾಂ ಬೆಳ್ಳಿ ದರ ₹33,500 ರೂ., 1000 ಗ್ರಾಂ ಬೆಳ್ಳಿ ನೆಲೆ ₹3,35,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 24ರ ರಾಯಿಟರ್ಸ್ ವರದಿ ಪ್ರಕಾರ, ಮುಂಬರುವ ಬಜೆಟ್‌ನಲ್ಲಿ ಆಮದು ಸುಂಕ ಹೆಚ್ಚಳದ ನಿರೀಕ್ಷೆಯಿಂದ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಅದೇ ಕಾರಣದಿಂದ ಚಿನ್ನದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ $5000 ಗಡಿಯಲ್ಲಿ ವಹಿವಾಟು ನಡೆಸುತ್ತಿದೆ.


Click it and Unblock the Notifications