ಈ ವರ್ಷದ ಅಂತ್ಯದ ವೇಳೆಗೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ತನ್ನ ಟೆಸ್ಲಾ ಸಂಸ್ಥೆಯ ಹೊಸ ಫ್ಯಾಕ್ಟರಿಗೆ ಸ್ಥಳವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ನಡುವೆ ಎಲಾನ್ ಮಸ್ಕ್, "ಎಲ್ಲವೂ ಸರಿಯಾಗಿ ಆದಲ್ಲಿ ಮುಂದಿನ ಟೆಸ್ಲಾದ ಹೊಸ ಕಚೇರಿಗೆ ಭಾರತವೆ ಆಸಕ್ತಿದಾಯಕ ಆಯ್ಕೆಯಾಗಿದೆ," ಎಂದು ತಿಳಿಸಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಶಕರು, "ಟೆಸ್ಲಾದ ಹೊಸ ಕಚೇರಿಗಾಗಿ ಭಾರತ ಆಸಕ್ತಿದಾಯಕ ಸ್ಥಳವಾಗಿದೆಯೇ," ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್ "ಖಂಡಿತವಾಗಿಯೂ" ಎಂದು ಹೇಳಿದ್ದಾರೆ.

ಮುಂದಿನ ಟೆಸ್ಲಾ ಗಿಗಾಫ್ಯಾಕ್ಟರಿಗಾಗಿ ಎಲಾನ್ ಮಸ್ಕ್ ಮಾರ್ಚ್‌ನಲ್ಲಿ ಮೆಕ್ಸಿಕೋವನ್ನು ಆಯ್ಕೆ ಮಾಡಿದ್ದಾರೆ. ಫ್ರೆಮಾಂಟ್, ಕ್ಯಾಲಿಫೋರ್ನಿಯಾ ಸೇರಿದಂತೆ ಯುಎಸ್‌ನ ಹಲವಾರು ಪ್ರದೇಶಗಳಲ್ಲಿ ಟೆಸ್ಲಾದ ಫಾಕ್ಟರಿಗಳು ಇದೆ. ಇನ್ನು ಜರ್ಮನಿಯ ಬೆರ್ಲಿನ್‌ನಲ್ಲಿ ಮತ್ತು ಚೀನಾದ ಶಾಂಘೈನಲ್ಲಿಯೂ ಈ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯ ಫ್ಯಾಕ್ಟರಿ ಇದೆ.
ಈ ತಿಂಗಳ ಆರಂಭದಲ್ಲಿ ಹಿರಿಯ ಟೆಸ್ಲಾ ಕಾರ್ಯನಿರ್ವಾಹಕರ ತಂಡವು ಎಲೆಕ್ಟ್ರಾನಿಕ್ ವಾಹನದ ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಚೀನಾದ ಆಚೆಗೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಯೋಜನೆ ರೂಪಿಸಿದೆ. ಅದಕ್ಕಾಗಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಬ್ಲೂಬರ್ಗ್ ವರದಿಯ ಪ್ರಕಾರ ಟೆಸ್ಲಾದ ಕಾರು ಮಾದರಿಯ ಸ್ಥಳೀಯ ಘಟಕಗಳ ನಿರ್ಮಾಣಕ್ಕಾಗಿ ಭಾರತದ ಹಿರಿಯ ನಾಯಕತ್ವದೊಂದಿಗೆ ಚರ್ಚೆಗಳು ನಡೆಯುತ್ತಿದೆ. ಟೆಸ್ಲಾದ ಹೊಸ ಕಚೇರಿಗಾಗಿ ಭಾರತ ಆಸಕ್ತಿದಾಯಕ ಸ್ಥಳವಾಗಿದೆಯೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಎಂಬ ಉತ್ತರ ನೀಡಿದ ಟೆಸ್ಲಾದ ಮುಖ್ಯಸ್ಥ ಎಲಾನ್ ಮಸ್ಕ್ ಕೊಂಚ ಹೊತ್ತಾದ ಬಳಿಕ ಮಾತು ಮುಂದುವರಿಸಿದ್ದಾರೆ.
ಸರ್ಕಾರದೊಂದಿಗಿನ ಸವಾಲುಗಳ ಬಗ್ಗೆ ಮಸ್ಕ್ ಉಲ್ಲೇಖ
ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಎಲಾನ್ ಮಸ್ಕ್‌ಗೆ ಹಲವಾರು ಸವಾಲುಗಳು ಸರ್ಕಾರದ ಕಡೆಯಿಂದ ಎದುರಾಗಿದೆ ಎಂದು ತಿಳಿಸಿದ್ದಾರೆ. "ಟೆಸ್ಲಾ ಸದ್ಯ ಭಾರತದಲ್ಲಿ ಇಲ್ಲ, ಸರ್ಕಾರದೊಂದಿಗೆ ಇರುವ ಕೆಲವು ಸವಾಲುಗಳಿಂದಾಗಿ ಭಾರತದಲ್ಲಿ ಟೆಸ್ಲಾ ಆರಂಭ ಮಾಡಲಾಗಿಲ್ಲ," ಎಂದು ಹೇಳಿದ್ದಾರೆ.
2021 ರಲ್ಲಿ ಭಾರತದಲ್ಲಿ ನೇಮಕಗೊಂಡ ತಂಡವನ್ನು ಕಳೆದ ವರ್ಷ ಮಧ್ಯ-ಪ್ರಾಚ್ಯ ಮತ್ತು ದೊಡ್ಡ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳ ಮೇಲೆ ಗಮನ ಹರಿಸುವ ಮೇಲೆ ಕೇಂದ್ರಿಕರಿಸಲು ನಿಯೋಜನೆ ಮಾಡಲಾಗಿದೆ. ಹಲವಾರು ಉನ್ನತ ಭಾರತೀಯ ನಾಯಕರು ಟೆಸ್ಲಾ ಸಂಸ್ಥೆಯನ್ನು ಭಾರತಕ್ಕೆ ಕರೆತರಲು ಮಸ್ಕ್‌ಗೆ ಪದೇ ಪದೇ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಪ್ರಸ್ತುತ, ವಿಮೆ ಮತ್ತು ಶಿಪ್ಪಿಂಗ್ ವೆಚ್ಚಗಳನ್ನು ಒಳಗೊಂಡಂತೆ 40,000 ಡಾಲರ್‌ಗಿಂತ (30 ಲಕ್ಷ ರೂಪಾಯಿ) ಹೆಚ್ಚಿನ ಬೆಲೆಯ ಆಮದು ಮಾಡಿದ ಕಾರುಗಳ ಮೇಲೆ ಭಾರತವು ಶೇಕಡ 100ರಷ್ಟು ತೆರಿಗೆಯನ್ನು ವಿಧಿಸುತ್ತದೆ. ಇನ್ನು 40,000 ಡಾಲರ್‌ಗಿಂತ ಕಡಿಮೆ ಮೌಲ್ಯದ ಕಾರುಗಳ ಮೇಲೆ ಶೇಕಡ 60ರಷ್ಟು ಆಮದು ತೆರಿಗೆಯನ್ನು ವಿಧಿಸಲಾಗುತ್ತದೆ.
40,000 ಡಾಲರ್ (30 ಲಕ್ಷ ರೂಪಾಯಿಗೂ ಅಧಿಕ ಮೊತ್ತ) ಟೆಸ್ಲಾ ಮಾಡೆಲ್ 3 ಯುಎಸ್‌ನಲ್ಲಿ ಕೈಗೆಟುಕಬಹುದು. ಆದರೆ ಭಾರತದಲ್ಲಿ ಆಮದು ಸುಂಕಗಳೊಂದಿಗೆ, ಸುಮಾರು 60 ಲಕ್ಷ ರೂಪಾಯಿಗಳ ನಿರೀಕ್ಷಿತ ಬೆಲೆ ಇರಲಿದೆ. ಅಂದರೆ ಟೆಸ್ಲಾ ಭಾರತದಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಾಗದು.
ನರೇಂದ್ರ ಮೋದಿಯನ್ನು ಫಾಲೋ ಮಾಡಿದ ಮಸ್ಕ್
ಟ್ವಿಟ್ಟರ್ ಮುಖ್ಯಸ್ಥ, ಬಿಲಿಯನೇರ್ ಮತ್ತು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುವುದನ್ನು ಆರಂಭಿಸಿದ್ದಾರೆ. ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಒಟ್ಟಾಗಿ ಸುಮಾರು 195 ಮಂದಿಯನ್ನು ಫಾಲೋ ಮಾಡುತ್ತಿದ್ದು ಈ ಪೈಕಿ ಮೋದಿ ಕೂಡಾ ಒಬ್ಬರಾಗಿದ್ದಾರೆ. ಈ ಹಿಂದೆ ಎಲಾನ್ ಮಸ್ಕ್‌ನ ಫಾಲೋವರ್‌ಗಳ ಪಟ್ಟಿಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಇರಲಿಲ್ಲ. ಆದರೆ ಈಗ ಕಾಣಿಸಿಕೊಂಡಿದ್ದು, ಟೆಸ್ಲಾ ಭಾರತಕ್ಕೆ ಬರುತ್ತಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications