2027 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಸಮೂಹದ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ ಮಂಗಳವಾರ ಪುನರುಚ್ಚರಿಸಿದ್ದಾರೆ. ಈ ಹಿಂದೆಯೂ ಭಾರತದ ಆರ್ಥಿಕತೆ ಬೆಳವಣಿಗೆ ಬಗ್ಗೆ ಸೌಮ್ಯ ಕಾಂತಿ ಘೋಷ್ ಮಾತನಾಡಿದ್ದರು.
ಭಾರತೀಯ ಆರ್ಥಿಕತೆಯು ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಯುಎಸ್, ಎರಡನೇ ಸ್ಥಾನದಲ್ಲಿ ಚೀನಾ, ಮೂರನೇ ಸ್ಥಾನದಲ್ಲಿ ಜಪಾನ್, ನಾಲ್ಕನೇ ಸ್ಥಾನದಲ್ಲಿ ಜರ್ಮನಿ, ಆ ಬಳಿಕದ ಸ್ಥಾನದಲ್ಲಿ ಭಾರತವಿದೆ. 2014ರಲ್ಲಿ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. 2022 ರಲ್ಲಿ, ಭಾರತವು ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಯಿತು.

2027 ರ ವೇಳೆಗೆ ಭಾರತ 3ನೇ ಸ್ಥಾನಕ್ಕೆ
"ಪ್ರಧಾನಿ (ಕೆಂಪುಕೋಟೆಯಲ್ಲಿ) ಮಾಡಿದ ಭಾಷಣವು ಕಳೆದ ದಶಕದಲ್ಲಿ ಭಾರತೀಯ ಆರ್ಥಿಕತೆಯು ತ್ವರಿತವಾಗಿ ಬದಲಾವಣೆ ಕಂಡಿರುವುದನ್ನು ಒತ್ತಿಹೇಳುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ಅಂದರೆ 2027ರ ವೇಳೆಗೆ ಭಾರತವು ಯುಎಸ್, ಚೀನಾದ ಬಳಿಕ ಮೂರನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗುವ ಸಾಧ್ಯತೆಯಿದೆ," ಎಂದು ಎಸ್‌ಬಿಐನ ಘೋಷ್ ಹೇಳಿರುವುದಾಗಿ ಡಿಡಿ ನ್ಯೂಸ್ ಸುದ್ದಿ ವಾಹಿನಿಯು ತಿಳಿಸಿದೆ.
"ಭಾರತವು ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದರೆ ಅದು ಭಾರತಕ್ಕೆ ಅತೀ ದೊಡ್ಡ ಘನತೆಯ ವಿಚಾರವಾಗಲಿದೆ. ಪ್ರಧಾನಮಂತ್ರಿಯವರು ಸೂಚಿಸಿದಂತೆ, ಇಂದು ಭಾರತದ ಯಶಸ್ಸು ಅದರ 140 ಕೋಟಿ ಜನರಲ್ಲಿ ಮಹತ್ವಾಕಾಂಕ್ಷೆಯುಳ್ಳವರು, ಭವಿಷ್ಯಕ್ಕಾಗಿ ಕಾಯುತ್ತಿರುವವರು ಮತ್ತು ಉತ್ತಮ ನಾಳೆಗಾಗಿ ತಮ್ಮನ್ನು ತಾವು ನಿರಂತರವಾಗಿ ಹುರಿದುಂಬಿಸಿಕೊಳ್ಳುವವರಲ್ಲಿ ಅಡಗಿದೆ," ಎಂದು ಎಸ್‌ಬಿಐ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ ಹೇಳಿದ್ದಾರೆ.
ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ
"ಇಂದು ಮಹಿಳೆ ನೇತೃತ್ವದಲ್ಲಿಯೇ ದೇಶದ ಅಭಿವೃದ್ಧಿ ನಡೆಯುತ್ತಿದೆ ಎಂಬುವುದು ಸಹಜವಾದ ಸತ್ಯ ವಿಚಾರವಾಗಿದೆ. ಪ್ರಧಾನಮಂತ್ರಿ ಒತ್ತಿಹೇಳಿದಂತೆ, ಮಹಿಳೆಯರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಸುತ್ತಿರುವುದನ್ನು ನೀವು ನೋಡಬಹುದು. ನೀವು ಎಲ್ಲಿ ನೋಡಿದರೂ ಅಭಿವೃದ್ಧಿ ಕಾಣಬಹುದು," ಎಂದು ವಿವರಿಸಿದ್ದಾರೆ.
"ಭಾರತವು ನಿಜವಾಗಿ ಎಲ್ಲಿ ಮುನ್ನಡೆಯುತ್ತಿದೆ ಎಂದು ನೀವು ನೋಡಬಹುದು. ಭಾರತದ ಬೆಳವಣಿಗೆಯು ಒಂದು ದೇಶ ಮಾಡುತ್ತಿರುವ ಪ್ರಶಂಸನೀಯ ಸಾಧನೆಯಾಗಿದೆ. 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಪ್ರಧಾನಿ ಒತ್ತಿಹೇಳಿದರೆ, ಎಲ್ಲಾ ಭಾರತೀಯರು ಒಟ್ಟಾಗಿ ಕೈ ಹಿಡಿಯುವ ಪ್ರಯತ್ನವಾಗಬೇಕು," ಎಂದು ಹುರಿದುಂಬಿಸಿದ್ದಾರೆ.
"ನಮ್ಮ ದೇಶವು ಎಂದಿಗೂ ಕೂಡ ವೈವಿಧ್ಯತೆಯಲ್ಲಿ ಏಕತೆಯ ನಿಜವಾದ ಪ್ರತಿಬಿಂಬವಾಗಿರುವ ದೇಶವಾಗಿದೆ. ಭಾರತದ ಬೆಳವಣಿಗೆಯು ಭಾರತವು ತನ್ನ ನೂರು ವರ್ಷಗಳ ಸ್ವಾತಂತ್ರ್ಯದಲ್ಲಿ ಪಡೆಯಬಹುದಾದ ಅತ್ಯುತ್ತಮ ಕೊಡುಗೆಯಾಗಿದೆ," ಎಂದು ಅಭಿಪ್ರಾಯಿಸಿದರು.


Click it and Unblock the Notifications