ನವದೆಹಲಿ, ಏಪ್ರಿಲ್ 28: "ಡಿಜಿಟಲ್ ಇಂಡಿಯಾದ ಗುರಿಗಳನ್ನು ತಲುಪಲು ಭಾರತಕ್ಕೆ ಮೂರು ಬಲಿಷ್ಠ ಟೆಲಿಕಾಂ ಕಂಪನಿಗಳ ಅಗತ್ಯವಿದೆ" ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ.
ವೊಡಾಫೋನ್ ಐಡಿಯಾ ಎಫ್‌ಪಿಒ ಪಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖಾರಾ, "ಇದು ಸಣ್ಣ ಬೆಳವಣಿಗೆಯಲ್ಲ, ಉತ್ತಮವಾದ ವಿಚಾರವಾಗಿದ್ದು, ಸಹಜವಾಗಿ ರಾಷ್ಟ್ರಕ್ಕೆ ಕನಿಷ್ಠ ಮೂರು ಟೆಲಿಕಾಂ ಆಪರೇಟರ್‌ಗಳ ಅಗತ್ಯವಿದೆ. ಇದು ಭಾರತ ಸರ್ಕಾರದ ಆಶಯವಾಗಿತ್ತು, ಆದರೆ ಕುಮಾರ್ ಮಂಗಲಂ ಬಿರ್ಲಾ ಅವರು ದಾರಿ ತೋರಿಸದ ಹೊರತು ಇದೆಲ್ಲವೂ ಆಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ " ಎಂದು ಹೇಳಿದ್ದಾರೆ.

ವೊಡಾಫೋನ್ ಈ ವಾರದ ಆರಂಭದಲ್ಲಿ ಮಾರುಕಟ್ಟೆಯಲ್ಲಿ 18,000 ಕೋಟಿ ರೂ. ಏರಿಕೆ ಕಂಡಿದೆ. ಈ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಲೇ ಇದೆ ಮತ್ತು ಡಿಜಿಟಲೀಕರಣದ ಬೆನ್ನೆಲುಬಾಗಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
"ನನ್ನ ಪ್ರಕಾರ ಡಿಜಿಟಲ್ ಜೀವನ ವಿಧಾನವಾಗಿದೆ, ಮತ್ತು ದೇಶದಲ್ಲಿ ಇರುವ ಅವಕಾಶಗಳೊಂದಿಗೆ, ನಮ್ಮ ಸ್ವಂತ ಹೂಡಿಕೆದಾರರು ಇಲ್ಲದಿದ್ದರೆ, ಈ ವಲಯವು ವಿದೇಶಿ ಹೂಡಿಕೆದಾರರಿಗೆ ಹೋಗುತ್ತದೆ. ನಾವು ವಿದೇಶಿ ಹೂಡಿಕೆದಾರ ಅವರ ವಿರುದ್ಧ ಅಲ್ಲ, ನಾವು ಅವರನ್ನು ಸ್ವಾಗತಿಸುತ್ತೇವೆ, ಆದರೆ ಅದೇ ಸಮಯದಲ್ಲಿ, ಹೆಮ್ಮೆಯ ಭಾರತೀಯರಾಗಿ, ನಾವು ಸಹ ಕ್ಷೇತ್ರದಲ್ಲಿ ಕಂಡುಬರುವ ಬೆಳವಣಿಗೆಯ ಫಲಾನುಭವಿಗಳಾಗಬೇಕು ಎಂದು ಖಾರಾ ಹೇಳಿದರು.
ಸಂಪೂರ್ಣ ಚಂದಾದಾರರಾಗಿರುವ ಭಾಗದಲ್ಲಿ ( Vi FPO ಯ ) ಚಿಲ್ಲರೆ ಭಾಗವಹಿಸುವಿಕೆಯು ಹೂಡಿಕೆದಾರರು ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಹೊಂದಿರುವ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.
ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಮಾತನಾಡಿ, 18,000 ಕೋಟಿ ರೂ.ಗಳನ್ನು ಯಶಸ್ವಿಯಾಗಿ ಸಂಗ್ರಹಿಸಿರುವ ವೊಡಾಫೋನ್ ಐಡಿಯಾ, ದೇಶಕ್ಕೆ ಮೂರು ಪ್ರಬಲ ವೈರ್‌ಲೆಸ್ ಟೆಲಿಫೋನ್ ನೆಟ್‌ವರ್ಕ್‌ಗಳ ಅಗತ್ಯವಿರುವುದರಿಂದ ಸ್ಮಾರ್ಟ್ ಪುನರಾಗಮನವನ್ನು ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
"Vi ಕೇವಲ ಟೆಲಿಕಾಂ ಕಂಪನಿಯಲ್ಲ, ಇದು 215 ಮಿಲಿಯನ್ ಬಳಕೆದಾರರನ್ನು ಮತ್ತು ಸುಮಾರು 8,000 MHz ಸ್ಪೆಕ್ಟ್ರಮ್ ಹೊಂದಿರುವ ರಾಷ್ಟ್ರೀಯ ಆಸ್ತಿಯಾಗಿದೆ. ಈ ನಿಧಿಸಂಗ್ರಹಣೆ ಮತ್ತು ಬ್ಯಾಂಕ್‌ಗಳಿಂದ ನಿರಂತರ ಬೆಂಬಲದ ಹಿನ್ನೆಲೆಯಲ್ಲಿ, Vi ಒಂದು ಸ್ಮಾರ್ಟ್ ಟರ್ನ್‌ಅರೌಂಡ್ ಅನ್ನು ಪ್ರದರ್ಶಿಸುತ್ತದೆ. ಈ ಕ್ಷಣವು, ವೊಡಾಫೋನ್ ಐಡಿಯಾ 2.0 ನ ಆರಂಭವನ್ನು ಗುರುತಿಸುತ್ತದೆ. ಭಾರತಕ್ಕೆ ಪುನಶ್ಚೇತನಗೊಂಡ ವಿಐ ಮುಖ್ಯವಾಗಿದೆ ಎಂದು ನಾನು ನಂಬುತ್ತೇನೆ" ಬಿರ್ಲಾ ಹೇಳಿದರು.
Vi ಯ ಇತ್ತೀಚಿನ ಬೆಳವಣಿಗೆಯ ಕ್ಯಾಪೆಕ್ಸ್ ತನ್ನ 17 ಪ್ರಮುಖ ಮಾರುಕಟ್ಟೆಗಳಲ್ಲಿ ನೆಟ್‌ವರ್ಕ್ ಮತ್ತು ತಾಂತ್ರಿಕ ಅಪ್‌ಗ್ರೇಡ್‌ಗೆ ದಾರಿ ಮಾಡಿಕೊಡುತ್ತದೆ, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. . ಮಾತ್ರವಲ್ಲದೇ ಹೂಡಿಕೆಯ ಚಕ್ರವು ಬೆಳವಣಿಗೆಯ ಚಕ್ರವನ್ನು ಪ್ರಚೋದಿಸುತ್ತದೆ.್ ಎಂದು ಹೇಳಿದರು. ಗುರುವಾರ ಬಿಎಸ್‌ಇಯಲ್ಲಿ ವೊಡಾಫೋನ್ ಐಡಿಯಾ ಷೇರು ಶೇಕಡಾ 6.11 ರಷ್ಟು ಏರಿಕೆಯಾಗಿ 13,89 ರೂ. ಆಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications