ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷ (Middle East War), ಇನ್ನೂ ತಣ್ಣಗಾಗಿಲ್ಲ. ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವೆ ದಾಳಿ, ಪ್ರತಿದಾಳಿಗಳು ನಡೆಯುತ್ತಲೇ ಇದೆ. ಅತ್ತ ಇಬ್ಬರ ಜಗಳದಿಂದ ಜಾಗತಿಕ ಮಾರುಕಟ್ಟೆಯೂ ಅಲ್ಲೋಲ ಕಲ್ಲೋಲವಾಗಿದೆ. ಅದರಲ್ಲೂ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಗೊಂಡಿದ್ದು, ಸ್ಟ್ರೇಟ್ ಆಫ್ ಹಾರ್ಮುಜ್ (Straight Of Harmuz) ಮುಚ್ಚುವಿಕೆ ತೈಲ ರಫ್ತು, ಆಮದಿನ ಮೇಲೆ ಭಾರೀ ಪರಿಣಾಮ ಬೀರಿದೆ.

ಹೌದು, ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದಿಂದಾಗಿ ಹಾರ್ಮುಜ್ ನದಿ ಮುಚ್ಚಲ್ಪಟ್ಟಿದೆ. ಈ ಹಿನ್ನೆಲೆ ಭಾರತದ ಕಚ್ಚಾ ತೈಲ ಮತ್ತು ಅನಿಕ ಪೂರೈಕೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಆದ್ರೆ ಹಲವು ವರದಿಗಳ ಪ್ರಕಾರ, ಸದ್ಯಕ್ಕೆ ಭಾರತದಲ್ಲಿ ಯಾವುದೇ ಕಚ್ಚಾ ತೈಲದಲ್ಲಿ ಅಭಾವವಾಗುವುದಿಲ್ಲ ಎನ್ನಲಾಗಿದೆ.
ಉಭಯ ರಾಷ್ಟ್ರಗಳ ಘರ್ಷಣೆ, ಹಾರ್ಮುಜ್ ಜಲಸಂಧಿ ಮೇಲೆ ಭಾರೀ ಅಡ್ಡಿಯಾಗಿದೆ. ಈ ಹಿನ್ನೆಲೆ ಟ್ಯಾಂಕರ್‌ಗಳ ಚಲನೆ ಕಂಡುಬರುತ್ತಿಲ್ಲ. ಅಲ್ಲದೇ ಜಾಗತಿಕ ತೈಲ ಬೆಲೆಗಳು ಸಹ ಭಾರೀ ಏರಿಕೆಯಾಗಿದೆ.
ಭಾರತದಲ್ಲಿ ಹೇಗಿದೆ ಕಚ್ಚಾ ತೈಲ?
ವಾಣಿಜ್ಯ ಸ್ಟಾಕ್ ಮತ್ತು ಸ್ಟ್ರ್ಯಾಟಜಿಕ್ ಪೆಟ್ರೋಲಿಯಂ ರಿಸರ್ವ್ (SPR) ಸೇರಿ ಸುಮಾರು 25 ದಿನಗಳ ಬೇಡಿಕೆಗೆ ಸಾಕಷ್ಟು ಕಚ್ಚಾ ತೈಲ ಸಾಕಾಗುತ್ತದೆ ಎನ್ನಲಾಹಿದೆ. ಇನ್ನೂ ಕೆಲವು ವರದಿಗಳು 100 ಮಿಲಿಯನ್ ಬ್ಯಾರೆಲ್ ಸ್ಟಾಕ್ ಇದ್ದು, ಇದು 40-45 ದಿನಗಳವರೆಗೆ ಸಾಕಾಗುತ್ತದೆ ಎಂದು ಹೇಳಲಾಗಿದೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಮಧ್ಯೆ, ಭಾರತ ಹೊಸ ಶಕ್ತಿ ಮೂಲಗಳನ್ನು ಹುಡುಕುತ್ತಿದೆ ಎನ್ನಲಾಗಿದೆ. ಈಗಾಗಲೇ ಆಸ್ಟ್ರೇಲಿಯಾ, ಕೆನಡಾಗಳು ಅನಿಲ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಹೊಸ ಅನಿಲ ಮಾರುಕಟ್ಟೆಗಳ ಬಗ್ಗೆ ಒಪ್ಪಂದಕ್ಕೆ ನಿರಂತರ ಕಾರ್ಯಾಚರಿಸುತ್ತಿದೆ.
ಭಾರತ ಪ್ರಮುಖ ತೈಲ ಉತ್ಪಾದಕರು, ವ್ಯಾಪಾರಿಗಳು, ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಮತ್ತು ಒಪೆಕ್‌ನೊಂದಿಗೆ ಕಚ್ಚಾ ತೈಲ ಹಾಗೂ ಎಲ್‌ಪಿಜಿ ಖರೀದಿ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ.
ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಬಹುತೇಕ 40% ರಷ್ಟು ಮಾತ್ರ ಹಾರ್ಮುಜ್ ನದಿ ಮೂಲಕ ಸಾಗಿಸಲಾಗುತ್ತದೆ. ಆದ್ರೆ ಇನ್ನುಳಿದವು ರಷ್ಯಾ, ಅಮೆರಿಕಾ, ಆಫ್ರಿಕಾ ಮುಂತಾದ ದೇಶಗಳಲ್ಲಿ ಪಡೆಯಲಾಗುತ್ತದೆ. ಅಲ್ಲದೇ ಈಗಾಗಲೇ ರಷ್ಯಾ ಕಚ್ಚಾ ತೈಲ ಪೂರೈಸಲು ಸಜ್ಜಾಗಿದೆ ಎನ್ನಲಾಗಿದೆ.
ಇನ್ನು ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಯುಎಸ್ ಮತ್ತು ಇರಾನ್ ನಡುವಿನ ವಾರ್ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಫೆಬ್ರವರಿ ಅಂತ್ಯದ ವೇಳೆ ಆರಂಭವಾದ ಯುದ್ಧ, ಇದೀಗ ಮಾರ್ಚ್ ಮೊದಲ ವಾರದಲ್ಲೂ ತೀವ್ರಗೊಳ್ಳುತ್ತಿದೆ. ಇನ್ನು ವರದಿ ಪ್ರಕಾರ ಈವರೆಗೆ ಇರಾನ್‌ನಲ್ಲಿ 2,100 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಅಮೆರಿಕ ಮತ್ತು ಇರಾನ್ ಸಂಘರ್ಷದ ಬೆನ್ನಲ್ಲೇ, ಭಾರತದ ಸಹಾಯಕ್ಕೆ ರಷ್ಯಾ ಆಗಮಿಸಿದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವಂತೆ ಪುಟಿನ್ ಕರೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಅಮೆರಿಕಾ ಕೂಡಾ ಖರೀದಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನಲಾಗಿದೆ. ವರದಿ ಪ್ರಕಾರ, 30 ದಿನಗಳ ಕಾಲ ಭಾರತ ರಷ್ಯಾದಿಂದ ತೈಲ ಖರೀದಿ ಮಾಡಬಹುದು ಎಂದು ಯುಎಸ್ ಸರ್ಕಾರ ಹೇಳಿದೆ.


Click it and Unblock the Notifications