ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತ (India) ಕೂಡಾ ಒಂದು. ಸದ್ಯ ಹಲವಾರು ಪ್ರಗತಿಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವ, ತಾವು ಕೂಡಾ ಬೇರೆ ರಾಷ್ಟ್ರಗಳಿಗೆ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇನ್ನು ಭಾರತದಲ್ಲಿ ಅಕ್ಕಿ ಅಥವಾ ಅನ್ನವನ್ನು ಹಲವು ಪಾಕಪದ್ಧತಿಗಳಲ್ಲಿ ಪ್ರಧಾನ ಆಹಾರವಾಗಿ ಬಳಸಲಾಗುತ್ತದೆ. ಇದೀಗ ಭಾರತ 2024-25 ರಲ್ಲಿ ಅತೀ ಹೆಚ್ಚು ಅಕ್ಕಿ ಉತ್ಪಾದಿಸುವ ದೇಶಗಳಲ್ಲಿ ಭಾರತ ಗುರುತಿಸಿಕೊಂಡಿದೆ.

ಅಕ್ಕಿ ಉತ್ಪಾದನೆಲ್ಲಿ ಅತಿದೊಡ್ಡ ದೇಶ ಭಾರತ!
ಭಾರತವು 2024-25ರ ಆರ್ಥಿಕ ವರ್ಷದಲ್ಲಿ 150.18 ದಶಲಕ್ಷ ಟನ್ ಅಕ್ಕಿ ಉತ್ಪಾದಿಸುವ ಮೂಲಕ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ. ಚೀನಾದ 145.28 ದಶಲಕ್ಷ ಟನ್ ಅಕ್ಕಿ ಉತ್ಪಾದನೆಯನ್ನು ಹಿಂದಿಕ್ಕಿ, ಇದೀಗ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಇನ್ನು ಭಾರತದ ಈ ಅಭೂತಪೂರ್ವ ಸಾಧನೆಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ಘೋಷಣೆ ಮಾಡಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಹಾಣ್, "ಭಾರತವು ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಮೀರಿ, ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿ ಮುನ್ನುಗ್ಗಿದೆ" ಎಂದು ಹೆಮ್ಮೆಯಿಂದ ಘೋಷಣೆ ಮಾಡಿದರು. ಈ ಮಹತ್ವದ ಮೈಲಿಗಲ್ಲನ್ನು ಭಾರತದ ಕೃಷಿ ಕ್ಷೇತ್ರದ ಬೃಹತ್ ಪ್ರಗತಿ ಎಂದು ಚೌಹಾಣ್ ಬಣ್ಣಿಸಿದರು.
ಇದೇ ಸಂದರ್ಭದಲ್ಲಿ, ಸಚಿವ ಚೌಹಾಣ್ 25 ವಿವಿಧ ಬೆಳೆಗಳ 184 ಹೊಸ ತಳಿಗಳನ್ನು ಸಹ ಪರಿಚಯಿಸಿದರು. ಇವುಗಳಲ್ಲಿ 122 ಧಾನ್ಯ, 24 ಹತ್ತಿ (22 ಬಿಟಿ ಹತ್ತಿ ಸಹಿತ), 13 ಎಣ್ಣೆಕಾಳು, 11 ಮೇವು, ಆರು ಬೇಳೆಕಾಳು, 6 ಕಬ್ಬು ಹಾಗೂ ತಲಾ ಒಂದು ಸೆಣಬು ಮತ್ತು ತಂಬಾಕು ತಳಿಗಳು ಸೇರಿವೆ ಎನ್ನಲಾಗಿದೆ.
ರೈತರ ಆದಾಯ ಹೊಸ ಬೆಳೆಗಳು
ಹೊಸದಾಗಿ ಬಿಡುಗಡೆಯಾದ ಈ ಅಧಿಕ ಇಳುವರಿ ಬೀಜಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ, ರೈತರ ಆದಾಯವನ್ನು ಸಹ ಹೆಚ್ಚಿಸಲಿದೆ ಎಂದು ಸಚಿವ ಚೌಹಾಣ್ ಹೇಳಿದರು. ಅಲ್ಲದೇ ಈ ತಳಿಗಳನ್ನು ಶೀಘ್ರದಲ್ಲೇ ರೈತರಿಗೆ ತಲುಪುವಂತೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅತ್ಯುತ್ತಮ ಆದಾಯ ಗಳಿಸಿದ ಭಾರತ!
ಇನ್ನು 2024-25 ರಲ್ಲಿ ಭಾರತ ಕೃಷಿ ಉತ್ಪಾದನೆಯಲ್ಲಿ ಉತ್ತಮ ಆದಾಯ ಗಳಿಸಿದೆ ಎಂದು ವರದಿಯಾಗಿದ. ಅಂದರೆ ಭಾರತ 4,50,840 ಕೋಟಿ ರೂ. ಮೌಲ್ಯದ ಕೃಷಿ ಉತ್ಪನ್ನವನ್ನು ರಫ್ತು ಮಾಡಿದೆ. ಅದರಲ್ಲಿ ಅಕ್ಕಿಯ ಪಾಲು ಶೇ.24% ರಷ್ಟಿದೆ ಎಂದು ಹೇಳಲಾಗಿದೆ. ಅದರಲ್ಲೂ ಭಾರತ ಬಾಸ್ಮತಿ ಮತ್ತು ವಿವಿಧ ರೀತಿಯ ಅಕ್ಕಿಗಳನ್ನು ರಫ್ತು ಮಾಡುವ ಮೂಲಕ ಭಾರತ ಒಂದು ವರ್ಷದಲ್ಲಿ 1,05,720 ಕೋಟಿ ರೂ. ಆದಾಯ ದಾಖಲಿಸಿದೆ ಎನ್ನಲಾಗಿದೆ. ಈ ಮೂಲಕ ಭಾರತದ ಆದಾಯಕ್ಕೆ ಕೃಷಿ ಉತ್ಪಾದನೆ, ಅಕ್ಕಿ ಉತ್ಪಾದನೆ ಎಷ್ಟು ಪ್ರಯೋಜನವಾಗಿದೆ ಎಂದು ತಿಳಿಯಬಹುದು.
ಈಗಾಗಲೇ ಭಾರತ, ಚೀನಾವನ್ನು ಹಿಂದಿಕ್ಕಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದೀಗ ಹೊಸ ಬೆಳೆಗಳನ್ನು ಪರಿಚಯಿಸಿದ್ದು, ಇದು ರೈತರಿಗೆ ಮತ್ತಷ್ಟು ಆದಾಯ ತಂದುಕೊಡಲಿದೆ.


Click it and Unblock the Notifications