ತನ್ನ ದಕ್ಷ ಮತ್ತು ಅತ್ಯುತ್ತಮ ಸೇವೆ ಮೂಲಕ ಭಾರತೀಯ ಅಂಚೆ ಕಚೇರಿ (Post Office) ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಭಾರತ್ ಪೋಸ್ಟ್ (India Post) ತನ್ನ ಗ್ರಾಹಕರಿಗೆ ಹೆಚ್ಚು ವೇಗವಾದ ಮತ್ತು ವಿಶ್ವಾಸಾರ್ಹ ಡೆಲಿವರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಮಹತ್ವದ ಹೆಜ್ಜೆ ಇಟ್ಟಿದೆ. ಇಂಡಿಯಾ ಪೋಸ್ಟ್ 24 ಸ್ಪೀಡ್ ಪೋಸ್ಟ್ ಮತ್ತು 48 ಸ್ಪೀಡ್ ಪೋಸ್ಟ್ ಎಂಬ ಹೊಸ ಪ್ರೀಮಿಯಂ ಸೇವೆಗಳನ್ನು (24 Hour Speed Post, 48 Hour Speed Post Service) ಪರಿಚಯಿಸಿದೆ.

ಖಾಸಗಿ ಕೊರಿಯರ್ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳೊಂದಿಗೆ ಸ್ಪರ್ಧಿಸಲು ಇಂಡಿಯಾ ಪೋಸ್ಟ್ ಪ್ರೀಮಿಯಂ ಸೇವೆಗಳನ್ನು ಪರಿಚಯಿಸಿದೆ. ಕೇಂದ್ರವು ನಿಯಂತ್ರಣಾ ಚೌಕಟ್ಟಿಗೆ ತಿದ್ದುಪಡಿ ತಂದು, '24 ಸ್ಪೀಡ್ ಪೋಸ್ಟ್', '48 ಸ್ಪೀಡ್ ಪೋಸ್ಟ್' (ದಾಖಲೆಗಳಿಗೆ) ಹಾಗೂ '24 ಸ್ಪೀಡ್ ಪೋಸ್ಟ್ ಪಾರ್ಸೆಲ್' ಸೌಲಭ್ಯಗಳನ್ನು ಜಾರಿಗೆ ತರಲು ಅನುಮೋದಿಸಿದೆ. ಇದು ವೇಗದ ಪೋಸ್ಟ್ ವಿತರಣೆಗೆ ಸಹಕಾರಿಯಾಗಲಿದೆ. ಈ ಮೂಲಕ ಅಗತ್ಯ ದಾಖಲೆಗಳನ್ನು ಮತ್ತು ಪಾರ್ಸೆಲ್‌ಗಳನ್ನು ವೇಗವಾಗಿ ತಲುಪಿಸಲಾಗುತ್ತದೆ.
ಪೋಸ್ಟ್ ಆಫೀಸ್‌ನಿಂದ ವಿಶೇಷ ಕ್ರಮ:
ಪೋಸ್ಟ್ ಆಫೀಸ್ ಇದೀಗ 3 ರೀತಿಯ ಹೊಸ ಪ್ರೀಮಿಯಂ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
- 24 ಸ್ಪೀಡ್ ಪೋಸ್ಟ್: ಒಂದೇ ದಿನದಲ್ಲಿ ಡೆಲಿವರಿ ಗ್ಯಾರಂಟಿ. ಅಂದರೆ ಒಂದೇ ದಿನದಲ್ಲಿ, 24 ಗಂಟೆಯೊಳಗಡೆ ತಲುಪಿಸುವ ಸೇವೆ ಇದಾಗಿದೆ.
- 48 ಸ್ಪೀಡ್ ಪೋಸ್ಟ್: 2 ದಿನದೊಳಗೆ ಡೆಲಿವರಿ ಗ್ಯಾರಂಟಿ.
- 24 ಸ್ಪೀಡ್ ಪೋಸ್ಟ್ ಪಾರ್ಸೆಲ್: ಅಂದರೆ ಪಾರ್ಸೆಲ್‌ಗಳನ್ನೂ ಒಂದೇ ದಿನದಲ್ಲಿ ಡೆಲಿವರಿ ಸೌಲಭ್ಯ ಒದಗಿಸುವುದು ಇದರ ಉದ್ದೇಶ.
ಈ ನಗರಗಳಲ್ಲಿ ಮಾತ್ರ ಸೌಲಭ್ಯ:
ಸದ್ಯ ಆರಂಭಿಕ ಹಂತದಲ್ಲಿ 6 ಪ್ರಮುಖ ಮಹಾನಗರಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.
- ದೆಹಲಿ
- ಮುಂಬೈ
- ಚೆನ್ನೈ
- ಕೋಲ್ಕತ್ತಾ
- ಬೆಂಗಳೂರು
- ಹೈದರಾಬಾದ್
ಹೀಗೆ ಒಟ್ಟು 6 ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಇಟ್ಟುಕೊಂಡಿದೆ.
ಸೇವೆಯ ವಿಶೇಷತೆಗಳೇನು?
"24 ಸ್ಪೀಡ್ ಪೋಸ್ಟ್" ಸೇವೆ ಆರು ಮಹಾನಗರಗಳಲ್ಲಿ ಮಾರ್ಚ್ 17 ಅಂದರೆ, ಇಂದಿನಿಂದ ಆರಂಭವಾಗಿದೆ. ಇನ್ನು ಇದು ಓಟಿಪಿ ಆಧಾರಿತ ಸುರಕ್ಷಿತ ಡೆಲಿವರಿ, ಎಂಡ್ ಟು ಎಂಡ್ ಟ್ರ್ಯಾಕಿಂಗ್ ವ್ಯವಸ್ಥೆ, ಎಸ್‌ಎಮ್‌ಎಸ್ ಮೂಲಕ ಪಾರ್ಸೆಲ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಹಿಂದೆಯೇ ಒಮ್ಮೆ ಯೋಜನೆ ಬಗ್ಗೆ ಘೋಷಣೆ ಮಾಡಿದ್ದರು. ಖಾಸಗಿ ಕೊರಿಯರ್ ಕಂಪನಿಗಳೊಂದಿಗೆ ಸ್ಪರ್ಧಿಸುವ ಉದ್ದೇಶದಿಂದ, ಭಾರತ್ ಪೋಸ್ಟ್‌ನ ಲಾಜಿಸ್ಟಿಕ್ಸ್ ಸೇವೆಯನ್ನು ಆಧುನೀಕರಿಸುವ ಉದ್ದೇಶದಿಂದ ಈ ಮಹತ್ವದ ಕ್ರಮ ಜಾರಿಗೆ ತರಲಾಗಿದೆ. ಈ ಮೂಲಕ ಗ್ರಾಹಕರು ಇನ್ಮೇಲೆ ಅತ್ಯಂತ ವಿಶ್ವಾಸಾರ್ಹ ಮತ್ತು ವೇಗವಾದ ಸೇವೆಯನ್ನು ಪೋಸ್ಟ್ ಆಫೀಸ್ ಮೂಲಕ ಪಡೆಯಲು ಸಾಧ್ಯವಾಗಲಿದೆ.
ಇನ್ನು ಈ ಹೊಸ ಸೇವೆ ಇಂದಿನಿಂದ (ಮಾರ್ಚ್ 17, 2026) ಆರಂಭವಾಗಲಿದೆ ಎಂದು ಭಾರತ್ ಪೋಸ್ಟ್ ತಿಳಿಸಿದೆ. ಅಲ್ಲದೇ ಈ ಹೊಸ ಸೇವೆಯಲ್ಲಿ ರೀಫಂಡ್ ಆಯ್ಕೆಯೂ ಲಭ್ಯವಿದೆ. ಡೆಲಿವರಿ ಒಂದು ವೇಳೆ ತಡವಾದರೆ ಮನಿ-ಬ್ಯಾಕ್ ಗ್ಯಾರಂಟಿ ಆಯ್ಕೆಯೂ ಇರಲಿದೆ ಎನ್ನಲಾಗಿದೆ.


Click it and Unblock the Notifications