ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಸಂಘರ್ಷದ ನಡುವೆ, ಭಾರತದ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಉತ್ತರ ಭಾರತದ 32 ವಿಮಾನ ನಿಲ್ದಾಣಗಳನ್ನು ಇದೀಗ ಮತ್ತೆ ಕಾರ್ಯಾಚರಣೆಗೊಳಪಡಿಸಲಾಗಿದೆ.

ಹೌದು, ಪಾಕ್ ಗಡಿಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಭೀಕರವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಎರಡು ದಿನದ ಹಿಂದೆ, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಹೊಸ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಗಡಿಪ್ರದೇಶದ ಭದ್ರತಾ ಪರಿಸ್ಥಿತಿಯಲ್ಲಿ ಸ್ವಲ್ಪ ಸ್ಥಿರತೆ ಕಂಡುಬಂದಿದೆ. ಹೀಗಾಗಿಯೇ ನಾಗರಿಕ ವಿಮಾನಯಾನ ಇಲಾಖೆ ತನ್ನ ನಿಯಂತ್ರಣದಲ್ಲಿರುವ, ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ಪುನರಾರಂಭಿಸಿದೆ.
ತುರ್ತು ಪರಿಸ್ಥಿತಿಯ ಅನಿವಾರ್ಯ:
ಇನ್ನು ವಿಮಾನ ನಿಲ್ದಾಣಗಳ ತಾತ್ಕಾಲಿಕ ಮುಚ್ಚುವಿಕೆಯ ಹಿನ್ನೆಲೆ, ಈ ಬಾರಿ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಆದರೆ ತಮ್ಮ ಯೋಜಿತ ಪ್ರಯಾಣಗಳನ್ನು ಮಾತ್ರ ರದ್ದುಗೊಳಿಸುವ ಪರಿಸ್ಥಿತಿ ಬಂದೊದಗಿಬಿಡ್ತು. ಹೀಗಾಗಿಯೇ ಹಲವು ವಿಮಾನ ಸಂಸ್ಥೆಗಳು ತಮ್ಮ ವಿಮಾನಯಾನವನ್ನು ರದ್ದುಪಡಿಸಿದವು. ಇನ್ನೂ ಕೆಲವು ಮಾರ್ಗವನ್ನು ಬದಲಾಯಿಸಿದವು. ಇಂತಹ ಸ್ಥಿತಿಯು ತುರ್ತು ವೈದ್ಯಕೀಯ ಸೇವೆಗಳ ಬಳಕೆಗೆ ಗಡಿಬದಿಯ ಜನರಿಗೆ ಹೆಚ್ಚಿನ ತೊಂದರೆಯನ್ನುಂಟುಮಾಡಿತು. ತಾತ್ಕಾಲಿಕವಾಗಿ ಗಗನಮಾರ್ಗವೂ ನಿರ್ಬಂಧಿತವಾಯಿತು. ಆದರೆ ಈಗ ಮತ್ತೆ ಈ ವಿಮಾನ ನಿಲ್ದಾಣಗಳು ಓಪನ್ ಆಗಿರುವುದರಿಂದ, ಪ್ರಯಾಣಿಕರಿಗೆ ನಿರಾಳವಾಗಿ ವಿಮಾನ ಸಂಚಾರ ಉಪಯೋಗಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪುನಾರಂಭಗೊಂದ ವಿಮಾನ ನಿಲ್ದಾಣಗಳು ಎಲ್ಲಿಗೆ ಸೇರಿದ್ದು..?
ಇನ್ನು ತಾತ್ಕಾಲಿಕ ಸ್ಥಗಿತದಿಂದ ಪುನರಾರಂಭಗೊಂಡ 32 ವಿಮಾನ ನಿಲ್ದಾಣಗಳು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಲೆಹ್, ಥೋಯಿಸ್, ಪಹಲ್ಗಾಮ್, ಅವಂತಿಪುರ ಸೇರಿದಂತೆ ಗಡಿಪ್ರದೇಶದ ಮಹತ್ವಪೂರ್ಣ ನಿಲ್ದಾಣಗಳು ಸೇರಿವೆ. ಪಂಜಾಬ್‌ನ ಅಮೃತಸರ, ಬಟಿಂಡಾ, ಅಂಬಾಲಾ, ಪಟಿಯಾಲಾ ಹಾಗೂ ಆದಂಪುರ ಕೂಡ ಈ ಪಟ್ಟಿಯಲ್ಲಿ ಸೇರಿವೆ. ರಾಜಸ್ಥಾನದಲ್ಲಿ ಜೈಸಲ್ಮೇರ್, ಜೋಧ್‌ಪುರ್, ಬಿಕಾನೇರ್, ಕಿಶನ್‌ಗಢ್ ಸೇರಿದಂತೆ ಪ್ರವಾಸೋದ್ಯಮದ ಮುಖ್ಯ ಸ್ಥಳಗಳು ನಿಲ್ದಾಣ ಪುನರಾರಂಭದಿಂದ ಲಾಭ ಪಡೆಯಲಿವೆ. ಗುಜರಾತ್‌ನ ಭುಜ್, ಪೋರಬಂದರ್, ಜಾಮ್‌ನಗರ, ರಾಜ್‌ಕೋಟ್ ನಿಲ್ದಾಣಗಳೂ ಈ ಪೈಪೋಟಿಗೆ ಸೇರಿವೆ.
ಇವುಗಳ ಪೈಕಿ ಕೆಲವಿವೆ ಸೈನಿಕ ಉದ್ದೇಶಗಳಿಗೆ ಸಹ ಬಳಸಲಾಗುತ್ತಿದ್ದು, ಭದ್ರತಾ ದೃಷ್ಟಿಯಿಂದ ಮುಚ್ಚಲಾಗಿದ್ದವು. ಇನ್ನು ಉತ್ತರಾಖಂಡ್‌ನ ಡೆಹ್ರಾಡೂನ್, ಪಂತನಗರ ಮತ್ತು ಹಿಮಾಚಲ ಪ್ರದೇಶದ ಶಿಮ್ಲಾ, ಭುಂತಾರ್, ಕಂಗ್ರಾ ನಿಲ್ದಾಣಗಳೂ ಸೇರಿದಂತೆ ಪೂರ್ವಭಾಗದ ಕೆಲವು ರಾಜ್ಯಗಳ ಸಂಪರ್ಕ ಮತ್ತೆ ಸ್ಥಾಪನೆಗೊಂಡಿದೆ.
ಯಾವ್ಯಾವ ನಗರಗಳಿಗೆ ಸಂಪರ್ಕ:
ದೆಹಲಿ-ಶ್ರೀನಗರ, ಮುಂಬೈ-ಲೆಹ್, ಅಮೃತಸರ-ಲಖನೌ ಮುಂತಾದ ಮಾರ್ಗಗಳಲ್ಲಿ ಇಂಡಿಗೋ, ಸ್ಪೈಸ್‌ಜೆಟ್, ಏರ್ ಇಂಡಿಯಾ ಮತ್ತು ವಿಸ್ತಾರಾ ವಿಮಾನ ಸಂಸ್ಥೆಗಳು ಈಗಾಗಲೇ ತಮ್ಮ ಸೇವೆಗಳನ್ನು ಪುನರ್‌ನಿರ್ವಹಿಸುತ್ತಿವೆ. ಗಗನಮಾರ್ಗದಲ್ಲಿ ಕೆಲವೊಂದು ನಿರ್ಬಂಧಗಳು ಇನ್ನೂ ಇದ್ದರೂ, ವಿಮಾನಗಳ ವೇಳಾಪಟ್ಟಿ ಮತ್ತೆ ನಿಯಮಿತವಾಗುತ್ತಿದೆ. ಈ ಮಧ್ಯೆ, ಸಾರ್ವಜನಿಕರಿಗೆ ಯಾವುದೇ ಅಸಮಂಜಸತೆಯುಂಟಾಗದಂತೆ ತಮ್ಮ ಟಿಕೆಟ್ ಸ್ಥಿತಿಯನ್ನು ವಿಮಾನ ಸಂಸ್ಥೆಗಳ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರಗಳಿಂದ ಖಚಿತಪಡಿಸಿಕೊಳ್ಳುವುದು ಅತೀ ಅವಶ್ಯಕವಾಗಿದೆ.
ಈ ಬೆಳವಣಿಗೆಗೆ ಮುಂಚಿತವಾಗಿ, ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ಶಿಬಿರಗಳ ವಿರುದ್ಧ ನಡೆಸಿದ 'ಆಪರೇಷನ್ ಸಿಂಧೂರ್' ಅತ್ಯಂತ ಪ್ರಭಾವಶಾಲಿಯಾಗಿ ನಡೆಯಿತು. ಈ ದಾಳಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಅನೇಕ ಉಗ್ರ ತಾಣಗಳನ್ನು ನಾಶಪಡಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನ ಗಡಿಭಾಗದಲ್ಲಿ ಡ್ರೋನ್ ಹಾಗೂ ಮಿಸೈಲ್ ಬಳಸಿ ಪ್ರತ್ಯುತ್ತರ ನೀಡಿದರೂ, ಭಾರತೀಯ ಸೇನೆಯ ತಕ್ಷಣದ ತಾಕತ್ತಿಗೆ ಗಟ್ಟಿ ತಡೆ ನೀಡಲಾಗುತ್ತಿದೆ. ಈ ಸನ್ನಿವೇಶದಲ್ಲೇ ಗಡಿಯ ಶಾಂತಿಯನ್ನು ಕಾಪಾಡುವ ಸಲುವಾಗಿ, ಎರಡೂ ದೇಶಗಳು 2025ರ ಮೇ ತಿಂಗಳಲ್ಲಿ ಹೊಸ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಒಪ್ಪಂದದ ಭಾಗವಾಗಿ ಗಡಿಪ್ರದೇಶದ ನಾಗರಿಕ ವಿಮಾನ ಸಂಚಾರಕ್ಕೆ ಹಸಿರು ನಿಶಾನೆ ನೀಡಲಾಗಿದೆ. ಇದರಿಂದಾಗಿ, ಪ್ರಯಾಣಿಕರು ಮಾತ್ರವಲ್ಲದೇ ಸ್ಥಳೀಯ ವ್ಯಾಪಾರಿಗಳು, ಪ್ರವಾಸೋದ್ಯಮ ಉದ್ಯಮಿಗಳು ಹಾಗೂ ವೈದ್ಯಕೀಯ ತುರ್ತು ಸೇವೆಗಳಲ್ಲಿ ತೊಡಗಿರುವವರು ಸಹ ಸುಲಭವಾಗಿ ಸಂಚರಿಸಬಹುದಾಗಿದೆ. ಲೆಹ್, ಜೈಸಲ್ಮೇರ್, ಅಮೃತಸರ ಮತ್ತು ಕುಲ್ಲು ಮುಂತಾದ ಪ್ರವಾಸೋದ್ಯಮ ಸ್ಥಳಗಳಿಗೆ ವಿಮಾನ ಸಂಪರ್ಕ ಕಲ್ಪಿಸಬೇಕಾದ ಅಗತ್ಯ ಇತ್ತು. ಇದೀಗ ಈ ಸ್ಥಳಗಳು ಮತ್ತೆ ಪ್ರವಾಸಿಗರಿಗೆ ತೆರೆದಿವೆ ಎಂಬುದರಿಂದ ಸ್ಥಳೀಯ ಆರ್ಥಿಕತೆಯ ಚೇತರಿಕೆಗೂ ಸಹಾಯವಾಗಲಿದೆ.
ಈ ವಿಮಾನ ನಿಲ್ದಾಣಗಳ ಮುಚ್ಚುವಿಕೆ ಸಮಯದಲ್ಲಿ ವಾರಕ್ಕೆ ₹200 ಕೋಟಿ ಮೌಲ್ಯದ ವಿಮಾನ ಸೇವೆಗಳ ನಷ್ಟ ಉಂಟಾಗಿತ್ತು. ಆದರೆ ಪುನರಾರಂಭದೊಂದಿಗೆ ಈ ಹಣವನ್ನು ಮರುಉಳಿಸಿಕೊಳ್ಳುವ ಅವಕಾಶವಿದೆ. ಸರ್ಕಾರವು ಕೂಡ ಭದ್ರತೆ ಮತ್ತು ನಾಗರಿಕ ಹಿತದ್ರಷ್ಟಿಯಿಂದ ಸಮತೋಲನ ಸಾಧಿಸಲು ಮುಂದಾಗಿದೆ. ಸೇನೆಗೆ ಅಗತ್ಯ ಭದ್ರತಾ ಕ್ರಮಗಳನ್ನು ನೀಡಿದೆಯೇ ಹೊರತು, ಜನಸಾಮಾನ್ಯರ ಜೀವನದ ಮೇಲೆ ಕಠಿಣ ಪರಿಣಾಮ ಬಾರದಂತೆ ನೋಡಿಕೊಳ್ಳಲಾಗಿದೆ. ಈ ನಿಲ್ದಾಣಗಳ ಪುನರಾರಂಭದಿಂದಾಗಿ ದೇಶದ ಗಡಿಪ್ರದೇಶಗಳಲ್ಲಿ ಶಾಂತಿ ಮತ್ತು ಭದ್ರತೆಯ ಸಂಕೇತ ನಿರ್ಮಾಣವಾಗಿದೆ.
ಇಡೀ ಸನ್ನಿವೇಶ ಭಾರತದ ರಾಜಕೀಯ ದೃಷ್ಟಿಕೋನದಲ್ಲಿ ಪ್ರಮುಖ ತಿರುವಾಗಿದೆ. ಪಾಕಿಸ್ತಾನದೊಂದಿಗೆ ಶಾಂತಿ ಕಾಪಾಡುವ ಪ್ರಯತ್ನದೊಂದಿಗೆ ಶಕ್ತಿಶಾಲಿಯಾದ ಯುದ್ಧ ತಂತ್ರವನ್ನೂ ರೂಪಿಸಿ ಭಾರತದ ಸೇನೆಯು ತೀವ್ರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬೆಳವಣಿಗೆಯು ಗಡಿಭಾಗದ ಜನರಿಗೆ ಭದ್ರತೆಯ ನಿಶ್ಚಯವನ್ನೂ ನೀಡಿದೆ. ವಿಮಾನ ನಿಲ್ದಾಣಗಳ ಪುನರಾರಂಭವನ್ನು ಕೇವಲ ತಾಂತ್ರಿಕ ಘೋಷಣೆ ಎಂಬುದಾಗಿ ಮಾತ್ರ ಅಲ್ಲ, ಒಂದು ಶಾಂತಿ ಸಂಕೇತವಾಗಿ ಪರಿಗಣಿಸಬೇಕು. ಇದು ಮುಂದಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವೈಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭಿಸುವ ಸೂಚನೆ ನೀಡಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications