ಭಾರತದ ಜಿಡಿಪಿ ದರವು ಆರ್ಥಿಕ ತಜ್ಞರ ಅಂದಾಜನ್ನು ಮೀರಿ ಬೆಳೆದಿದೆ. ಕಳೆದ ಒಂದು ತ್ರೈಮಾಸಿಕದಲ್ಲಿ ಅಂದರೆ ಹಣಕಾಸು ವರ್ಷ 2023ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದಲ್ಲಿ ಆರ್ಥಿಕ ಬೆಳವಣಿಗೆ ದರ (ಜಿಡಿಪಿ ದರ) ಶೇಕಡ 6.1ಕ್ಕೆ ತಲುಪಿದೆ. ಇನ್ನು 2023ರ ಸಂಪೂರ್ಣ ಹಣಕಾಸು ವರ್ಷದಲ್ಲಿಯೂ ಭಾರತದ ಜಿಡಿಪಿ ಶೇಕಡ 7.2ಕ್ಕೆ ತಲುಪಿದೆ.
ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (Statistics and Programme Implementation Ministry) ಮೇ 31ರಂದು ಜಿಡಿಪಿ ದತ್ತಾಂಶದ ವರದಿ ಬಿಡುಗಡೆ ಮಾಡಿದೆ. ಕೇಂದ್ರ ಬ್ಯಾಂಕ್ ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳು ಭಾರತದ ಜಿಡಿಪಿ ದರವನ್ನು ಅಂದಾಜು ಮಾಡಿದ್ದಕ್ಕಿಂತ ಅಧಿಕವಾಗಿ ಜಿಡಿಪಿ ದರ ಕಂಡುಬಂದಿದೆ.

ಅಂದಾಜಿಗಿಂತ ಅಧಿಕ ಆರ್ಥಿಕ ಬೆಳವಣಿಗೆ
ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣಕಾಸು ವರ್ಷ 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿಯು ಶೇಕಡ 5.1ಕ್ಕೆ ತಲುಪಲಿದೆ ಎಂದು ಅಂದಾಜು ಮಾಡಿತ್ತು. ಈ ನಡುವೆ ಎಸ್‌ಬಿಐ ರಿಸರ್ಚ್ ಭಾರತದಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 5.5 ಆಗಿರಲಿದೆ ಎಂದು ಅಂದಾಜು ವ್ಯಕ್ತಪಡಿಸಿತ್ತು. ರಾಯಿಟರ್ಸ್ ಪೋಲ್‌ನ ಪ್ರಕಾರ ಭಾರತದ ಜಿಡಿಪಿಯು ಶೇಕಡ 5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು.
ಇನ್ನು ಒಟ್ಟಾಗಿ ಹಣಕಾಸು ವರ್ಷ 2023ರಲ್ಲಿ ಒಟ್ಟಾಗಿ ಮೊದಲನೇ ತ್ರೈಮಾಸಿಕದಲ್ಲಿ ಶೇಕಡ 13.1ರಷ್ಟು, ಎರಡನೇ ತ್ರೈಮಾಸಿಕದಲ್ಲಿ ಶೇಕಡ 6.2ರಷ್ಟು, ಮೂರನೇ ತ್ರೈಮಾಸಿಕದಲ್ಲಿ ಶೇಕಡ 4.5ರಷ್ಟು ಆರ್ಥಿಕ ಬೆಳವಣಿಗೆ ಕಂಡುಬಂದಿದೆ. ಈಗ ಬಿಡುಗಡೆ ಮಾಡಲಾಗಿರುವ ದತ್ತಾಂಶದ ಪ್ರಕಾರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 6.1ರಷ್ಟು ಜಿಡಿಪಿ ಇದೆ.
ಉತ್ಪಾದನಾ ವಲಯದಲ್ಲಿ ಜಿವಿಎ (Gross Value Added) ಅಂದಾಜು ಹಣಕಾಸು ವರ್ಷದಲ್ಲಿ ಶೇಕಡ 1.3ರಷ್ಟು ಬೆಳವಣಿಗೆ ಕಂಡಿದೆ. ಹಣಕಾಸು ವರ್ಷ 2022ರಲ್ಲಿ ಶೇಕಡ 11.1ರಷ್ಟು ಬೆಳವಣಿಗೆ ಕಂಡಿದೆ. ಇನ್ನು ಕೃಷಿ ಕ್ಷೇತ್ರ ಶೇಕಡ 10.3ರಷ್ಟು ವೃದ್ಧಿ ಕಂಡಿದೆ. ಗಣಿಗಾರಿಕೆ ವಲಯ ಶೇಕಡ 16.3ರಷ್ಟು ವೃದ್ಧಿ, ನಿರ್ಮಾಣ ವಲಯವು ಶೇಕಡ 10.4ರಷ್ಟು ವೃದ್ಧಿಯಾಗಿದೆ.
ಹಿಂದಿನ ಹಣಕಾಸು ವರ್ಷದ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ಕಂಡುಬಂದ ಬಲವಾದ ಬೆಳವಣಿಗೆಯನ್ನು ಗಮನಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ವರ್ಷ 2023ರಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡ 7 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದರು. ಇನ್ನು ಹಣಕಾಸು ವರ್ಷ 2022ರಲ್ಲಿ ಭಾರತದ ಆರ್ಥಿಕತೆಯು ಶೇಕಡ 9.1 ರಷ್ಟಿತ್ತು ಎಂಬುವುದು ಗಮನಾರ್ಹ.
ಆರ್‌ಬಿಐ ಗವರ್ನರ್ ಹೇಳುವುದೇನು?
"ಆರಂಭಿಕವಾಗಿ ಮೂರನೇ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವ ಬೇಡಿಕೆಯಿದೆ ಎಂದು ಕಂಡುಬಂದಿದೆ. ಆದರೆ ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿನ ಎಲ್ಲಾ ಆರ್ಥಿಕ ಬೆಳವಣಿಗೆಗಳು ಆರ್ಥಿಕ ಚಟುವಟಿಕೆಗಳ ವೇಗವನ್ನು ಉಳಿಸಿಕೊಂಡಿದೆ ಎಂದು ತೋರಿಸುತ್ತದೆ," ಎಂದು ಮೇ 24ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
"ಹಣಕಾಸು ವರ್ಷ 2023ರ ನಾಲ್ಕನೇ ತ್ರೈಮಾಸಿಕದಲ್ಲಿ ನಾವು ಎಲ್ಲ ಸೂಚಕಗಳನ್ನು ಪರಿಶೀಲಿಸಿದ್ದೆವೆ. ಎಲ್ಲವೂ ವೇಗವನ್ನು ಕಾಯ್ದುಕೊಂಡಿದೆ. ಆದ್ದರಿಂದ ದೇಶದ ಆರ್ಥಿಕ ಬೆಳವಣಿಗೆಯು ಶೇಕಡ 7 ಕ್ಕಿಂತ ಸ್ವಲ್ಪ ಹೆಚ್ಚಿದ್ದರೆ ನಾವು ಆಶ್ಚರ್ಯಪಡುವುದು ಏನಿಲ್ಲ," ಎಂದು ಕೂಡಾ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications