ಭಾರತೀಯ ಕೈಗಾರಿಕಾ ವಲಯದಲ್ಲಿ ಸಕ್ಕರೆ ಉತ್ಪಾದನೆ ಕೂಡ ಅತಿ ಅವಲಂಬಿತವಾಗಿರುವ, ಪ್ರಮುಖ ಕೈಗಾರಿಕೆಗಳಲ್ಲಿ ಒಂದಾಗಿದೆ. ಸಕ್ಕರೆ ಉತ್ಪಾದನೆ ಕೇವಲ ದೇಶದ ಆರ್ಥಿಕತೆಯನ್ನೊಂದೇ ಪ್ರಭಾವಿತಗೊಳಿಸುವುದಿಲ್ಲ. ಇದು ಲಕ್ಷಾಂತರ ರೈತರ ಜೀವನಮಟ್ಟಕ್ಕೂ ನೇರವಾಗಿ ಪರಿಣಾಮ ಬೀರುತ್ತದೆ. ಈ ಒಂದು ಸಕ್ಕರೆ ಉತ್ಪಾದನೆ, 2024-25ನೇ ಸಾಲಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂದುವರಿಯುತ್ತಿದ್ದು, ಇದು ದೇಶದ ಸಕ್ಕರೆ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಪ್ರಮುಖ ಪ್ರಭಾವವನ್ನು ಬೀರಿದೆ. ಮಾರ್ಚ್ 31, 2025ರ ವರೆಗೆ ದೇಶದಲ್ಲಿ ಒಟ್ಟು 247.61 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದ್ದು, ಹಲವು ರಾಜ್ಯಗಳ ಕಾರ್ಖಾನೆಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ.

ಇನ್ನು ವಿಶೇಷವಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕವು ಸಕ್ಕರೆ ಉತ್ಪಾದನೆ ಮಾಡುವ ಪ್ರಮುಖ ಉತ್ಪಾದಕ ರಾಜ್ಯಗಳಾಗಿ ಮುಂದುವರೆದಿವೆ. ನಿರಂತರ ಬೇಡಿಕೆಗೆ ತಕ್ಕಂತೆ ಸಕ್ಕರೆ ಉತ್ಪಾದನೆಯು ನಡೆಯುತ್ತಿದೆ. ಜೊತೆಗೆ ಸರ್ಕಾರದ ನಿರ್ಧಾರಗಳು, ಹವಾಮಾನ ಪರಿಸ್ಥಿತಿಗಳು ಮತ್ತು ಕೃಷಿ ಕ್ಷೇತ್ರದ ಬೆಳವಣಿಗೆಗಳು ಈ ಪ್ರಕ್ರಿಯೆಗೆ ನೇರವಾಗಿ ಸಂಬಂಧ ಹೊಂದಿವೆ. 2025-26ನೇ ಸಾಲಿನ ಉತ್ಪಾದನೆಯು ಇನ್ನಷ್ಟು ಚೇತರಿಸಿಕೊಳ್ಳುವ ನಿರೀಕ್ಷೆಯಿದ್ದು, ಇದರಿಂದ ದೇಶೀಯ ಮಾರುಕಟ್ಟೆ ಮತ್ತು ರೈತ ಸಮುದಾಯಕ್ಕೂ ಪ್ರಭಾವ ಬೀರುವ ಸಾಧ್ಯತೆ ಇದೆ.
247.61 ಲಕ್ಷ ಟನ್ ಸಕ್ಕರೆ ಉತ್ಪಾದನೆಗೆ, 95 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಮುಖ ರಾಜ್ಯಗಳಲ್ಲಿ ಉತ್ತರ ಪ್ರದೇಶವು 87.5 ಲಕ್ಷ ಟನ್, ಮಹಾರಾಷ್ಟ್ರವು 80.06 ಲಕ್ಷ ಟನ್ ಮತ್ತು ಕರ್ನಾಟಕವು 39.55 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದೆ. ಉತ್ತರ ಪ್ರದೇಶದಲ್ಲಿ 48 ಕಾರ್ಖಾನೆಗಳು ಏಪ್ರಿಲ್ ಮಧ್ಯದವರೆಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇದಕ್ಕೆ ಕಬ್ಬಿನ ಉತ್ತಮ ಇಳುವರಿ ಮತ್ತು ಸುಧಾರಿತ ತಂತ್ರಜ್ಞಾನ ಕಾರಣವಾಗಿದೆ.
ಅಂದಹಾಗೆ ದಕ್ಷಿಣ ಭಾರತದಲ್ಲಿ, ವಿಶೇಷ ಋತುವಿನಲ್ಲಿ..ಅಂದರೆ ಜೂನ್-ಜುಲೈ 2025ರಿಂದ ಸೆಪ್ಟೆಂಬರ್ 2025ರವರೆಗೆ ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಕಾರ್ಖಾನೆಗಳು ಪುನರಾರಂಭಗೊಳ್ಳಲಿದೆ. ಆಗ ಸುಮಾರು 4 ಲಕ್ಷ ಟನ್ ಸಕ್ಕರೆ ಈ ಅವಧಿಯಲ್ಲಿ ಉತ್ಪಾದನೆಗೊಳ್ಳುವ ನಿರೀಕ್ಷೆಯಿದೆ. ಇನ್ನು, ಎಥೆನಾಲ್ ಉತ್ಪಾದನೆಗೆ 35 ಲಕ್ಷ ಟನ್ ಸಕ್ಕರೆಯನ್ನು ಬಳಕೆ ಮಾಡಲಾಗಿರುವುದರಿಂದ, 2024-25ನೇ ಸಾಲಿನ ನಿವ್ವಳ ಸಕ್ಕರೆ ಉತ್ಪಾದನೆ 264 ಲಕ್ಷ ಟನ್ ಎಂದು ಪರಿಷ್ಕರಿಸಲಾಗಿದೆ. ಮುಂಬರುವ 2025-26ನೇ ಸಾಲಿನ ಕುರಿತು ISMA ಆಶಾವಾದ ಹೊಂದಿದ್ದು, ಉತ್ತಮ ಹವಾಮಾನ ಮತ್ತು 2024ರ ಉತ್ತಮ ಮಾನ್ಸೂನ್‌ಗಾಗಿ ನಿರೀಕ್ಷಿಸಲಾಗಿದೆ, ಇದು ಕಬ್ಬಿನ ಬೆಳೆ ಹೆಚ್ಚಳಕ್ಕೆ ಸಹಾಯಕವಾಗಬಹುದು.
ಅದರಲ್ಲೂ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಬ್ಬಿನ ಕೃಷಿ ಹೆಚ್ಚಾಗಿರುವುದರಿಂದ 2025ರ ಅಕ್ಟೋಬರ್‌ನಲ್ಲಿ ಕ್ರಶಿಂಗ್ ಋತು ಸರಿಯಾದ ಸಮಯಕ್ಕೆ ಆರಂಭವಾಗುವ ಸಾಧ್ಯತೆಯಿದೆ. ಇನ್ನು, ಜನವರಿ 20, 2025ರಂದು ಭಾರತ ಸರ್ಕಾರವು 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಿದ ಕ್ರಮದಿಂದ ದೇಶೀಯ ಮಾರುಕಟ್ಟೆಯಲ್ಲಿನ ದಾಸ್ತಾನು ಸಮತೋಲನಗೊಳ್ಳುವ ಸಾಧ್ಯತೆ ಇದೆ. ಇದರಿಂದ ಗಿರಣಿಗಳಿಗೆ ಆರ್ಥಿಕ ಸುಧಾರಣೆ ಆಗಲಿದ್ದು, 5.5 ಕೋಟಿ ಕಬ್ಬು ಬೆಳೆಗಾರ ರೈತರಿಗೂ ಲಾಭವಾಗಲಿದೆ. ಒಟ್ಟಿನಲ್ಲಿ, 2024-25ನೇ ಸಾಲಿನಲ್ಲಿ ಭಾರತದಲ್ಲಿ ಸಕ್ಕರೆ ಉತ್ಪಾದನೆಯು ಸ್ಥಿರವಾಗಿದ್ದು, ಸರ್ಕಾರದ ಸಕ್ರಿಯ ನೀತಿಗಳು, ಎಥೆನಾಲ್ ಉತ್ಪಾದನೆ, ರಫ್ತು ಕ್ರಮಗಳು ಮತ್ತು ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಮುಂದಿನ ಋತುವಿನ ಬೆಳವಣಿಗೆಗೂ ಸಹಕಾರಿಯಾಗಲಿದೆ.
ಒಟ್ಟಿನಲ್ಲಿ 2024-25ನೇ ಸಾಲಿನಲ್ಲಿ, ಭಾರತದಲ್ಲಿ ಸಕ್ಕರೆ ಉತ್ಪಾದನೆಯು ನಿರೀಕ್ಷಿತ ಮಟ್ಟದಲ್ಲಿ ಸಾಗಿದ್ದು, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿಶೇಷ ಋತು ಉತ್ಪಾದನೆಯು ಸಹಕಾರ ನೀಡಲಿದೆ. 2025-26ನೇ ಸಾಲಿನ ಉತ್ಪಾದನೆಯೂ ಉತ್ತಮವಾಗಲಿದೆ ಎಂಬ ನಿರೀಕ್ಷೆಯಿದೆ. ಸರ್ಕಾರದ ಸಕ್ಕರೆ ರಫ್ತು ನೀತಿ, ಎಥೆನಾಲ್ ಉತ್ಪಾದನೆ ಮತ್ತು ಸುಧಾರಿತ ಕೃಷಿ ತಂತ್ರಜ್ಞಾನಗಳ ಅಳವಡಿಕೆ, ಭಾರತದ ಸಕ್ಕರೆ ಉದ್ಯಮಕ್ಕೆ ಇನ್ನಷ್ಟು ಬೆಳವಣಿಗೆ ನೀಡಲಿವೆ.


Click it and Unblock the Notifications