ಭಾರತ ಇನ್ನು ಆರು ವರ್ಷ ಅಂದರೆ 2030ರ ವೇಳೆಗೆ ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ರೇಟಿಂಗ್ ಏಜೆನ್ಸಿ ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಗುರುವಾರ ವರದಿ ಮಾಡಿದೆ. ಭಾರತ ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಮೂಲ ಸೇವೆಗಳ ವ್ಯಾಪ್ತಿ ವಿಸ್ತರಿಸುವ ಸವಾಲಾಗಲಿದೆ. ಉತ್ಪಾದಕತೆಯನ್ನು ಸ್ಥಿರವಾಗಿಟ್ಟುಕೊಳ್ಳಲು ಹೂಡಿಕೆಯ ಅಗತ್ಯತೆ ಹೆಚ್ಚಿಸುತ್ತದೆ.
ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶಗಳಲ್ಲಿ ಭಾರತ ಸೇರಿದೆ. ಬಲಿಷ್ಠ ದೇಶಗಳೊಂದಿಗೆ ಭಾರತ ಸದ್ಯ ಪೈಪೋಟಿ ನಡೆಸುತ್ತಿದೆ. ಇತ್ತಿಚಿನ ದಿನಗಳಲ್ಲಿ ಹಲವು ದೇಶಗಳ ಆರ್ಥಿಕ ಹಿನ್ನಡೆಯನ್ನು ಅನುಭವಿಸಿದ್ದವು. ಆದರೆ ಭಾರತದ ಆರ್ಥಿಕತೆಯ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇದೇ ಸ್ಥಿರತೆಯನ್ನು ಅನುಭವಿಸಿದಲ್ಲಿ ಭಾರತ ವೇಗವಾಗಿ ಬೆಳೆಯುತ್ತದೆ ಎಂದು ರೇಟಿಂಗ್ ಸಂಸ್ಥೆ ಭವಿಷ್ಯ ನುಡಿದಿದೆ.

ಭಾರತದ ಆರ್ಥಿಕತೆ ವೃದ್ಧಿ
ಬೆಳೆಯುತ್ತಿರುವ ಆರ್ಥಿಕತೆಯು ಮುಂದಿನ ದಶಕದ ಕನಸನ್ನು ತೆರೆದಿಡುತ್ತವೆ. ಪ್ರಸ್ತುತ 3,600 ಶತಕೋಟಿ ಡಾಲರ್ ಆರ್ಥಿಕತೆಯನ್ನು ಹೊಂದಿರುವ ಭಾರತವು 2047 ರ ವೇಳೆಗೆ 30 ಸಾವಿರ ಶತಕೋಟಿ ಡಾಲರ್ ಆರ್ಥಿಕತೆಯ ಗುರಿಯನ್ನು ಹೊಂದಿದೆ. ಭಾರತವು ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶ ಎಂದು ವರದಿ ಮಾಡಿದೆ.
ಆರ್ಥಿಕ ಪ್ರಗತಿಯಲ್ಲಿ ಸ್ಥಿರತೆ
ಭಾರತವು ಮುಂದಿನ ಮೂರು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶಗಳ ಪಟ್ಟಿಗೆ ಸೇರಬಹುದು ಎಂದು ಎಸ್ ಆಂಡ್ ಪಿ ವರದಿಯಲ್ಲಿ ತಿಳಿಸಿದೆ. ಭಾರತ ಇದೇ ಸ್ಥಿರತೆಯ ವೇಗವನ್ನು ಆರ್ಥಿಕತೆಯಲ್ಲಿ ಕಾಯ್ದುಕೊಂಡಲ್ಲಿ 2030ರ ವೇಳೆಗೆ ಜಾಗತಿಕವಾಗಿ ಮೂರನೇ ದೊಡ್ಡ ದೇಶವಾಗಲಿದೆ. 2035 ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ (GDP) ಸರಾಸರಿ ಬೆಳವಣಿಗೆ ದರವು 4.06 ಪ್ರತಿಶತದಷ್ಟಿದ್ದರೆ, ಮುಂದುವರಿದ ದೇಶಗಳಲ್ಲಿ ಈ ದರವು 1.59 ಪ್ರತಿಶತದಷ್ಟಿರುತ್ತದೆ.
ಭಾರತವು 2035 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಲಿದ್ದು, ಇಂಡೋನೇಷ್ಯಾ ಮತ್ತು ಬ್ರೆಜಿಲ್ ಎಂಟು ಮತ್ತು ಒಂಬತ್ತನೇ ಸ್ಥಾನವನ್ನು ಪಡೆಯುತ್ತವೆ ಎಂದು ಎಸ್ ಆಂಡ್ ಪಿ ವರದಿಯಲ್ಲಿ ಹೇಳಿದೆ. ಅಲ್ಲದೆ ಭಾರತದಲ್ಲಿ 2035ರ ವೇಳೆ ಜನಸಂಖ್ಯೆ ಸಹ ಹೆಚ್ಚಾಗಲಿದ್ದು ಹೊಸ ಸವಾಲುಗಳನ್ನು ತಂದೊಡ್ಡಲಿದೆ ಎಂದು ವರದಿ ಮಾಡಿದೆ. ಬೆಳವಣಿಗೆಯಲ್ಲಿ ಮುಂದುವರೆಯುತ್ತಿರುವ ಆರ್ಥಿಕ ದೇಶಗಳಿಗೆ ಮುಂದಿನ ದಶಕವು ಮಹತ್ವಾಕಾಂಕ್ಷಿ ಆಗಿರಲಿದೆ.


Click it and Unblock the Notifications