ಭಾರತ ಸರ್ಕಾರ ದೇಶದ ಅಭಿವೃದ್ಧಿಗೆ ಮತ್ತೊಂದು ಹಂತದಲ್ಲಿ ಹೆಜ್ಜೆ ಇಡುತ್ತಿದೆ. ರಸ್ತೆ ನಿರ್ಮಾಣದ ಮೂಲಕ ಅಭಿವೃದ್ಧಿಯತ್ತ ಸಂಪರ್ಕ ಬೆಳೆಸುತ್ತಿರುವ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ವರ್ಷದಲ್ಲಿ..ಅಂದರೆ 2025-26ರಲ್ಲಿ 10,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ಕಳೆದ ಸೋಮವಾರ ಬಿಡುಗಡೆಗೊಂಡ Detailed Demands of grants ಎಂಬ ವರದಿಯಲ್ಲಿ ಉಲ್ಲೇಖವಾಗಿದೆ.
ಈ ಯೋಜನೆಯ ಮೂಲಕ ಭಾರತ ಸರ್ಕಾರವು ದೇಶದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಹೊಂದಿದೆ. ಮತ್ತು ಸಾರಿಗೆ ವಿಸ್ತರಣೆಗೆ ಉತ್ತೇಜನ ನೀಡಲು ಹೆಜ್ಜೆ ಇಡುತ್ತಿದೆ. ಇನ್ನು ಹಿಂದಿನ ವರ್ಷಗಳಿಗೆ ಹೋಲಿಸಿದರೆ 2026ನೇ ಹಣಕಾಸು ವರ್ಷದ ಗುರಿ ಕಡಿಮೆಯಿದೆ. ಕಡಿಮೆಯಿದ್ದರೂ, ಪ್ರಸಕ್ತ ಹಣಕಾಸು ವರ್ಷಕ್ಕೆ ಸರ್ಕಾರವು 10,400 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಪರಿಷ್ಕೃತ ಗುರಿ ಹೊಂದಿದೆ..

ಇನ್ನು ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಒಟ್ಟು 1 ಲಕ್ಷ 46 ಸಾವಿರದ 195 ಕಿ.ಮೀ ಉದ್ದವನ್ನು ಹೊಂದಿವೆ. ಇವು ದೇಶದ ಪ್ರಧಾನ ಮಾರ್ಗವಾಗಿ ಕಾರ್ಯ ನಿರ್ವಹಿಸುತ್ತಿರುವ ಹೆದ್ದಾರಿಗಳಾಗಿವೆ.. ಒಟ್ಟು ರಾಷ್ಟ್ರೀಯ ಹೆದ್ದಾರಿಗಳ ಉದ್ದದಲ್ಲಿ, ರಾಷ್ಟ್ರೀಯ ಹೈ-ಸ್ಪೀಡ್ ಕಾರಿಡಾರ್‌ಗಳ ಉದ್ದ 2,474 ಕಿ.ಮೀ ಇದೆ. ಮತ್ತು ನಾಲ್ಕು ಪಥ ಮತ್ತು ಅದಕ್ಕಿಂತ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳ ಉದ್ದವು ಪ್ರಸ್ತುತ 45,947 ಕಿಲೋಮೀಟರ್ ಇದೆ. 2024ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ದಿನಕ್ಕೆ 33.83 ಕಿ.ಮೀ ದರದಲ್ಲಿ 12,349 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿತು.
ಇನ್ನು ಈ ಯೋಜನೆಯಡಿ ವಿವಿಧ ರಾಜ್ಯಗಳಿಗೆ ಸುಲಭ ಸಂಪರ್ಕ ಬೆಳೆಸುವ ಉದ್ದೇಶವಿದೆ. ಅಲ್ಲದೇ ಇದರಿಂದ ಆರ್ಥಿಕ ಮಾರ್ಗಗಳನ್ನು ಸಂಪರ್ಕಿಸುವ ಹೆದ್ದಾರಿಗಳೂ ನಿರ್ಮಾಣಗೊಳ್ಳುತ್ತಿವೆ. ಇದಿಷ್ಟೇ ಅಲ್ಲ ಈ ಅಭಿವೃದ್ಧಿಯಿಂದ ನಾಲ್ಕು ಲೇನ್ ಹೆದ್ದಾರಿಗಳ ಪ್ರಮಾಣದಲ್ಲಿ 8% ವೃದ್ಧಿ ಕಾಣಲಾಗುವುದು. ಇದರಿಂದ ಸಂಚಾರ ದಟ್ಟಣೆಯಾಗುವುದಲ್ಲದೇ, ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ. ಜೊತೆಗೆ ವಾಹನಗಳ ಇಂಧನ ವ್ಯಯವನ್ನು ಉಳಿಸಲು ಸಹಾಯಕವಾಗುತ್ತದೆ.
ಇನ್ನು ಈ ಹೆದ್ದಾರಿ ನಿರ್ಮಾಣದಿಂದಾಗುವ ಪ್ರಯೋಜನಗಳೇನು ಎಂದು ನೋಡುವುದಾದರೆ..
1. ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ:
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಳಿಂದ ದೇಶದ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿ ರೂಪಿಸಬಹುದು. ಹಾಗೂ ವಾಣಿಜ್ಯ ಬೆಳವಣಿಗೆಯನ್ನೂ ಉತ್ತೇಜಿಸುವ ಉದ್ದೇಶ ಈ ಯೋಜನೆ ಹೊಂದಿದೆ. ಭಾರತೀಯ ಆರ್ಥಿಕತೆಗೆ ಸಂಪರ್ಕ ಬೆಳೆಸುವ ಸಾಧನವೂ ಆಗಿದೆ ಈ ಅಭಿವೃದ್ಧಿ.
2. ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ:
ಈ ಯೋಜನೆಯು ವಿದ್ಯಮಾನದ ವಹಿವಾಟು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ. ಹೆದ್ದಾರಿ ನಿರ್ಮಾಣದಿಂದ ಲಕ್ಷಾಂತರ ಜನರಿಗೆ ಉದ್ಯೋಗವಕಾಶ ಸಿಗಲಿದೆ. ವಿಶೇಷವಾಗಿ ಕೂಲಿ ಕಾರ್ಮಿಕರು, ತಾಂತ್ರಿಕ ತಜ್ಞರು ಹಾಗೂ ಗುತ್ತಿಗೆದಾರರಿಗೆ ನೆರವಾಗುತ್ತದೆ. ಇದರ ಜೊತೆಗೆ ಲಾಜಿಸ್ಟಿಕ್ ಮತ್ತು ಸಾರಿಗೆ ಕ್ಷೇತ್ರವು ವೇಗವಾಗಿ ಅಭಿವೃದ್ಧಿಯಾಗಲಿದೆ. ಇದು ಅತ್ಯಾವಶ್ಯಕ ವಸ್ತುಗಳು ಮತ್ತು ವಾಣಿಜ್ಯ ವಸ್ತುಗಳ ತ್ವರಿತ ಸಾಗಣೆಗೆ ಸಹಾಯ ಮಾಡಲಿದೆ.
3. ಬಂಡವಾಳ ಹೂಡಿಕೆ:
ಈ ಯೋಜನೆಗೆ ಕೇಂದ್ರ ಸರ್ಕಾರ ಅತಿಹೆಚ್ಚಿನ ಬಂಡವಾಳವನ್ನು ಹೂಡುತ್ತದೆ. ಜೊತೆಗೆ ಖಾಸಗಿ ವಲಯದ ಹೂಡಿಕೆದಾರರನ್ನೂ ಒಳಗೊಳ್ಳುವಂತೆ, ಯೋಜನೆಯನ್ನು ಅನುಷ್ಠಾನಗೊಳಿಸಲು ಯತ್ನಿಸುವುದಾಗಿದೆ. ನಮ್ಮಲ್ಲಿರುವ ಸಹಜ ಸಂಪತ್ತು ಮತ್ತು ತಂತ್ರಜ್ಞಾನದ ಬಳಕೆಯಿಂದ ಹೆದ್ದಾರಿಗಳನ್ನು ಬಲಿಷ್ಠಗೊಳಿಸುವ ಬಗ್ಗೆ ಗಮನ ಹರಿಸಲಾಗುತ್ತದೆ.
4. ಯೋಜನೆಯಿಂದಾಗುವ ಒಟ್ಟಾರೆ ಪ್ರಭಾವ:
ಹೆದ್ದಾರಿ ನಿರ್ಮಾಣ ಯೋಜನೆಯು ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಬಲಪಡಿಸುತ್ತೆ. ಇದರರ ಜೊತೆಗೆ ಸಂಚಾರ ಸುಗಮಗೊಳಿಸುವುದಕ್ಕೆ ಸಹಾಯ ಮಾಡುತ್ತದೆ. ವ್ಯಾಪಾರ, ಕೈಗಾರಿಕೆ, ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಬೆಳವಣಿಗೆಯೊಂದಿಗೆ ದೇಶದ ಆರ್ಥಿಕತೆಯ ಬೆಳವಣಿಗೆಗೂ ವೇಗ ಸಿಗಲಿದೆ. ಈ ಯೋಜನೆಯಲ್ಲಿ ರಸ್ತೆ ಸುರಕ್ಷತೆ ಮತ್ತು ಸಾರಿಗೆ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಲು ನಿರ್ಧಾರ ಮಾಡಲಾಗಿದ್ದು, ಅಪಘಾತ ಪ್ರಕರಣಗಳನ್ನು ತಡೆಯುವ ಉದ್ದೇಶವಾಗಿದೆ. ಇದು ಭಾರತ ಸರ್ಕಾರದ ಪ್ರಮುಖ ಹೆಜ್ಜೆಯಾಗಿದ್ದು, 2025-26ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೊಸ ಹಂತ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುತಿಸಿರುವ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳಲ್ಲಿ 13,795 ಕಪ್ಪು ಚುಕ್ಕೆಗಳಿವೆ. ಈ ಪೈಕಿ 9,525 ಕಪ್ಪು ಚುಕ್ಕೆಗಳಲ್ಲಿ ಅಲ್ಪಾವಧಿಯ ತಿದ್ದುಪಡಿ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. 4,777 ಸ್ಥಳಗಳಲ್ಲಿ ಶಾಶ್ವತ ತಿದ್ದುಪಡಿಗಳನ್ನು ಪೂರ್ಣಗೊಳಿಸಲಾಗಿದೆ. 2026ರಲ್ಲಿ ಅಲ್ಪಾವಧಿಯ ತಿದ್ದುಪಡಿಗಳನ್ನು ಪ್ರಾರಂಭಿಸಿದ ಹೆದ್ದಾರಿಗಳಲ್ಲಿ 1,000 ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ.


Click it and Unblock the Notifications