ಭಾರತದ ಮತ್ತು ಅಮೆರಿಕ ನಡುವೆ ನಡೆಯಲಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ, ಭಾರತಕ್ಕೆ ಒಂದು ದೊಡ್ಡ ಬದಲಾವಣೆಯನ್ನೇ ತರಲಿದೆ ಎಂದರೆ ತಪ್ಪಾಗಲ್ಲ. ಆದರೆ ಈ ನಡುವೆ ಒಂದು ಸಣ್ಣ ಸಮಸ್ಯೆ ಎದುರಾಗಿದೆ. ಅದೇನೆಂದರೆ ಈ ವ್ಯಾಪಾರ ಒಪ್ಪಂದ ಜುಲೈ 8ರ ಒಳಗೆ ಆಗಬೇಕಿತ್ತು. ಆದರೆ ಈ ಗಡುವಿನೊಳಗೆ ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದದ ಸಹಿ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇನ್ನು ಈ ದಿನಾಂಕವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ "ರಿಲೀಫ್ ಡೇ" ಸುಂಕಗಳ ತಾತ್ಕಾಲಿಕ ಅಮಾನತು ಅವಧಿಗೆ ಅಂತ್ಯವಾಗಲಿದೆ. ಒಂದು ವೇಳೆ ಆ ದಿನ ಒಪ್ಪಂದವಾಗದಿದ್ದರೆ, ಇದು ಭಾರತೀಯ ರಫ್ತುದಾರರಿಗೆ ಹೊಸ ಅನಿಶ್ಚಿತತೆಯ ಸ್ಥಿತಿಯನ್ನು ಸೃಷ್ಟಿಸಬಹುದು.
ಇದರಿಂದಾಗುವ ಸಮಸ್ಯೆ ಏನು?
ಒಂದು ವೇಳೆ ಭಾರತ-ಅಮೆರಿಕ ನಡುವೆ ಸಹಿ ಒಪ್ಪಂದವಾಗದಿದ್ದರೆ, ಕೃಷಿ ಕ್ಷೇತ್ರದ ಮೇಲೆ ಅಮೆರಿಕದ ಬಲವಾದ ಒತ್ತಡ ಹೇರಬಹುದು. ಆಗ ಭಾರತ ಆ ಒತ್ತಡಗಳಿಗೆ ಮನ್ನಣೆ ನೀಡದೆಯೂ ಇರಬಹುದು. ಇದರಿಂದ ಅನುಮಾನ ಹಾಗೂ ಅಸ್ಥಿರತೆ ಸೃಷ್ಟಿಯಾಗಿದೆ. ಹೀಗಾಗಿ ಭಾರತೀಯ ರಫ್ತುದಾರರಿಗೆ ಸುಂಕ ಅನಿಶ್ಚಿತತೆ ಎದುರಾಗುವ ಅಪಾಯವಿದೆ ಎನ್ನಬಹುದು. ಇದರ ಜೊತೆ ಡಿಜಿಟಲ್ ಸರ್ವಭೌಮತೆ, ರೈತರ ಹಿತಾಸಕ್ತಿಗಳ ಕುರಿತು ಭೀತಿಯ ಶಬ್ದಗಳು ಕೇಳಿಬರುತ್ತಿವೆ.
ಪ್ರಮುಖ ಅಡೆತಡೆ:
ಅಮೆರಿಕ, ಭಾರತೀಯ ಮಾರುಕಟ್ಟೆಗಳಲ್ಲಿ ತಳೀಯವಾಗಿ ಮಾರ್ಪಡಿಸಿದ ಬೆಳೆಗಳು, ಡೈರಿ ಉತ್ಪನ್ನಗಳು, ಸೇಬುಗಳು, ಬೀಜಗಳು ಮುಂತಾದ ಕೃಷಿ ಸರಕುಗಳಿಗೆ ಪ್ರವೇಶ ನೀಡುವಂತೆ ಬಲವಾಗಿ ಒತ್ತಡಹಾಕುತ್ತಿದೆ. ಆದರೆ ಭಾರತ ಈವರೆಗೂ ಈ ಬೇಡಿಕೆಗೆ ಲೆಕ್ಕಕೊಟ್ಟಿಲ್ಲ. ಕೃಷಿ ವಲಯದಲ್ಲಿ ರಿಯಾಯಿತಿ ನೀಡುವುದು ದೇಶದ ಹಿತಾಸಕ್ತಿಗೆ ವಿರುದ್ಧ ಎಂಬ ನಿಲುವಿನಲ್ಲಿ ನವದೆಹಲಿ ನಿಂತಿದೆ.
ಮಿನಿ-ಡೀಲ್ ಆಯ್ಕೆ?
ಅತ್ಯಂತರ ಸಂಕೀರ್ಣ ವಿಷಯಗಳಾದ ಬೌದ್ಧಿಕ ಆಸ್ತಿ ಹಕ್ಕುಗಳು, ಡಿಜಿಟಲ್ ವ್ಯಾಪಾರದ ನಿಯಂತ್ರಣ ಮತ್ತು ಸೇವಾ ವಹಿವಾಟುಗಳಂತೆ ಸಮಗ್ರ FTA ಗಾಗಿ ಮುಂದೆ ಮಾತುಕತೆ ಮುಂದುವರಿಸಲು ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳು ಸಣ್ಣ ಪ್ರಮಾಣದ "ಮಿನಿ-ಡೀಲ್" ಮೇಲೆ ಒಪ್ಪಂದವಾಗಬಹುದು. ಈ ಡೀಲ್ ಸುಂಕ ಕಡಿತ ಮತ್ತು ಕಾರ್ಯತಂತ್ರದ ಬದ್ಧತೆಗಳ ಮೇಲೆ ಕೇಂದ್ರೀಕೃತವಾಗಿರಲಿದೆ.
ಭಾರತದ ಮಿತವ್ಯಯದ ನಿರ್ಧಾರಗಳು:
ಭಾರತವು ಕೆಲವು ಅಮೆರಿಕನ್ ಉತ್ಪನ್ನಗಳಿಗೆ ಎಥೆನಾಲ್, ಬಾದಾಮಿ, ಸೇಬು, ವೈನ್ ಮುಂತಾದವುಗಳಿಗೆ ಸುಂಕ ಕಡಿತ ಅಥವಾ ಸುಂಕ-ಕೋಟಾ ವ್ಯವಸ್ಥೆ (TRQ) ಮೂಲಕ ನಿಯಮಿತ ಪ್ರವೇಶ ನೀಡಲು ಸಿದ್ಧತೆ ತೋರಿಸಬಹುದು. ಆದರೆ 70 ಕೋಟಿ ಗ್ರಾಮೀಣ ಜನರ ಜೀವನಾಧಾರವಾಗಿರುವ ಕೃಷಿ ವಲಯದಲ್ಲಿ ದೇಶಕ್ಕೆ ಅನ್ವುಕರವಾಗದ ಬೇಡಿಕೆಗಳಿಗೆ ಭಾರತ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆಯಿದೆ.
ಕೈಗಾರಿಕಾ ಸರಕುಗಳ ಮೇಲಿನ ಸುಂಕ ಕಡಿತ ಸಾಧ್ಯತೆ:
ಭಾರತವು ಆಟೋಮೊಬೈಲ್‌ಗಳು, ಪೆಟ್ರೋಕೆಮಿಕಲ್ ಉತ್ಪನ್ನಗಳು ಮತ್ತು ಉಕ್ಕು, ಅಲ್ಯೂಮಿನಿಯಂ ಭಾಗಗಳಂತಹ ಕೈಗಾರಿಕಾ ವಸ್ತುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇಇಪಿಸಿ ಇಂಡಿಯಾ ಅಧ್ಯಕ್ಷ ಪಂಕಜ್ ಚಡ್ಡಾ ಅವರ ಪ್ರಕಾರ, ಇಂಜಿನಿಯರಿಂಗ್ ರಫ್ತುಗಳ ವೃದ್ಧಿಗೆ ಇದು ಸಹಾಯಕವಾಗಬಹುದು.
ಅಮೆರಿಕದ ನಿರೀಕ್ಷೆಗಳು:
ಅಮೆರಿಕ ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದದ ನಿರೀಕ್ಷೆ ಹೊಂದಿದ್ದು, ತೈಲ, ದ್ರವೀಕೃತ ನೈಸರ್ಗಿಕ ಅನಿಲ (LNG), ವಿಮಾನಗಳು ಮತ್ತು ಪರಮಾಣು ರಿಯಾಕ್ಟರ್‌ಗಳು ಸೇರಿದಂತೆ ವ್ಯಾಪಕ ವಾಣಿಜ್ಯ ಖರೀದಿಗಳನ್ನು ಭಾರತದ ಮೇಲೆ ಒತ್ತಡ ಹೇರುತ್ತಿದೆ. ಜೊತೆಗೆ, ಬಹು-ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಎಫ್‌ಡಿಐ ನಿಯಮಗಳನ್ನು ಸಡಿಲಗೊಳಿಸಲು ಪ್ರಚೋದನೆ ನೀಡುತ್ತಿದೆ, ಇದು ಅಮೆಜಾನ್, ವಾಲ್‌ಮಾರ್ಟ್ ನಂತಹ ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಿದೆ.
ರಾಜಕೀಯ ಪ್ರಭಾವ ಮತ್ತು ನಿರಂತರ ಮೌನ:
ಅಮೆರಿಕದೊಂದಿಗೆ ಯಾವುದೇ ವ್ಯಾಪಾರ ಒಪ್ಪಂದವು ರಾಜಕೀಯವಾಗಿ ಪ್ರೇರಿತವಾಗಿಲ್ಲವೆಂಬುದನ್ನು ಭಾರತ ಸ್ಪಷ್ಟಪಡಿಸಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅವರ ಪ್ರಕಾರ, "ಅಂತಹ ಒಪ್ಪಂದವು ನಮ್ಮ ರೈತರ ಹಿತಾಸಕ್ತಿ, ಡಿಜಿಟಲ್ ಪರಿಸರ ವ್ಯವಸ್ಥೆ ಮತ್ತು ಸರ್ವಭೌಮ ನಿಯಂತ್ರಣಕ್ಕೆ ಭಂಗ ತರಬಾರದು."
ಈ ಗಡುವಿನೊಳಗೆ ಮಿನಿ-ಡೀಲ್ ಸಾಧಿಸಲಿಲ್ಲವೆಂದರೆ, ಭಾರತವು ಅಮೆರಿಕದ ಹೊಸ ಸುಂಕಗಳ ಅನಿಶ್ಚಿತತೆಗೆ ತುತ್ತಾಗುವ ಸಾಧ್ಯತೆ ಇದೆ. ಆದರೆ ವಿಶ್ಲೇಷಕರ ಪ್ರಕಾರ, ಟ್ರಂಪ್ ಈ ಸುಂಕಗಳನ್ನು ಮತ್ತೆ ಹೇರಬಹುದು ಎಂಬ ಸಾಧ್ಯತೆ ಕಡಿಮೆ. ಬದಲಾಗಿ, ಅಲ್ಪ ಪ್ರಮಾಣದ 10% ಮೂಲ ಸುಂಕವನ್ನು ಅನ್ವಯಿಸುವ ಸಾಧ್ಯತೆ ಹೆಚ್ಚಿದೆ.
ಒಟ್ಟಿನಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಮುನ್ನಡೆಯುತ್ತಿದ್ದರೂ, ಕೃಷಿ ವಲಯ ಪ್ರಮುಖ ತಡೆಗೋಡೆಯಾಗಿ ಉಳಿದಿದೆ. ಮಿನಿ-ಡೀಲ್ ಆಗಿದ್ದರೂ ಅದು ಸುಂಕಗಳ ಸಮಗ್ರ ಮರುಪರಿಶೀಲನೆಗೆ ಒತ್ತಾಯ ಮಾಡಲಿದೆ. ಆದರೆ ತೀವ್ರ ರಾಜಕೀಯ ಒತ್ತಡವಿಲ್ಲದೆ ಈ ಮಾದರಿಯ ಒಪ್ಪಂದ ಸಾಧ್ಯವಿಲ್ಲ.


Click it and Unblock the Notifications