ದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಫೆಬ್ರವರಿ 2 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಕರೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಆಗಸ್ಟ್‌ನಲ್ಲಿ ಭಾರತದ ಮೇಲೆ ಹೇರಿದ್ದ ಸುಂಕವನ್ನೂ ಕಡಿತ ಮಾಡಿದ್ದಾರೆ. ಈ ಮೂಲಕ ಶೇ.25 ರಿಂದ 18% ಕ್ಕೆ ಸುಂಕವನ್ನು ಇಳಿಸಿದ್ದಾರೆ. ಈ ಮೂಲಕ ಭಾರತ ಮತ್ತು ಅಮೆರಿಕಾ ನಡುವಿನ ವ್ಯಾಪಾರ ಮತ್ತಷ್ಟು (India-America Trade Deal) ಬಲಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಕೂಡಾ ಈ ಬಗ್ಗೆ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದು, ಈ ನಿರ್ಧಾರ ಭಾರತ ಮತ್ತು ಅಮೆರಿಕಾ ನಡುವಿನ ವಹಿವಾಟಿಗೆ ಸುಲಭವಾಗಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲಿನ ಸುಂಕ ಕಡಿತ ನಿರ್ಧಾರದಿಂದ ಹಲವು ಉತ್ಪನ್ನಗಳು ಅಗ್ಗವಾಗಲಿದೆ. ಫೆಬ್ರವರಿ 2, 2026 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮೆರಿಕವು ಭಾರತದ ಮೇಲಿದ್ದ ಸುಂಕವನ್ನು 25% ರಿಂದ 18% ಇಳಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಭಾರತೀಯ ಗ್ರಾಹಕರಿಗೆ ಹಲವು ಅಮೆರಿಕ ಉತ್ಪನ್ನಗಳು ಅಗ್ಗವಾಗುವ ಸಾಧ್ಯತೆ ಇದೆ. ಅಲ್ಲದೇ ಅಮೆರಿಕದಲ್ಲಿ ಭಾರತೀಯ ಸರಕುಗಳು ಸಹ ಅಗ್ಗದಲ್ಲಿ ಸಿಗಲಿದೆ. ಹಾಗಿದ್ರೆ ಆ ಉತ್ಪನ್ನಗಳು ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಭಾರತದಲ್ಲಿ ಯಾವುದು ಅಗ್ಗವಾಗುತ್ತದೆ?
ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದಿಂದ ಈ ಕೆಳಗಿನ ಉತ್ಪನ್ನಗಳು ಭಾರತೀಯ ಗ್ರಾಹಕರಿಗೆ ಅಗ್ಗವಾಗುವ ನಿರೀಕ್ಷೆಯಿದೆ.
- ಕೃಷಿ ಉತ್ಪನ್ನಗಳು: ಅಮೆರಿಕಾದಿಂದ ಆಮದು ಆಗುವ ಆಪಲ್, ಬಾದಾಮಿ, ವಾಲ್‌ನಟ್, ಸೋಯಾಬೀನ್ ಮತ್ತು ಇತರ ಡ್ರೈಫ್ರೂಟ್ಸ್ ಅಗ್ಗವಾಗುವ ನಿರೀಕ್ಷೆಯಿದೆ.
- ಇಂಧನ ಉತ್ಪನ್ನಗಳು: ಈಗಾಗಲೇ ಟ್ರಂಪ್, ಭಾರತ ರಷ್ಯಾ ತೈಲ ಖರೀದಿಯನ್ನು ನಿಲ್ಲಿಸಿ, ಅಮೆರಿಕ, ವೆನೆಜುವೆಲಾದಿಂದ ತೈಲ ಖರೀದಿ ಮಾಡಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಇದು ಸಾಧ್ಯವಾದ್ರೆ, ಅಮೆರಿಕ ತೈಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.
- ಟೆಕ್ನಾಲಜಿ ಮತ್ತು ಹಾರ್ಡ್‌ವೇರ್: ಅಮೆರಿಕಾದಿಂದ ಆಮದಾಗುವ ಕಂಪ್ಯೂಟರ್ ಭಾಗಗಳು, ಸೆಮಿಕಂಡಕ್ಟರ್‌ಗಳು, ಮೊಬೈಲ್ ಡಿವೈಸ್‌ಗಳು, ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳು ಅಗ್ಗವಾಗಬಹುದು. ಸುಂಕಗಳು ಒಂದುವೇಳೆ ಶೂನ್ಯಕ್ಕೆ ಇಳಿದರೆ ಐಫೋನ್, ಲ್ಯಾಪ್‌ಟಾಪ್‌ಗಳಂತಹ ಉತ್ಪನ್ನಗಳ ಬೆಲೆ ಇಳಿಯಲಿದೆ.
- ಸಂಸ್ಕರಿಸಿದ ಫುಡ್: ಚೀಸ್, ಚಾಕಲೇಟ್, ಬಿಸ್ಕೆಟ್, ಇತರ ಸಂಸ್ಕರಿಸಿದಂತಹ ಆಹಾರಗಳು ಅಗ್ಗವಾಗಬಹುದು.
ಅಮೆರಿಕದಲ್ಲಿ ಯಾವುದು ಅಗ್ಗವಾಗಲಿದೆ?
ಅಮೆರಿಕ ಇದೀಗ 18% ಸುಂಕ ಇಳಿಕೆ ಮಾಡಲು ನಿರ್ಧರಿಸಿದ್ದರಿಂದ ಭಾರತೀಯ ರಫ್ತುಗಳ ಮೇಲೆ ಬೇಡಿಕೆ ಹೆಚ್ಚಾಗಲಿದೆ. ಆದ್ದರಿಂದ ಅಮೆರಿಕದಲ್ಲಿ ಭಾರತೀಯ ಉತ್ಪನ್ನಗಳು ಅಗ್ಗದಲ್ಲಿ ಲಭ್ಯವಾಗಲಿದೆ.
- ಟೆಕ್ಸ್‌ಟೈಲ್ ಮತ್ತು ಉಡುಪುಗಳು: ಭಾರತೀಯ ಉಡುಪುಗಳು ಮತ್ತು ಟೆಕ್ಸ್‌ಟೈಲ್ ಉತ್ಪನ್ನಗಳು ಅಗ್ಗವಾಗಲಿದೆ.
- ಔಷಧಗಳು ಮತ್ತು ಜೆನೆರಿಕ್ ಮೆಡಿಸಿನ್: ಭಾರತದಿಂದ ಅಮೆರಿಕಾಗೆ ಆಮದಾಗುವ ಔಷಧಗಳು ಯುಎಸ್‌ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆ.
- ಅಮೆರಿಕದಲ್ಲಿ ಭಾರತದ ಸಮುದ್ರಾಹಾರಕ್ಕೆ ಭಾರೀ ಬೇಡಿಕೆಯಿದೆ. ಇದೀಗ ಸುಂಕಗಳನ್ನು ಇಳಿಸಿರುವುದರಿಂದ ಅಲ್ಲಿನ ಗ್ರಾಹಕರಿಗೆ ಭಾರತೀಯ ಸಮುದ್ರಾಹಾರಗಳು ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ. ಬೇಡಿಕೆ ಹೆಚ್ಚಾದಂತೆ, ಭಾರತದಿಂದ ರಫ್ತು ಪ್ರಮಾಣವೂ ಹೆಚ್ಚಾಗಲಿದೆ.


Click it and Unblock the Notifications