ಸುಂಕದ ಜಟಾಪಟಿ ನಡೆಸುತ್ತಿದ್ದ ಅಮೆರಿಕ ಮತ್ತು ಭಾರತದ ವಾರ್ ನಿಲ್ಲೋ ಸಮಯ ಹತ್ತಿರ ಬಂದಿದೆ. ಅಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಫ್ತು ಮೇಲೆ ವಿಧಿಸಿದ್ದ 50% ಸುಂಕ, ಒಂದು ರೀತಿಯಲ್ಲಿ ಎರಡು ದೇಶಗಳ ನಡುವಿನ ಸಂಬಂಧದ ಮಧ್ಯೆ ಬಿರುಕಾಗಿ ನಿಂತಿದ್ದು. ಆದರೆ ಇದಾದ ಕೆಲವೇ ದಿನಗಳಲ್ಲಿ ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮತ್ತೆ ನಡೆಸಿದ್ದು, ಆ ಬಿರುಕನ್ನ ಅಳಿಸಿದೆ ಅನ್ನಬಹುದು. ಈಗ ಈ ವ್ಯಾಪಾರ ಒಪ್ಪಂದ ಹೊಸ ಹಂತ ತಲುಪಿದೆ. ಈಗ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳು, ಅಂತಿಮ ಹಂತದಲ್ಲಿವೆ. ಬಹುತೇಖ ಎಲ್ಲಾ ವಿಷಯಗಳಲ್ಲಿ ಒಪ್ಪಂದ ತಲುಪಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಐದು ಸುತ್ತಿನ ಮಾತುಕತೆ ಪೂರ್ಣ:
ಈಗಾಗಲೇ ಭಾರತ ಮತ್ತು ಅಮೆರಿಕ ನಡುವೆ ಐದು ಸುತ್ತಿನ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಅಧಿಕಾರಿಗಳು ತಿಳಿಸಿರುವ ಮಾಹಿತಿ ಪ್ರಕಾರ, ಈ ಚರ್ಚೆಗಳು ಕೂಡ ಯಾವುದೇ ವೈಮನಸ್ಸು ಇಲ್ಲದೇ ಸುಗಮವಾಗಿ ನಡೆದಿದೆ. ಸದ್ಯಕ್ಕೇನಿದ್ರೂ ಸಣ್ಣ ಪುಟ್ಟ ಭಿನ್ನಾಪ್ರಾಯಗಳನ್ನು ಬಗೆಹರಿಸೋದೊಂದೇ ಬಾಕಿ.
ರಷ್ಯಾದ ತೈಲದ ವಿಷಯದಲ್ಲಿ ಕಠಿಣ ನಿಲುವು:
ಡೊನಾಲ್ಡ್ ಟ್ರಂಪ್ ಆಡಳಿತವು ರಷ್ಯಾಕೆ ಸಾಗುವ ಕಚ್ಚಾ ತೈಲದ ರಫ್ತು ಕುರಿತು ಗಂಭೀರ ನಿಲುವು ಕೈಗೊಂಡಿದೆ. ಈ ಹಿನ್ನೆಲೆಯಲ್ಲೆ ಭಾರತದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಅಮೆರಿಕ ಶೇಕಡಾ 50 ರಷ್ಟು ಸುಂಕ ವಿಧಿಸಿದೆ. ಜೊತೆಗೆ, ರಷ್ಯಾದ ಪ್ರಮುಖ ತೈಲ ಕಂಪನಿಗಳಾದ ರೋಸ್ನೆಫ್ಟ್ (Rosneft) ಮತ್ತು ಲುಕೋಯಿಲ್ (Lukoil) ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಟ್ರಂಪ್ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, ಭಾರತವು ಮುಂದಿನ ತಿಂಗಳುಗಳಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತ ಆತುರದಲ್ಲಿ ಒಪ್ಪಂದ ಮಾಡುವುದಿಲ್ಲ:
ಇದಕ್ಕಿಡೆಯಲ್ಲಿ, ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತವು ಯಾವುದೇ ವ್ಯಾಪಾರ ಒಪ್ಪಂದಕ್ಕೆ ಆತುರದಲ್ಲಿ ಸಹಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಜರ್ಮನಿಯ ಬರ್ಲಿನ್ ಡೈಲಾಗ್ ವೇದಿಕೆಯಲ್ಲಿ ಮಾತನಾಡುತ್ತಾ, ನಾವು ಯುರೋಪಿಯನ್ ಯೂನಿಯನ್ ಹಾಗೂ ಅಮೆರಿಕದೊಂದಿಗೆ ಸಕ್ರಿಯ ಚರ್ಚೆ ನಡೆಸುತ್ತಿದ್ದೇವೆ. ಆದರೆ ಯಾವುದೇ ಗಡುವಿನ ಒತ್ತಡದಲ್ಲಿ ಅಥವಾ ತ್ವರಿತ ನಿರ್ಧಾರಗಳಲ್ಲಿ ನಾವು ತೊಡಗುವುದಿಲ್ಲ. ನಮ್ಮ ರಾಷ್ಟ್ರೀಯ ಹಿತಾಸಕ್ತಿಯೇ ಮೊದಲ ಆದ್ಯತೆ, ಎಂದು ಹೇಳಿದ್ದಾರೆ.
ದೀರ್ಘಾವಧಿಯ ದೃಷ್ಟಿಯಿಂದ ವ್ಯಾಪಾರ ನೀತಿ:
ಗೋಯಲ್ ಅವರ ಪ್ರಕಾರ, ವ್ಯಾಪಾರ ಒಪ್ಪಂದಗಳು ತಾತ್ಕಾಲಿಕ ಪ್ರಯೋಜನಕ್ಕಾಗಿ ಅಲ್ಲ, ದೀರ್ಘಾವಧಿಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡೇ ರೂಪಗೊಳ್ಳಬೇಕು. ಅವರು ಹೇಳಿದರು, "ಯಾರಾದರೂ ನೀವು ಯುರೋಪಿಯನ್ ಯೂನಿಯನ್ ಜೊತೆ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂದು ಹೇಳಿದರೆ, ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ಭಾರತವು ತನ್ನ ಸ್ನೇಹಿತರನ್ನು ತನ್ನ ಹಿತಾಸಕ್ತಿಯ ಆಧಾರದ ಮೇಲೆ ಆಯ್ಕೆ ಮಾಡುತ್ತದೆ."
ಭಾರತ-ಅಮೆರಿಕ ಒಪ್ಪಂದ ಶೀಘ್ರದಲ್ಲೇ ಸಾಧ್ಯ:
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳು ಕಳೆದ ಕೆಲವು ವರ್ಷಗಳಲ್ಲಿ ಏರಿಳಿತ ಕಂಡಿದ್ದರೂ, ಇತ್ತೀಚಿನ ಮಾತುಕತೆಗಳು ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿರುವುದಾಗಿ ತೋರುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ನ್ಯಾಯಯುತ ವ್ಯಾಪಾರ ಪರಿಸ್ಥಿತಿಗಳನ್ನು ನಿರ್ಮಿಸಲು ಸಿದ್ಧವಾಗಿವೆ. ಎಲ್ಲಾ ಚರ್ಚೆಗಳು ಯಶಸ್ವಿಯಾಗಿ ಪೂರ್ಣಗೊಂಡರೆ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ.


Click it and Unblock the Notifications