ಭಾರತದ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿರುವ ಹಣದುಬ್ಬರ, ಈ ವರ್ಷದ ಫೆಬ್ರವರಿಯಲ್ಲಿ ಶೇ. 2.38 ಕ್ಕೆ ಏರಿಕೆಯಾಗಿದೆ. ಇದನ್ನು ನಕಾರಾತ್ಮಕ ಹಾಗೂ ನಕಾರಾತ್ಮಕ ಬೆಳವಣಿಗೆ ಮಿಶ್ರಿತ ಪರಿಣಾಮ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇದು 2025ರ ಜನವರಿಯಲ್ಲಿ ಶೇ. 2.31 ಇತ್ತು. ಈಗ ಉತ್ಪನ್ನಗಳು, ಆಹಾರೇತರ ವಸ್ತುಗಳು, ಜವಳಿ ತಯಾರಿಕೆ ಮತ್ತು ಇತರ ಉತ್ಪಾದನೆಯಗಳ ಬೆಲೆಯಲ್ಲಿ ಹೆಚ್ಚಳವಾದ ಕಾರಣ, ಹಣದುಬ್ಬರವೂ ಏರಿಕೆಯಾಗಿದೆ.

ಇನ್ನು ಫೆಬ್ರವರಿಯಲ್ಲಿ ತಯಾರಿಸಿದ ಆಹಾರ ಉತ್ಪನ್ನಗಳ ಹಣದುಬ್ಬರ, ಶೇಕಡ 11.06 ಕ್ಕೆ ಜಿಗಿದಿದೆ. ವಿಶೇಷವಾಗಿ ಸಸ್ಯಜನ್ಯ ಎಣ್ಣೆಯ ದರ ಶೇ. 33.59 ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಹಾಗೆಯೇ ಪಾನೀಯಗಳ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದ್ದು, ಶೇಕಡ 1.66 ಕ್ಕೆ ಏರಿಕೆಯಾಗಿದೆ. ಇನ್ನು ತರಕಾರಿಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಆದರೆ ಫೆಬ್ರವರಿಯಲ್ಲಿ ಇದು ಕಡಿಮೆಯಾದ ಕಾರಣ ಈ ಈ ವಿಭಾಗದ ಹಣದುಬ್ಬರದ ದರದಲ್ಲಿ ಇಳಿಮುಖ ಕಂಡುಬಂದಿದೆ. ಅಂದರೆ ಆಲೂಗಡ್ಡೆಯ ಬೆಲೆ ಶೇ. 74.28 ರಿಂದ ಶೇ. 27.54 ಕ್ಕೆ ಕುಸಿದಿದೆ. ಇಂತಹ ಕುಸಿತದಿಂದಾಗಿ ತರಕಾರಿಗಳ ಒಟ್ಟಾರೆ ಬೆಲೆಯಲ್ಲಿ ಸ್ವಲ್ಪ ತಗ್ಗುವಿಕೆ ಕಂಡುಬಂದಿದೆ. ಅದರಂತೆ ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಕೂಡ ಹಣದುಬ್ಬರವು ಇಳಿಕೆಯಾಗಿರುವುದು ಕಾಣಬಹುದಾಗಿದೆ. ಅಂದರೆ ಜನವರಿಯಲ್ಲಿ ಇಂಧನ ವಿಭಾಗದ ಹಣದುಬ್ಬರ ಶೇಖಡ 2.78 ಇತ್ತು, ಆದರೆ ಫೆಬ್ರವರಿಯಲ್ಲಿ ಇದು ಶೇ. 0.71 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಇಂಧನದ ಒಟ್ಟಾರೆ ದರ ಸ್ವಲ್ಪ ಮಟ್ಟಿಗೆ ಸ್ಥಿರಗೊಂಡಿದೆ.
ಇದಕ್ಕೆ ವಿರುದ್ಧವಾಗಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರವು ಶೇಕಡ, 3.61ಕ್ಕೆ ಇಳಿದಿದೆ. ಇದು ಕಳೆದ ಏಳು ತಿಂಗಳ ಕನಿಷ್ಠ ಮಟ್ಟದ್ದಾಗಿದೆ ಎಂದು ಹೇಳಬಹುದಾಗಿದೆ. ಈ ಕುಸಿತದ ಹಿಂದಿನ ಪ್ರಮುಖ ಕಾರಣ ಕಾರಣ ತರಕಾರಿಗಳ ಮತ್ತು ಪ್ರೋಟೀನ್ ಸಮೃದ್ಧ ಆಹಾರದ ಬೆಲೆಯಲ್ಲಿ ದರ ಕುಸಿದಿರುವುದಾಗಿದೆ
ಇನ್ನು ಹಣದುಬ್ಬರದ ಇಳಕೆಯಿಂದ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ಸಮಿತಿಗೆ, ದರ ಕಡಿತದ ಬಗ್ಗೆ ಗಮನ ಹರಿಸಲು ಹೆಚ್ಚು ಸಹಾಯಕವಾಗಲಿದೆ. ಆರ್‍ಬಿಐ ಫೆಬ್ರವರಿಯಲ್ಲಿ MPC ತನ್ನ ನೀತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಕಡಿಮೆ ಮಾಡಿತ್ತು. ಇದು ಐದು ವರ್ಷಗಳಲ್ಲಿ ಮೊದಲ ಬಾರಿಗೆ ಕಂಡುಬಂದ ದರ ಕಡಿತವಾಗಿದೆ. ಹಾಗೆಯೇ ಏಪ್ರಿಲ್ 2025ರ ಸಭೆಯಲ್ಲಿ RBI ಮತ್ತಷ್ಟು ದರ ಕಡಿತ ಮಾಡಬಹುದು. ಇದರಿಂದ ರೆಪೊ ದರ ಶೇಕಡ 6ಕ್ಕೆ ಇಳಿಯುವ ಸಾಧ್ಯತೆ ಇದೆ.
ಇನ್ನು ಹಣದುಬ್ಬರ ನಿಯಂತ್ರಣ ಮತ್ತು ನೀತಿ ದರದ ಇಳಿಕೆ ದೇಶದ ಆರ್ಥಿಕತೆ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆ ಕೂಡ ಇದೆ. ಅದು ಹೇಗೆಂದರೆ ಬಡ್ಡಿ ದರ ಕಡಿತಗೊಂಡರೆ ಸಾಲು ಪಡೆಯಲು ಜನರಿಗೆ ಸುಲಭವಾಗುತ್ತದೆ. ಹೀಗೆ ಇದು ವ್ಯವಹಾರಗಳು ಮತ್ತು ಗ್ರಾಹಕರಿಗೆ ಲಾಭ ನೀಡಬಹುದು. ಹಾಗೆಯೇ, ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಕಡಿಮೆಯಾಗುತ್ತಿರುವುದರಿಂದ ದಿನನಿತ್ಯದ ಉಪಭೋಗ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣದಲ್ಲಿರಬಹುದು. ಒಟ್ಟಿನಲ್ಲಿ, ಫೆಬ್ರವರಿ 2025ರಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಸ್ವಲ್ಪ ಏರಿದರೂ, ಚಿಲ್ಲರೆ ಹಣದುಬ್ಬರ ಇಳಿಮುಖವಾಗಿರುವುದು ಆರ್ಥಿಕತೆಗೆ ಅನುಕೂಲಕರ ಬೆಳವಣಿಗೆ. ಮುಂದಿನ ದಿನಗಳಲ್ಲಿ RBI ಕೈಗೊಳ್ಳುವ ನೀತಿ ನಿರ್ಧಾರಗಳು ಹಣದುಬ್ಬರದ ಸ್ಥಿರತೆ ಮತ್ತು ಆರ್ಥಿಕ ವೃದ್ಧಿಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಗಮನಿಸುವ ಅಗತ್ಯವಿದೆ.


Click it and Unblock the Notifications