ಬೆಂಗಳೂರು, ಜುಲೈ 4: ಫೋರ್ಬ್ಸ್ ವರದಿ ಮಾಡಿರುವಂತೆ ಸೈರಸ್ ಮಿಸ್ತ್ರಿ ಅವರ ಪುತ್ರರಾದ ಫಿರೋಜ್ ಮತ್ತು ಜಹಾನ್ 30 ವರ್ಷದೊಳಗಿನ ಶ್ರೀಮಂತ ಬಿಲಿಯನೇರ್‌ಗಳಾಗಿ ಹೊರಹೊಮ್ಮಿದ್ದಾರೆ.
2024 ರ ಇತ್ತೀಚಿನ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ , ಜಾಗತಿಕವಾಗಿ 33 ವರ್ಷಕ್ಕಿಂತ ಕಡಿಮೆ ವಯಸ್ಸಿನ 25 ಕಿರಿಯ ಬಿಲಿಯನೇರ್‌ಗಳು ಒಟ್ಟಾರೆಯಾಗಿ $110 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ. ಟಾಟಾ ಸನ್ಸ್‌ನ ದಿವಂಗತ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಪುತ್ರರಾದ ಜಹಾನ್ ಮತ್ತು ಫಿರೋಜ್ ಮಿಸ್ತ್ರಿ ಅವರು 30 ವರ್ಷದೊಳಗಿನ ಯುವ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸಹೋದರರ ಜಹಾನ್ ಮತ್ತು ಫಿರೋಜ್ ಮಿಸ್ತ್ರಿ ಅವರ ಒಟ್ಟು ನಿವ್ವಳ ಸಂಪತ್ತು $ 9.8 ಬಿಲಿಯನ್ ಅಥವಾ ರೂ 81,631 ಕೋಟಿಗೂ ಹೆಚ್ಚು. 25 ವರ್ಷದ ಜಹಾನ್ ಮಿಸ್ತ್ರಿ ಮತ್ತು 27 ವರ್ಷದ ಫಿರೋಜ್ ಮಿಸ್ತ್ರಿ ಅವರು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರಿಂದ ಅನುವಂಶಿಕವಾಗಿ ಪಡೆದುಕೊಂಡಿದ್ದಾರೆ. ದುರಂತವೆಂದರೆ, ಸೈರಸ್ ಮಿಸ್ತ್ರಿ 2022 ರಲ್ಲಿ ವಾಹನ ಅಪಘಾತದಲ್ಲಿ ನಿಧನರಾದರು.
ಜಹಾನ್ ಮತ್ತು ಫಿರೋಜ್ ಮಿಸ್ತ್ರಿ ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದರೂ, ಇವರಿಬ್ಬರೂ ಐರಿಶ್ ಪ್ರಜೆಗಳಾಗಿದ್ದಾರೆ. ತಂದೆಯ ನಿಧನದ ನಂತರ ಟಾಟಾ ಸನ್ಸ್‌ನಲ್ಲಿನ ಕುಟುಂಬದ18.4% ನ ಒಂದು ಭಾಗವನ್ನು ಆನುವಂಶಿಕವಾಗಿ ಪಡೆದಿದ್ದು, ಈ ಮೂಲಕ ಅವರು ವಿಶ್ವದ ಅಗ್ರ 25 ಕಿರಿಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಯಿತು.
ಡಿಸೆಂಬರ್ 2022 ತಮ್ಮ ಸಂಸ್ಥೆಗೆ ಸೇರ್ಪಡೆಗೊಂಡು ವಿವಿಧ ಕ್ಷೇತ್ರಗಳಲ್ಲಿ ಹದಿನೆಂಟು ತಿಂಗಳ ಕಾಲ ಕೆಲಸ ಮಾಡಿದ ನಂತರ, ಫಿರೋಜ್ ಮತ್ತು ಜಹಾನ್ ಮಿಸ್ತ್ರಿ ಕಾರ್ಯನಿರ್ವಾಹಕ ಸ್ಥಾನಗಳನ್ನು ಪಡೆದರು. ಫಿರೋಜ್ ಮಿಸ್ತ್ರಿ ವಾರ್ವಿಕ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದುಕೊಂಡಿದ್ದು, ಜಹಾನ್ ಮಿಸ್ತ್ರಿ ತಮ್ಮ ಶಿಕ್ಷಣವನ್ನು ಯೇಲ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.
ಫಿರೋಜ್ ಮತ್ತು ಜಹಾನ್ ಮಿಸ್ತ್ರಿಯವರ ತಂದೆ ಸೈರಸ್ ಮಿಸ್ತ್ರಿ ಅವರು ಟಾಟಾ ಸಮೂಹದ ಪ್ರಮುಖ ಘಟಕವಾದ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾಗಿದ್ದರು. ಕುಟುಂಬವು ಟಾಟಾ ಸನ್ಸ್‌ನಲ್ಲಿ 18.4% ಪಾಲನ್ನು ಹೊಂದಿದೆ. ಈ ಸಂಸ್ಥೆಗೆ ಅಡಿಪಾಯವನ್ನು ಅವರ ಅಜ್ಜ ಪಲ್ಲೋಂಜಿ ಮಿಸ್ತ್ರಿ ಹಾಕಿದ್ದರು.
157 ವರ್ಷ ಹಳೆಯ ಶಪೂರ್ಜಿ ಪಲ್ಲೋಂಜಿ (SP) ಗ್ರೂಪ್'ನ್ನು ಪ್ರಸ್ತುತ ಶಪೂರ್ ಮಿಸ್ತ್ರಿ ಮುನ್ನಡೆಸುತ್ತಿದ್ದಾರೆ. ಮಿಸ್ತ್ರಿ ಕುಟುಂಬವು ಟಾಟಾ ಕುಟುಂಬಕ್ಕೆ ನಿಕಟವಾಗಿದ್ದು ಇಬ್ಬರೂ ಕೆಲವು ವರ್ಷಗಳಿಂದ ಹಲವಾರು ಯೋಜನೆಗಳಲ್ಲಿ ಪಾಲುದಾರರಾಗಿದ್ದಾರೆ. ಶಾಪೂರ್ ಮಿಸ್ತ್ರಿಯವರು ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು ಈ ಗ್ರೂಪ್ ಎಂಜಿನಿಯರಿಂಗ್ ಮತ್ತು ನಿರ್ಮಾಣ, ರಿಯಲ್ ಎಸ್ಟೇಟ್, ಶಿಪ್ಪಿಂಗ್, ಜವಳಿ, ಗೃಹೋಪಯೋಗಿ ವಸ್ತುಗಳು, ಬಯೋಟೆಕ್ನಾಲಜಿ ಇತ್ಯಾದಿ ವೈವಿಧ್ಯಮಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಗಮನಾರ್ಹವಾದ ಅಂಶವೆಂದರೆ ಟಾಟಾ ಸನ್ಸ್ನ ಏಕೈಕ ಅತಿದೊಡ್ಡ ಷೇರುದಾರ ಎಸ್ಪಿ ಗ್ರೂಪ್ ಆಗಿದೆ.
ಫೋರ್ಬ್ಸ್‌ನ ಇತ್ತೀಚಿನ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ ಬ್ರೆಜಿಲ್‌ನ ಲಿವಿಯಾ ವೋಗ್ಟ್ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್. ಆಗಿದ್ದಾರೆ. ಲಿವಿಯಾವಿದ್ಯುತ್ ಉಪಕರಣಗಳ ತಯಾರಕರಾದ WEG ಯ ಷೇರನ್ನು ಹೊಂದಿದ್ದಾರೆ. 19 ವರ್ಷ ವಯಸ್ಸಿನವರ ನಿವ್ವಳ ಮೌಲ್ಯದ ಅಂದಾಜು $1.1 ಬಿಲಿಯನ್ ಆಗಿದೆ.


Click it and Unblock the Notifications