ಜಾಗತಿಕವಾಗಿ ಅನಿಶ್ಚಿತ ಹಾಗೂ ಆರ್ಥಿಕವಾಗಿ ಆತಂಕಕಾರಿ ಬೆಳವಣಿಗೆ ಇರುವಾಗ ಭಾರತದ ಆರ್ಥಿಕತೆ ಮಾತ್ರ ಅತೀ ಉತ್ತಮವಾಗಿಯೇ ಇರಲಿದೆ ಎಂಬುವುದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಭಿಪ್ರಾಯವಾಗಿದೆ. ಹೌದು, "ಭಾರತದ ಆರ್ಥಿಕತೆಯು ಈಗಿನಂತೆ ಉತ್ತಮವಾಗಿರಲಿದೆ. ಹಾಗೆಯೇ ವಿಶ್ವದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ," ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಐಎಂಎಫ್ 2023-24ರ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಕುಸಿತವಾಗಲಿದೆ ಎಂದು ಹೇಳಿದೆ. ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ದರವನ್ನು ಶೇಕಡ 6.1ರಿಂದ ಶೇಕಡ 5.9ಕ್ಕೆ ಇಳಿಕೆ ಮಾಡಿದೆ. ಈ ಸಂದರ್ಭದಲ್ಲೇ ಐಎಂಎಫ್ ಅಧಿಕಾರಿಗಳು ಭಾರತವು ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಒಂದಾಗಿ ಉಳಿಯಲಿದೆ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆಯೂ ಐಎಂಎಫ್ ಅಧಿಕಾರಿಗಳು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮುಂದಿನ ಹಣಕಾಸು ವರ್ಷದಲ್ಲಿಜಾಗತಿಕ ಬೆಳವಣಿಗೆಗೆ ಭಾರತದ ಕೊಡುಗೆ ಅಪಾರವಾಗಿರಲಿದೆ ಎಂದು ತಿಳಿಸಿದ್ದರು.

"ಭಾರತದ ಆರ್ಥಿಕತೆಯು ಉತ್ತಮವಾಗಿ ಇರಲಿದೆ. ಹಾಗೆಯೇ ಏಷ್ಯಾದ ಆರ್ಥಿಕತೆಯಲ್ಲಿ ಅತೀ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಉಳಿಯಲಿದೆ. ಅಷ್ಟು ಮಾತ್ರವಲ್ಲದೆ ಜಾಗತಿಕವಾಗಿ ಅತೀ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ದೇಶವಾಗಿ ಭಾರತದ ಉಳಿಯಲಿದೆ," ಎಂದು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಉಪ ನಿರ್ದೇಶಕರು ಆದ ಅನ್ನಿ-ಮೇರಿ ಗುಲ್ಡೆ-ವುಲ್ಫ್ ಹೇಳಿದ್ದಾರೆ. ಹಾಗೆಯೇ ಇತ್ತೀಚೆಗಿನ ಡೇಟಾಗೆ ಅನುಗುಣವಾಗಿ ಬೆಳವಣಿಗೆ ದರವನ್ನು ಕುಗ್ಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತ- ಚೀನಾ ವಿಶ್ವದಲ್ಲೇ ಪ್ರಮುಖ ಆರ್ಥಿಕತೆ
ಇನ್ನು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಉಪ ನಿರ್ದೇಶಕರು ಆದ ಅನ್ನಿ-ಮೇರಿ ಗುಲ್ಡೆ-ವುಲ್ಫ್ ಭಾರತ ಹಾಗೂ ಚೀನಾದ ಮೇಲೆ ಅತೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಭಾರತ ಹಾಗೂ ಚೀನಾ ಅತೀ ಪ್ರಮುಖವಾದ ದೇಶವಾಗಲಿದೆ. ಜಾಗತಿಕ ಆರ್ಥಿಕತೆಗೆ ಈ ಎರಡು ದೇಶಗಳು ಅತೀ ಪ್ರಮುಖವಾದ ಕೊಡುಗೆನ್ನು ನೀಡಲಿದೆ. ಈ ಅತೀ ವೇಗವಾಗಿ ಬೆಳೆಯುತ್ತಿರುವ ಎರಡು ದೇಶಗಳ ಆರ್ಥಿಕತೆಯು ಎಲ್ಲ ತಂತ್ರಜ್ಞಾನಗಳ ಮೂಲವಾಗಲಿದೆ," ಎಂದು ಅಭಿಪ್ರಾಯಿಸಿದ್ದಾರೆ.
"ಆರ್ಥಿಕ ತೊಂದರೆಯನ್ನು ತಪ್ಪಿಸಲು ಭಾರತ ಮತ್ತು ಚೀನಾವು ಸಹಾಯ ಮಾಡಬಹುದಾಗಿದೆ. ಐಎಂಎಫ್ ಈಗಾಗಲೇ ಈ ಆರ್ಥಿಕ ತೊಂದರೆಗಳ ಬಗ್ಗೆ ತಿಳಿಸಿದೆ. ಈ ಸಂಕಷ್ಟಗಳನ್ನು ನಿಭಾಯಿಸುವಲ್ಲಿ ಭಾರತ ಹಾಗೂ ಚೀನಾ ಅತೀ ಪ್ರಮುಖವಾದ ಪಾತ್ರವನ್ನು ವಹಿಸಬಹುದಾಗಿದೆ. ಭಾರತ ಚೀನಾದ ಆರ್ಥಿಕತೆ ಬೆಳವಣಿಗೆಯೂ ಜಾಗತಿಕವಾಗಿ ಸ್ಥಿರತೆ ಹಾಗೂ ಬೆಳವಣಿಗೆಯನ್ನು ತರಲಿದೆ. ಚೀನಾದ ಆರ್ಥಿಕ ಬೆಳವಣಿಗೆ ಅಂದಾಜು 2022ರಲ್ಲಿ ಶೇಕಡ 3.0 ಆಗಿತ್ತು, 2023ರಲ್ಲಿ ಶೇಕಡ 5.2 ಆಗಿದೆ. ಚೀನಾದಲ್ಲಿ ಅತೀ ಅಧಿಕ ಬೆಳವಣಿಗೆ ಜಾಗತಿಕವಾಗಿ ಬೆಳವಣಿಗೆಗೆ ಕಾರಣವಾಗಲಿದೆ," ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಐಎಂಎಫ್ ಹೇಳಿರುವುದು ಏನು?
ಫೆಬ್ರವರಿಯಲ್ಲಿ ದೇಶದಲ್ಲಿ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಈ ನಡುವೆ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕವಾಗಿ ಬೆಳವಣಿಗೆ ದರವನ್ನು ಬಿಡುಗಡೆ ಮಾಡಿದೆ. ಮಾರ್ಚ್ 31ಕ್ಕೆ ಅಂತ್ಯವಾಗುವ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇಕಡ 6.8 ಆಗಿದ್ದು, ಯಾವುದೇ ಬದಲಾವಣೆಯನ್ನು ಐಎಂಎಫ್ ಮಾಡಿಲ್ಲ. ಆದರೆ ಮುಂದಿನ 2023-24ನೇ ಹಣಕಾಸು ವರ್ಷದಲ್ಲಿ ದರವು ಶೇಕಡ ಶೇ 6.1ಕ್ಕೆ ಇಳಿಯಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.
ಹಾಗೆಯೇ ವಿಶ್ವದ ಮೂರನೇ ಒಂದು ಭಾಗದಲ್ಲಿ 2023ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ. ಈ ವರ್ಷದ ಈ ಹಿಂದಿನ ವರ್ಷಕ್ಕಿಂತ ತೀರಾ ಕಷ್ಟಕರವಾದ ವರ್ಷವಾಗಲಿದೆ. ಯುಎಸ್, ಚೀನಾ ಹಾಗೂ ಇಯುವಿನಲ್ಲಿ ಅತೀ ಕೆಟ್ಟ ಸ್ಥಿತಿ ಉಂಟಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಈ ಹಿಂದೆ ಹೇಳಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications