38 ವರ್ಷದ ಕುವೈತ್ ವಾಸಿಯಾದ ಭಾರತೀಯ ವಲಸಿಗರೊಬ್ಬರಿಗೆ 4.08 ಮಿಲಿಯನ್ ಯುಎಸ್ ಡಿ ಮೊತ್ತದ ಹಣ ಯುಎಇ ರಾಫಲ್ ಡ್ರಾ ಸ್ಪರ್ಧೆಯಲ್ಲಿ ಬಂದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 40 ಲಕ್ಷದ 80 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ಅಂದರೆ, ಭಾರತದ ರುಪಾಯಿ ಲೆಕ್ಕದಲ್ಲಿ 29,83,29,600. ಹೌದು, ನೀವು ಸರಿಯಾಗಿಯೇ ಓದುತ್ತಿದ್ದೀರಿ, 29.83 ಕೋಟಿ ರುಪಾಯಿ ಬಹುಮಾನವೇ.
ಬಿಡಿ ಭಾಗಗಳ ಕಂಪೆನಿಯೊಂದರಲ್ಲಿ ಮೇಲ್ವಿಚಾರಕರಾಗಿರುವ ನೊಬಿನ್ ಮ್ಯಾಥ್ಯೂ ಅವರಿಗೆ ಈ ಬಹುಮಾನ ಬಂದಿದೆ. "ನಿಮಗೆ ಈ ಬಹುಮಾನ ಬಂದಿದೆ," ಎಂದು ಫೋನ್ ಮಾಡಿ ಅಬುಧಾಬಿ ಬಿಗ್ ಟಿಕೆಟ್ ಡ್ರಾ ಆಯೋಜಕರು ತಿಳಿಸಿದಾಗ ಮ್ಯಾಥ್ಯೂ ಅವರಿಗೆ ಅಚ್ಚರಿಯೋ ಅಚ್ಚರಿಯಂತೆ. ಅಂದ ಹಾಗೆ ಮ್ಯಾಥ್ಯೂ ಖರೀದಿಸಿದ್ದ ಟಿಕೆಟ್ ಸಂಖ್ಯೆ 254806.

ಮ್ಯಾಥ್ಯೂ ತಿಂಗಳ ವರಮಾನ 7,100 ದಿರ್ಹಾಮ್ (ಭಾರತದ ರುಪಾಯಿ ಲೆಕ್ಕದಲ್ಲಿ 1,41,000). ಈಗಿನ ಲಾಟರಿ ಬಹುಮಾನದಿಂದ ತನ್ನ ಕುಟುಂಬಕ್ಕೆ ದೊಡ್ಡ ಸಹಾಯ ಆಗಲಿದೆ ಎಂದು ಅವರು ಹೇಳಿದ್ದಾರೆ. ಮ್ಯಾಥ್ಯೂ ಹೆಂಡತಿ ಡಯಟಿಷಿಯನ್ ಆಗಿದ್ದು, ಈ ದಂಪತಿಗೆ ಐದು ವರ್ಷದ ಮಗ ಇದ್ದಾನೆ.
ಒಮನ್ ನಲ್ಲಿದ್ದ ಮ್ಯಾಥ್ಯೂ 2007ರಲ್ಲಿ ಕುವೈತ್ ಗೆ ಸ್ಥಳಾಂತರ ಆಗಿದ್ದಾರೆ.


Click it and Unblock the Notifications