ನವದೆಹಲಿ, ಆಗಸ್ಟ್ 23: ಕೇಂದ್ರ ಸರ್ಕಾರವು ಇದೀಗ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಎರಡನೇ ಹಂತದ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರವನ್ನುಘೋಷಣೆ ಮಾಡುವ ನಿರೀಕ್ಷೆಯಿದೆ. ಅದರಂತೆ 2024 ಜುಲೈ ಸೆಪ್ಟಂಬರ್‌ನಿಂದ ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆ ಹಾಗೂ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ದೊರೆಯಲಿದೆ. ಈ ಪ್ರಧಾನಿ ನರೇಂದ್ರ ಮೋದಿ ಅವರು ಈ ಅವಧಿಗೆ ಅನ್ವಯವಾಗುವಂತೆ ಶೇ.3ರಷ್ಟು ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಮಂಜೂರು ಮಾಡುವ ಸಾಧ್ಯತೆಯಿದೆ. ಡಿಎ ಅಥವಾ ತುಟ್ಟಿ ಭತ್ಯೆಯನ್ನು ಸರ್ಕಾರಿ ನೌಕರರಿಗೆ ಹಾಗೂ ಡಿಆರ್ ಅಥವಾ ಪಿಂಚಣಿ ಪರಿಹಾರವನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ.
ಒಂದುವೇಳೆ ಕೇಂದ್ರ ಸರ್ಕಾರವು ಈ ಬಾರಿ ಶೇ.3ರಷ್ಟು ಡಿಎ ಹಾಗೂ ಡಿಆರ್ ಅನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದ್ದು, ಇದರೊಂದಿಗೆ ತುಟ್ಟಿ ಭಟ್ಟೆಯು ಶೇ.53ಕ್ಕೆ ಏರಿಕೆಯಾಗಲಿದೆ. ಈ ನಡುವೆ, ಕೋವಿಡ್-19ರ ಸಾಂಕ್ರಾಮಿಕ ಸಮಯದಲ್ಲಿ ಮುಂದೂಡಲ್ಪಟ್ಟ 18 ತಿಂಗಳ ಡಿಎ ಹಾಗೂ ಡಿಆರ್ ಬಾಕಿಗಳನ್ನು ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.

ಸರ್ಕಾರವು ಶೇ.3ರಷ್ಟು ಡಿಎ ಹೆಚ್ಚಳ ಮಾಡುವುದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಷ್ಟು ಮತ್ತಷ್ಟು ಹೆಚ್ಚಳ ಉಂಟಾಗಲಿದೆ.ತುಟ್ಟಿ ಭತ್ಯೆಯು ಹಣದುಬ್ಬರವನ್ನು ಎದುರಿಸುವುದಕ್ಕೆ ಸಹಾಯ ಮಾಡುತ್ತದೆ ಹಾಗೂ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುತ್ತದೆ.ಉದಾಹರಣೆಗೆ ಒಂದುವೇಳೆ ಕೇಂದ್ರ ಸರ್ಕಾರಿ ನೌಕರರೊಬ್ಬರು ತಿಂಗಳಿಗೆ 55,200 ಮೂಲ ವೇತನವನ್ನು ಹೊಂದಿದ್ದರೆ ಅವರ ತುಟ್ಟಿ ಭಟ್ಟೆಯು ಶೇ.50ರಷ್ಟು ಅಂದರೆ 27,600ರೂ. ಆಗಿರುತ್ತದೆ. ಈಗ ಡಿಎ ಶೇ.53ರಷ್ಟು ಏರಿಕೆಯಾದರೆ ಅದು 29,256ರೂ.ಗೆ ಹೆಚ್ಚಳವಾಗಲಿದೆ.
ಇದರೊಂದಿಗೆ ಆ ಉದ್ಯೋಗಿಯು ತಮ್ಮ ಸಂಬಳದಲ್ಲಿ 1.656ರೂ. ಏರಿಕೆ ಪಡೆದು ಅದು 27,600ರೂ. ನಿಂದ 29,256ರೂ.ಗೆ ಏರಿಕೆಯಾಗುತ್ತದೆ. ಹೆಚ್ಚುತ್ತಿರುವ ಜೀವನ ವೆಚ್ಚಗಳ ನಡುವೆ ಸರ್ಕಾರಿ ನೌಕರರ ಕೊಳ್ಳುವ ಶಕ್ತಿಯನ್ನು ಕಾಪಾಡಿಕೊಳ್ಳಲು ಈ ಆವರ್ತಕ ಡಿಎ ಹೊಂದಾಣಿಕೆಯು ಅತ್ಯಗತ್ಯ.
ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಿಂದ ತುಟ್ಟಿ ಭತ್ಯೆ ಮತ್ತು ಪಿಂಚಣಿ ಪರಿಹಾರ ಹೆಚ್ಚಳಗಳನ್ನು ಸಾಮಾನ್ಯವಾಗಿ ಪೂರ್ವಾನ್ವಯವಾಗುತ್ತದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರವು ಪ್ರತಿಬಾರಿಯೂ ತುಟ್ಟಿ ಭತ್ಯೆ ಹಾಗೂ ಪಿಂಚಣಿ ಪರಿಹಾರವನ್ನು ಘೋಷಣೆ ಮಾಡಿದರೆ ಅದು ಅದಕ್ಕಿಂತ ಹಿಂದಿನ ತಿಂಗಳ ಬಾಕಿಯನ್ನು ಪಡೆಯಲು ಅರ್ಹರಾಗುತ್ತದೆ.


Click it and Unblock the Notifications