ಕೆನಡಾದಲ್ಲಿ ಭಾರತೀಯ ನಾರಿಶಕ್ತಿ ಸದ್ದು ಮಾಡುತ್ತಿದೆ. ಕೆನಡಾ ವಿದೇಶಾಂಗ ಸಚಿವೆಯಾಗಿ ಅನಿತಾ ಆನಂದ್ ಅವರು ಸ್ಥಾನ ಹಿಡಿದಿದ್ದಾರೆ. ಕೆನಡಾ ಪ್ರಧಾನಿಯಾದ ಮಾರ್ಕ್ ಕಾರ್ನಿ ಅವರು ತನ್ನ ಅಧಿಕಾರದ ಮೊದಲ ಕ್ಯಾಬಿನೆಟ್‌ನ ಪುನರ್‍ರಚನೆ ಮಾಡಿದ್ದಾರೆ. ಅದರ ಭಾಗವಾಗಿ ಭಾರತೀಯ ಮೂಲದ ಹಿರಿಯ ರಾಜಕಾರಣಿಯಾದ, ಅನಿತಾ ಆನಂದ್ ಅವರು ಕೆನದಾ ವಿದೇಶಾಂಗ ಸಚಿವೆಯಾಗಿ ನೇಮಕಗೊಂಡಿದ್ದಾರೆ. ಈ ಹೊಸ ನೇಮಕಾತಿ, ಜಸ್ಟಿನ್ ಟ್ರುಡೊ ಸರ್ಕಾರದ ಯುಗದಿಂದ ಸ್ಪಷ್ಟವಾದ ನಿರ್ಗಮನವನ್ನೂ ಸೂಚಿಸುತ್ತದೆ.

ಇನ್ನು ಈ ಹಿಂದೆ ವಿದೇಶಾಂಗ ಸಚಿವೆಯಾಗಿದ್ದ ಮೆಲಾನಿ ಜೋಲಿ, ಹಾಲಿ ನೇಮಕಾತಿಯಿಂದ ಕೈಗಾರಿಕಾ ಸಚಿವೆ ಸ್ಥಾನಕ್ಎಕ ವರ್ಗಾವಣೆಯಾಗಿದ್ದಾರೆ. ಈ ಪುನರ್‌ರಚನೆಯನ್ನು ಕಾರ್ನಿಯವರು "ಕೆನಡಾದ ಜನತೆಗೆ ಬೇಕಾದ ಬದಲಾವಣೆಗೆ ಸರಿಯಾದ ಹೆಜ್ಜೆ" ಎಂದು ವಿವರಿಸಿದ್ದಾರೆ. ಹೊಸ ಸಂಪುಟದಲ್ಲಿ ಲಿಂಗ ಸಮತೋಲನಕ್ಕೆ ಮಹತ್ವ ನೀಡಲಾಗಿದೆ. ಮಹಿಳೆಯರು 28 ಸಚಿವರ ಸಂಪುಟದಲ್ಲಿ ಅರ್ಧ ಭಾಗವನ್ನು ಹೊಂದಿದ್ದಾರೆ. ಅನುಭವ ಮತ್ತು ವೈವಿಧ್ಯತೆಯ ಮೇಲೆ ಕೇಂದ್ರೀಕರಣವಾಗಿದೆ.
ರಾಜಕೀಯ ನೆಲೆ ಹಾಗೂ ಅಧಿಕಾರದ ಅನುಭವ:
58 ವರ್ಷದ ಅನಿತಾ ಆನಂದ್ ಲಿಬರಲ್ ಪಕ್ಷದ ಹಿರಿಯ ನಾಯಕಿ. ಅವರು ಈ ಹಿಂದೆ ರಾಷ್ಟ್ರ ರಕ್ಷಣಾ ಸಚಿವೆ, ಸಾರ್ವಜನಿಕ ಸೇವೆ ಹಾಗೂ ಖರೀದಿ ಸಚಿವೆ ಮತ್ತು ಖಜಾನೆ ಮಂಡಳಿಯ ಅಧ್ಯಕ್ಷೆ ಸ್ಥಾನವನ್ನು ಭದ್ರವಾಗಿ ನಿರ್ವಹಿಸಿದ್ದರು. ಅವರು 2019 ರಿಂದ 2025 ರವರೆಗೆ ಓಕ್ವಿಲ್ಲೆಯ ಸಂಸದೆಯಾಗಿದ್ದರು. 2025ರ ಫೆಡರಲ್ ಚುನಾವಣೆಯಲ್ಲಿ ಅವರು ಮತ್ತೆ ಗೆಲುವು ಸಾಧಿಸಿದರು. ಅವರು ವಿದೇಶಾಂಗ ಸಚಿವೆ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸುವಾಗ ಹಿಂದೂ ಧರ್ಮಗ್ರಂಥ ಭಗವದ್ಗೀತೆಯ ಮೇಲೆ ಕೈ ಇಟ್ಟು ಶಪಥ ಸ್ವೀಕರಿಸಿದರು. ಇದು ಹಿಂದಿನ ಸಂಪುಟ ಅವಕಾಶಗಳಲ್ಲಿಯೂ ಅವರು ಪಾಲಿಸಿದ ಸಂಪ್ರದಾಯವಾಗಿದೆ.
ಟ್ವೀಟ್ ಮೂಲಕ ಘೋಷಣೆ:
ಹುದ್ದೆ ವಹಿಸಿಕೊಂಡ ನಂತರ ಅನಿತಾ ಆನಂದ್ ಟ್ವಿಟ್ಟರ್ (X) ನಲ್ಲಿ ಹಂಚಿಕೊಂಡು, "ಕೆನಡಾದ ವಿದೇಶಾಂಗ ಸಚಿವೆ ಆಗಿರುವುದು ನನಗೆ ಗೌರವದ ಸಂಗತಿ. ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಸಂಪುಟದ ಸದಸ್ಯರೊಂದಿಗೆ ಕಾರ್ಯನಿರ್ವಹಿಸಿ, ಸುರಕ್ಷಿತ ಮತ್ತು ನ್ಯಾಯಯುತ ಜಗತ್ತಿಗೆ ಕೆನಡಾದನ್ನು ಮುನ್ನಡೆಸಲು ಎದುರುನೋಡುತ್ತಿದ್ದೇನೆ," ಎಂದು ಹೇಳಿದ್ದಾರೆ.
ಪಂಜಾಬ್ ಮತ್ತು ತಮಿಳುನಾಡಿನ ಸಂಯೋಜನೆ:
ಅನಿತಾ ಆನಂದ್ ಅವರು 1967ರಲ್ಲಿ ನೋವಾ ಸ್ಕೋಟಿಯಾ ಪ್ರಾಂತ್ಯದ ಕಂಟ್ರೋಲ್ಲಿನಲ್ಲಿ ಜನಿಸಿದರು. ಅವರ ತಾಯಿ ಪಂಜಾಬ್‌ನವರು ಮತ್ತು ತಂದೆ ತಮಿಳುನಾಡು ಮೂಲದವರು. ಅವರ ಕುಟುಂಬ 1960ರ ದಶಕದಲ್ಲಿ ಕೆನಡಾಕ್ಕೆ ವಲಸೆ ಬಂದು ನೆಲೆಸಿತು. ಅನಿತಾ ಅವರಲ್ಲಿ ಗೀತಾ ಮತ್ತು ಸೋನಿಯಾ ಎಂಬ ಇಬ್ಬರು ಸಹೋದರಿಯರು ಇದ್ದಾರೆ.
ಅವರು 18ನೇ ವಯಸ್ಸಿನಲ್ಲಿ ಒಂಟಾರಿಯೋ ಪ್ರಾಂತ್ಯಕ್ಕೆ ಸ್ಥಳಾಂತರಗೊಂಡು, ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಅವರು ಪಾಲಿಟಿಕಲ್ ಸೈನ್ಸ್‌ನಲ್ಲಿ ಪದವಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಬಿಎ (ಹಾನರ್ಸ್) ಲಾ ಪದವಿ, ಹಾಗೂ ಡಾಲ್ಹೌಸಿ ಮತ್ತು ಟೊರಾಂಟೊ ವಿಶ್ವವಿದ್ಯಾಲಯಗಳಿಂದ ಕಾನೂನು ಪದವಿಗಳನ್ನು ಪಡೆದಿದ್ದಾರೆ. ಅವರು ವಕೀಲೆ, ಶಿಕ್ಷಕಿ ಹಾಗೂ ಸಾರ್ವಜನಿಕ ಸೇವಕಿಯಾಗಿ ವಿಶಿಷ್ಟ ಹಾದಿಯನ್ನು ಹತ್ತಿದ್ದಾರೆ.
1995ರಲ್ಲಿ ಅವರು ಉದ್ಯಮಿ ಮತ್ತು ವಕೀಲ ಜಾನ್ ನೋನ್ ಅವರನ್ನು ವಿವಾಹವಾಗಿದ್ದು, ಈಗ ಅವರು ನಾಲ್ಕು ಮಕ್ಕಳೊಂದಿಗೆ ಓಕ್ವಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. 2019ರಲ್ಲಿ ಅವರು ಫೆಡರಲ್ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದ ಮೊದಲ ಹಿಂದೂ ಮಹಿಳೆಯಾಗಿ ಇತಿಹಾಸ ನಿರ್ಮಿಸಿದರು. ವಿಶೇಷವಾಗಿ ರಕ್ಷಣಾ ಸಚಿವೆ ಆಗಿ ಅವರ ಸೇವೆ ಸ್ಪಷ್ಟತೆ, ಶಿಸ್ತು ಮತ್ತು ನಿಷ್ಠೆಯ ಹಿನ್ನೆಲೆಯಲ್ಲಿ ಪ್ರಶಂಸಿಸಲ್ಪಟ್ಟಿದೆ.


Click it and Unblock the Notifications