ಪ್ರತಿ ವರ್ಷ ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುವ ಬಣ್ಣಗಳ ಹಬ್ಬ ಹೋಳಿ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಈ ಹಬ್ಬದ ಆಚರಣೆಯು ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಭಾರತದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ಕಾಮನ ಹಬ್ಬವನ್ನು ಓಕುಳಿ, ರಂಗಿನ ಹಬ್ಬ, ಬಣ್ಣಗಳ ಹಬ್ಬ, ಹೋಳಿ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಹೋಳಿ ಹಬ್ಬಕ್ಕಾಗಿ ಹೆಚ್ಚಿನವರು ತಮ್ಮೂರಿಗೆ ಪ್ರಯಾಣಿಸುವ ಹಿನ್ನಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೇ ಇಲಾಖೆ ಕೂಡಾ ಸಜ್ಜಾಗಿದೆ.

ರೈಲ್ವೇ ಇಲಾಖೆಯೂ ಹೋಳಿ ಹಬ್ಬಕ್ಕಾಗಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ದೇಶಾದಾದ್ಯಂತ ಜನದಟ್ಟಣೆ ನಿರ್ವಹಿಸಲು ಹಲವಾರು ವಿಶೇಷ ರೈಲುಗಳನ್ನು ಘೋಷಿಸಿದೆ. ಉತ್ತರ ರೈಲ್ವೆ (ಎನ್ಆರ್) ವಲಯವು ವಂದೇ ಭಾರತ್ ರೈಲುಗಳು ಸೇರಿದಂತೆ 400 ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಘೋಷಿಸಿದೆ.ಪ್ರಯಾಣಿಕರ ಸಂಖ್ಯೆಯಲ್ಲಿನ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ವಲಯ ರೈಲ್ವೆಯು ಸಾಮಾನ್ಯ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಿದೆ. ಈ ಸೇರ್ಪಡೆಯಿಂದಾಗಿ, ಹಬ್ಬದ ಋತುವಿನಲ್ಲಿ ಉತ್ತರ ರೈಲ್ವೆಯಲ್ಲಿ ಸುಮಾರು 3,00,000 (ಮೂರು ಲಕ್ಷ) ಹೆಚ್ಚಿನ ಆಸನಗಳು ಲಭ್ಯವಿದ್ದು, ಪ್ರಯಾಣಿಕರಿಗೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗಿದೆ
ವಂದೇ ಭಾರತ್ ಸೇರಿದಂತೆ 404 ಹೋಳಿ ವಿಶೇಷ ರೈಲುಗಳನ್ನು ಓಡಿಸಲಿದೆ ಉತ್ತರ ರೈಲ್ವೆ
ಹೋಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಜನ ಪ್ರಯಾಣಿಸುವುದರಿಂದ ಅವರ ಅನುಕೂಲಕ್ಕಾಗಿ ಮಾರ್ಚ್ 10ರ ಸೋಮವಾರದಂದು ಉತ್ತರ ರೈಲ್ವೆ (NR) 404 ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಘೋಷಿಸಿದೆ.ಈ ರೈಲುಗಳು ಪಾಟ್ನಾ, ದಾನಾಪುರ, ಲಕ್ನೋ, ಸೊಗರಿಯಾ, ಮಾಲ್ಡಾ ಟೌನ್, ಗೋರಖ್‌ಪುರ, ಗಯಾ, ಅಮೃತಸರ, ಹೌರಾ, ಧನ್‌ಬಾದ್, ಪುಣೆ ಮತ್ತು ಹೈದರಾಬಾದ್‌ನಂತಹ ಪ್ರಮುಖ ತಾಣಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಚಲಿಸುತ್ತವೆ.
ಹೆಚ್ಚುವರಿಯಾಗಿ, ಉತ್ತರ ರೈಲ್ವೆ ನವದೆಹಲಿ ಮತ್ತು ಪಾಟ್ನಾ ಜಂಕ್ಷನ್ ನಡುವೆ ಹೋಳಿ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಿದೆ. ಕೇವಲ 11 ಗಂಟೆ 40 ನಿಮಿಷಗಳಲ್ಲಿ 998 ಕಿ.ಮೀ ದೂರವನ್ನು ಕ್ರಮಿಸುವ ಈ ಅರೆ-ಹೈಸ್ಪೀಡ್ ರೈಲು ಮಾರ್ಚ್ 20 ರವರೆಗೆ ಸೇವೆಯಲ್ಲಿರಲಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಹಿಮಾಂಶು ಶೇಖರ್ ಉಪಾಧ್ಯಾಯ, ಹೋಳಿ ಹಬ್ಬಕ್ಕಾಗಿ ವಿಶೇಷ ರೈಲು ಓಡಿಸುವ ವಿಚಾರ ದೃಢಪಡಿಸಿದದ್ದು " ಉತ್ತರ ರೈಲ್ವೆ ವಿವಿಧ ಸ್ಥಳಗಳಿಗೆ 404 ವಿಶೇಷ ರೈಲುಗಳನ್ನು ಓಡಿಸಲಿದೆ. 2025 ರಲ್ಲಿ ಹೋಳಿ ವಿಶೇಷ ರೈಲುಗಳ ಸಂಖ್ಯೆ 2023 ಮತ್ತು 2024ಕ್ಕಿಂತ ಹೆಚ್ಚಾಗಿದೆ" ಎಂದು ಹೇಳಿದ್ದಾರೆ.
ಈ ವಿಶೇಷ ರೈಲುಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ ಎಂದು ಉಪಾಧ್ಯಾಯರು ವಿವರಿಸಿದ್ದು, ಪೂರ್ವ-ಘೋಷಿತ ವಿಶೇಷ ರೈಲುಗಳು ಮತ್ತು ಬೇಡಿಕೆಯ ಮೇರೆಗೆ (TOD) ರೈಲುಗಳು ಇವುಗಳ ವಿಧಗಳಾಗಿವೆ. ಪೂರ್ವ-ಘೋಷಿತ ರೈಲುಗಳಲ್ಲಿ ಕಾಯ್ದಿರಿಸಿದ ಸ್ಲೀಪರ್ ಮತ್ತು ಎಸಿ ಬೋಗಿಗಳಿದ್ದರೆ, TOD ರೈಲುಗಳು ಕಾಯ್ದಿರಿಸದ ಸಾಮಾನ್ಯ ಬೋಗಿಗಳನ್ನು ಒಳಗೊಂಡಿರುತ್ತವೆ. ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಸುಗಮ ಪ್ರಯಾಣಕ್ಕಾಗಿ TOD ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.
ಪೂರ್ವ ಮಧ್ಯ ರೈಲ್ವೆ (ECR) ಮತ್ತು ಇತರ ರೈಲ್ವೆ ವಲಯಗಳು ನಿರ್ವಹಿಸುವ ರೈಲುಗಳ ಸಂಖ್ಯೆ ಭಿನ್ನವಾಗಿರುತ್ತದೆ. ನಿಗದಿತ ವಿಶೇಷ ರೈಲುಗಳ ಜೊತೆಗೆ, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ TOD (ಬೇಡಿಕೆಯ ಮೇರೆಗೆ ರೈಲುಗಳು) ಎಂದು ಕರೆಯಲ್ಪಡುವ ಕಾಯ್ದಿರಿಸದ ರೈಲುಗಳನ್ನು ಸಹ ಓಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications