ಪ್ರಯಾಣಿಕರ ಸೇವೆಗಳಿಗಾಗಿ ಹೊಸ ಮೊಬೈಲ್ ‘ಸೂಪರ್’ ಆ್ಯಪ್ ಪರಿಚಯಿಸಲಿದೆ ಭಾರತೀಯ ರೈಲ್ವೆ

ವಿಶ್ವದ ಅತೀ ದೊಡ್ಡ ರೈಲ್ವೇ ನೆಟ್‌ವರ್ಕ್‌ಗಳಲ್ಲಿ ಒಂದಾದ ಭಾರತವು ದೇಶದ ಬಹುತೇಕ ಉದ್ದಗಲಕ್ಕೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಸದ್ಯ ಡೀಸೆಲ್‌ನಿಂದ ರೈಲ್ವೇ ವಿದ್ಯುತ್ತೀಕರಣ ಪ್ರಕ್ರಿಯೆಯು ಕೂಡ ಭಾರೀ ವೇಗದಲ್ಲೇ ಸಾಗುತ್ತಿದೆ. ವಂದೇ ಭಾರತ್‌ನಂಥ ಕ್ರಾಂತಿಕಾರಕವಾದ ರೈಲನ್ನು ಬಳಕೆ ತಂದಿರುವ ಭಾರತೀಯ ರೈಲ್ವೇ ಇಲಾಖೆ ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಸದ್ಯ ಭಾರತೀಯ ರೈಲ್ವೇಯು ವಿವಿಧ ಪ್ರಯಾಣಿಕರ ಸೇವೆಗಳಿಗೆ ಒಂದೇ ವೇದಿಕೆಯಾಗಿ ಸಮಗ್ರ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಲು ಸಿದ್ಧವಾಗಿದ್ದು, ಈ ಮೂಲಕ ಮತ್ತಷ್ಟು ಗ್ರಾಹಕಸ್ನೇಹಿಯಾಗುವಲ್ಲಿ ಮುಂದಡಿ ಇಟ್ಟಿದೆ. ಹೊಸದಾಗಿ ತಯಾರಾಗುತ್ತಿರುವ ಅಪ್ಲಿಕೇಶನ್ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಜನರು ಟಿಕೆಟ್ ಬುಕ್ ಮಾಡುವ ಜೊತೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಈ ಅಪ್ಲಿಕೇಶನ್ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ಒಂದೇ ಅಪ್ಲಿಕೇಶನ್‌ನಲ್ಲಿ ಎಲ್ಲವೂ ಲಭ್ಯ

ಇನ್ನು ರೈಲ್ವೇ ಟಿಕೆಟ್ ಬುಕ್ಕಿಂಗ್ ಅನ್ನು ಇನ್ನಷ್ಟು ಸರಳೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಭಾರತೀಯ ರೈಲ್ವೆಯು super app ಹೆಸರಿನ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಹಲವು ಪ್ರಯಾಣಿಕ ಸೇವೆಗಳನ್ನು ಒಂದೇ ಅಪ್ಲಿಕೇಶನ್ ಅಡಿ ಸೇರಿಸಲಾಗುತ್ತದೆ. ಇದರಿಂದಾಗಿ ವಿವಿಧ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಕಿರಿಕಿರಿ ಪ್ರಯಾಣಿಕರಿಗೆ ತಪ್ಪಲಿದೆ. ಸೂಪರ್ ಆಪ್‌ ಅಪ್ಲಿಕೇಶನ್ ರೈಲ್ವೆ ಟಿಕೆಟ್ ಬುಕ್ ಮಾಡಲು, ಪ್ಲಾಟ್ ಫಾರ್ಮ್ ಟಿಕೆಟ್ ಕೊಳ್ಳಲು, ರೈಲುಗಳ ವೇಳಾಪಟ್ಟಿ ತಿಳಿಯಲು, ರೈಲಿನಲ್ಲಿ ಸಂಚಾರ ನಡೆಸುವಾಗ ಆಹಾರ ಬುಕ್ ಮಾಡಲು ಸಹ ಅನುಕೂಲ ಮಾಡಿಕೊಡಲಿದೆ. ಈ ಹೊಸ ಅಪ್ಲಿಕೇಶನ್‌ ಅನ್ನು ರೈಲ್ವೆ ವ್ಯವಸ್ಥೆಗಳ ಮಾಹಿತಿ ಕೇಂದ್ರ (ಸಿಆರ್‌ಐಎಸ್‌) ಅಭಿವೃದ್ಧಿಗೊಳಿಸಿದೆ. ಐಆರ್‌ಸಿಟಿಸಿ ಮೇಲಿರುವ ಒತ್ತಡವನ್ನು ಈ ಹೊಸ ಅಪ್ಲಿಕೇಶನ್ ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ. ಿನ್ನು ಹೊಸ ಅಪ್ಲಿಕೇಶನ್‌ ಬಂದ ಬಳಿಕವೂ ಐಆರ್‌ಸಿಟಿಸಿ ಮುಂದುವರೆಯುತ್ತದೆಯೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡುವುದು ಸಹಜ. ಆದರೆ ಸ್ವತಹ ರೈಲ್ವೇ ಇಲಾಖೆಯ ಪ್ರಕಾರ ಹೊಸ ಅಪ್ಲಿಕೇಶನ್ ಬಂದ ಮೇಲೆಯೂ ಐಆರ್‌ಸಿಟಿಸಿ ತನ್ನ ಕಾರ್ಯವನ್ನು ಮುಂದುವರೆಸಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು, ಐಆರ್‌ಸಿಟಿಸಿ ರೈಲ್ವೆ ವ್ಯವಸ್ಥೆಗಳ ಮಾಹಿತಿ ಕೇಂದ್ರ (ಸಿಆರ್‌ಐಎಸ್‌) ಮತ್ತು ಪ್ರಯಾಣಿಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ಟಿಕೆಟ್‌ಗಳನ್ನು ಬುಕ್ ಮಾಡಲು ಜನರು ಬಳಕೆ ಮಾಡಬಹುದು ಎಂದು ತಿಳಿಸಿದರು. ಎರಡೂ ಸೇವೆಗಳು ಒಟ್ಟಾಗಿ ಕಾರ್ಯನಿರ್ವಹಿಸುವುದರಿಂದ ಜನತೆಗೆ ಇನಷ್ಟು ಹೆಚ್ಚಿನ ಲಾಭ ತಂದುಕೊಡಲಿದೆ ಎನ್ನಲಾಗಿದೆ.

ಪ್ರಯಾಣಿಕರ ಸೇವೆಗಳಿಗಾಗಿ ಹೊಸ ಮೊಬೈಲ್ ಆ್ಯಪ್

ವಿವಿಧ ಅಪ್ಲಿಕೇಶನ್‌ಗಳಿಂದ ಮುಕ್ತಿ

ಸದ್ಯ ರೈಲು ಪ್ರಯಾಣಿಕರು ರೈಲ್ವೆ ಸೇವೆಗಳಿಗಾಗಿ ವಿವಿಧ ಅಪ್ಲಿಕೇಶನ್‌ ಅನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಮೊಬೈಲ್‌ನಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಸದ್ಯ ಇದನ್ನು ತಪ್ಪಿಸಲು ಹಲವು ಸೇವೆಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ. ಇದರಿಂದಾಗಿ ಜನರು ಬೇರೆ ಬೇರೆ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳುವುದು ತಪ್ಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ರೈಲ್ವೆ ಪ್ರಯಾಣಿಕರು ಐಆರ್‌ಸಿಟಿಸಿ, ರೈಲ್ ಕನೆಕ್ಟ್, ಐಆರ್‌ಸಿಟಿಸಿ ಇ-ಕ್ಯಾಟರಿಂಗ್, ಯುಟಿಎಸ್, ಎನ್‌ಟಿಇ ಸೇರಿದಂತೆ ವಿವಿಧ ರೈಲು ಸೇವೆಗಳಿಗೆ ಬೇರೆ ಬೇರೆ ಅಪ್ಲಿಕೇಶನ್‌ ಅನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಹೊಸದಾಗಿ ಬಿಡುಗಡೆಗೊಳ್ಳುವ ಸೂಪರ್ ಅಪ್ ಹಲವು ಸೇವೆಗಳನ್ನು ಒಂದೇ ಅಪ್ಲಿಕೇಶನ್‌ ಅಲ್ಲಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿರಿಕಿರಿ ತಪ್ಪಲಿದೆ

ಐಆರ್‌ಸಿಟಿಸಿ ರೈಲ್ವೆ ಟಿಕೆಟ್ ಬುಕ್ ಮಾಡಲು ಸದ್ಯ ಪ್ರಯಾಣಿಕರಿಗೆ ಇರುವ ಸುಲಭವಾದ ಅಪ್ಲಿಕೇಶನ್ ಆಗಿದೆ. ಆದರೆ ಇದರ ಮೇಲೆ ಒತ್ತಡ ಜಾಸ್ತಿ ಇದೆ. ಕೋಟ್ಯಾಂತರ ಜನರು ಒಂದೇ ಸಮಯದಲ್ಲಿ ಟಿಕೆಟ್ ಬುಕ್ ಮಾಡುವ ವೇಳೆ ಲೋಡಿಂಗ್‌ ಕೂಡ ವೇಗವಾಗಿ ನಡೆಯುವುದಿಲ್ಲ ಎಂಬ ಆಕ್ರೋಶ ಕೂಡ ಪ್ರಯಾಣಿಕರಲ್ಲಿ ಸಾಮಾನ್ಯವಾಗಿ ಮೂಡುತಿತ್ತು. ಅಲ್ಲದೇ ರೈಲ್ವೆ ಇಲಾಖೆ ಬದಲಾಗುತ್ತಿರುವ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೊಸ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಜನರು ತಮ್ಮ ಬಳಕೆದಾರರ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡಿದರೆ ಐಆರ್‌ಟಿಸಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಒಂದು ತಿಂಗಳಲ್ಲಿ 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿತ್ತು. ಇಲ್ಲದಿದ್ದರೆ 12 ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು ಎಂದು ರೈಲ್ವೆ ಇಲಾಖೆ ಹೇಳಿತ್ತು. ಈಗ ಹೊಸ ಅಪ್ಲಿಕೇಶನ್‌ನಲ್ಲಿ ಇನ್ನೂ ಹಲವಾರು ಹೊಸ ಆಯ್ಕೆಯನ್ನು ನೀಡುವ ನಿರೀಕ್ಷೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+