ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮತ್ತು ಡಾಲರ್ ಅತ್ಯಂತ ಪ್ರಭಾವಶಾಲಿ ಕರೆನ್ಸಿಗಳಾಗಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ರೂಪಾಯಿ(₹) ಅಧಿಕೃತ ಕರೆನ್ಸಿಯಾಗಿದೆ. ಹಾಗೆಯೇ ಅಮೆರಿಕದಲ್ಲಿ ಡಾಲರ್($) ಅಧಿಕೃತ ಕರೆನ್ಸಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಭಾರತೀಯ ಕರೆನ್ಸಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಿಸುತ್ತದೆ. ಅಂದಹಾಗೆ ರೂಪಾಯಿ ಮೌಲ್ಯ ಡಾಲರ್ ವಿರುದ್ಧ ಕುಸಿದರೆ ಇದು ಸಾಕಷ್ಟು ಬದಲಾವಣೆಗಳನ್ನು ತಂದೊಡ್ಡುತ್ತದೆ. ಅಂದರೆ ಬೆಲೆಗಳ ಹೆಚ್ಚಳವಾಗಿರವಹುದು. ಪ್ರಮುಖವಾಗಿ ಚಿನ್ನದ ಬೆಲೆಯಲ್ಲಿ ಬದಲಾವಣೆ ತರುತ್ತದೆ. ಹಾಗೆಯೇ ಭಾರತೀಯ ಕರೆನ್ಸಿ ವಿರುದ್ಧ ಡಾಲರ್ ಕುಸಿತ ಕಂಡುಬಂದರೆ ಅಮೆರಿಕಗೆ ನಷ್ಟದ ಅನುಭವ ಎದುರಾಗುತ್ತದೆ.

ಹಾಗೆಯೇ ಇಂದಿನ (ಮಾರ್ಚ್ 17)ರ ವಹಿವಾಟಿನಲ್ಲಿ ಭಾರತೀಯ ಕರೆನ್ಸಿ ಮೌಲ್ಯ 25 ಪೈಸೆಗಳಷ್ಟು ಏರಿಕೆಯಾಗಿರುವುದು, ಖುಷಿಯ ಸಂಗತಿಯಾಗಿದೆ. ಡಾಲರ್ ಎದುರು ಭಾರತೀಯ ಕರೆನ್ಸಿ ಮೌಲ್ಯ 86.80 ಕ್ಕೆ ತಲುಪಿದೆ. ಇದರ ಪ್ರಮುಖ ಕಾರಣಗಳಲ್ಲಿ ಏಷ್ಯಾದ ಕರೆನ್ಸಿಗಳ ಬಲವಾದ ಸ್ಥಿತಿ ಮತ್ತು ದೇಶೀಯ ಷೇರು ಮಾರುಕಟ್ಟೆಗಳ ಉತ್ತಮ ಪ್ರಾರಂಭವಿದೆ. ಡಾಲರ್ ಮೇಲಿನ ಒತ್ತಡ ಮತ್ತು ಫೆಡ್ ನಿರೀಕ್ಷೆಗಳ ಪರಿಣಾಮವಾಗಿ ರೂಪಾಯಿ ಮೌಲ್ಯ ಬಲಶಾಲಿಯಾಗಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ತೈಲ ಬೆಲೆಗಳ ಚಲನೆಗಳು ರೂಪಾಯಿ ಭವಿಷ್ಯವನ್ನು ನಿರ್ಧರಿಸಲಿವೆ. ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 86.90 ಕ್ಕೆ ಆರಂಭಗೊಂಡು 86.80 ದರಕ್ಕೆ ಸ್ಥಿರಗೊಂಡಿದೆ. ಮುಂಚಿನ ವಹಿವಾಟಿನಲ್ಲಿ ಕೂಡ ರೂಪಾಯಿ 17 ಪೈಸೆ ಏರಿಕೆಯಾಗಿ 87.05 ಕ್ಕೆ ತಲುಪಿತ್ತು ಎನ್ನಲಾಗಿದೆ.
ಇನ್ನು ಫಾರೆಕ್ಸ್ ಮಾರುಕಟ್ಟೆಯಲ್ಲಿ ವಹಿವಾಟು ಮಾಡುವ ತಜ್ಞರ ಪ್ರಕಾರ, ಅಮೆರಿಕನ್ ಡಾಲರ್ ಮೇಲೆ ಹೆಚ್ಚು ಒತ್ತಡವಿದೆ. ಇದರ ಪರಿಣಾಮದಿಂದಲೇ ರೂಪಾಯಿ ಮೌಲ್ಯ ಜಿಗಿತವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್‌ನ ನಿರ್ಧಾರಗಳ ಪರಿಣಾಮವಾಗಿ ಡಾಲರ್‌ನ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಇದು ರೂಪಾಯಿ ಮೌಲ್ಯ ಹೆಚ್ಚಿಸಲು ಸಹಾಯ ಮಾಡಿದೆ. ಅಂದಹಾಗೆ ಜಾಗತಿಕ ತೈಲ ಬೆಲೆಗಳ ಚಲನೆಗಳು ಮತ್ತು ಜಾಗತಿಕ ಆರ್ಥಿಕ ಸ್ಥಿತಿಗಳು ರೂಪಾಯಿಯ ಮುಂದಿನ ದಾರಿಗೆ ಪ್ರಭಾವ ಬೀರುತ್ತವೆ. ಈ ಕಾರಣಕ್ಕಾಗಿ ರೂಪಾಯಿ ಶೇ. 86.80-87.40 ಶ್ರೇಣಿಯೊಳಗೆ ವ್ಯವಹಾರ ನಡೆಸುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.
ಮಾರುಕಟ್ಟೆಯಲ್ಲಿ ಎಷ್ಟಿಗೆ ರೂಪಾಯಿ ಮೌಲ್ಯ..?
ವರದಿ ಪ್ರಕಾರ ಇಂದಿನ ವಹಿವಾಟಿನಲ್ಲಿ ರೂಪಾಯಿ 86.90 ದರದಲ್ಲಿ ಆರಂಭವಾಯಿತು ಮತ್ತು ನಂತರ ಸ್ವಲ್ಪ ಏರಿಕೆಯಾಗಿ 86.80 ಕ್ಕೆ ತಲುಪಿತು. ಈ ದರವು ಹಿಂದಿನ ವಹಿವಾಟಿನ ಮುಕ್ತಾಯಕ್ಕಿಂತ 25 ಪೈಸೆಗಳಷ್ಟು ಹೆಚ್ಚಿನದಾಗಿದೆ. ಅದರಂತೆ ಕಳೆದ ಗುರುವಾರದ ವಹಿವಾಟಿನಲ್ಲಿ, ರೂಪಾಯಿ 17 ಪೈಸೆಗಳಷ್ಟು ಏರಿಕೆಯಾಗಿತ್ತು ಮತ್ತು ಡಾಲರ್ ಎದುರು 87.05 ಕ್ಕೆ ತಲುಪಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ ನಿಲುವು ಏನು..?
ರೂಪಾಯಿ ಮೌಲ್ಯದ ಏರಿಳಿತ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು RBI ವಿವಿಧ ಕ್ರಮಗಳನ್ನು ಕೈಗೊಳ್ಳಬಹುದು. ಅಂದರೆ ಫಾರೆಕ್ಸ್ ಮಾರುಕಟ್ಟೆಯಲ್ಲಿ ಮಧ್ಯಸ್ಥಿಕೆ ಮೂಲಕ ರೂಪಾಯಿ ಮೌಲ್ಯವನ್ನು ಸಮತೋಲನದಲ್ಲಿರಿಸಲು RBI ಪ್ರಯತ್ನಿಸುತ್ತಿದೆ. ಇನ್ನು ಮಾರ್ಚ್ 7ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 15.267 ಬಿಲಿಯನ್ ಡಾಲರ್‌ಗಳಷ್ಟು ಆಗಿದೆ. ಅಂದರೆ ಹೆಚ್ಚಾಗಿ ಹೆಚ್ಚಾಗಿ 653.966 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಅನಿಲ್ ಕುಮಾರ್ ಭನ್ಸಾಲಿ ಅವರ ಅಭಿಪ್ರಾಯವೇನು..?
ಟ್ರೆಷರಿ ಮತ್ತು ವಿದೇಶಿ ವಿನಿಮಯ ಸಲಹಾ ಸಂಸ್ಥೆಯಾಗಿರುವ, ಫಿನ್‌ರೆಕ್ಸ್ ಟ್ರೆಷರಿ ಅಡ್ವೈಸರ್ಸ್ ಎಲ್‌ಎಲ್‌ಪಿಯ ಟ್ರೆಜರಿ ಮುಖ್ಯಸ್ಥ ಮತ್ತು ಕಾರ್ಯಕಾರಿ ನಿರ್ದೇಶಕರಾದ ಅನಿಲ್ ಕುಮಾರ್ ಭನ್ಸಾಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿರುವ ಪ್ರಕಾರ ಭಾರತೀಯ ರೂಪಾಯಿ ಕಳೆದ ಕೆಲವು ದಿನಗಳಿಂದ ಸ್ಥಿರವಾಗಿ ಬಲಪಡುತ್ತಾ ಬಂದಿದೆ. ಆದರೆ ಡಾಲರ್ ಕುಸಿತವಾದಾಗ ಖರೀದಿ ಹೆಚ್ಚಾಗುವುದರಿಂದ ರೂಪಾಯಿ 86.80 ರಿಂದ 87.50 ನಡುವಿನ ಶ್ರೇಣಿಯಲ್ಲಿಯೇ ಉಳಿದಿದೆ ಎಂದಿದ್ದಾರೆ. ಅಲ್ಲದೇ ಇಂದು ಷೇರುಪೇಟೆಗಳು ಸ್ವಲ್ಪ ಏರಿಕೆಯನ್ನು ತೋರಿದಂತೆ, ಏಷ್ಯಾದ ಕರೆನ್ಸಿಗಳು ಬಲಗೊಂಡಿರುವ ಹಿನ್ನಲೆಯಲ್ಲಿ, ರೂಪಾಯಿ 86.94 ದರದಲ್ಲಿ ಹೆಚ್ಚು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ವಾರ ಮತ್ತು ಮುಂದಿನ ವಾರ ಕೇಂದ್ರ ಬ್ಯಾಂಕುಗಳ ಹಲವಾರು ಸಭೆಗಳು ನಡೆಯಲಿದ್ದು, ಆರ್ಥಿಕತೆಯ ಬಗ್ಗೆ ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ನಾವು ಕಾಯುತ್ತಿದ್ದೇವೆ ಎಂದಿದ್ದಾರೆ.
ಅಂದಹಾಗೆ ಅಮೆರಿಕನ್ ಡಾಲರ್ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕ 0.01% ಕಡಿಮೆಯಾಗಿದ್ದು, 103.70 ಕ್ಕೆ ತಲುಪಿದೆ. ಹಾಗೆಯೇ ಇತರ ಪ್ರಮುಖ ಕರೆನ್ಸಿಗಳ ಹೋಲಿಸಿದರೆ ಡಾಲರ್ ಸ್ವಲ್ಪ ದುರ್ಬಲವಾಗಿದೆ. ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರ 0.71% ಏರಿಕೆಯಾಗಿ, ಪ್ರತಿ ಬ್ಯಾರೆಲ್‌ಗೆ $71.08 ಆಗಿದೆ.
ಇನ್ನು ಭಾರತೀಯ ಮಾರುಕಟ್ಟೆಯ ಸ್ಥಿತಿ ನೋಡುವುದಾದರೆ ಇಂದು (ಮಾರ್ಚ್ 17) ಉತ್ತಮವಾಗಿ ಆರಂಭ ಕಂಡಿತ್ತು. ಬಿಎಸ್‌ಇ ಸೆನ್ಸೆಕ್ಸ್ 405.89 ಪಾಯಿಂಟ್ (0.55%) ಏರಿಕೆಯಾಗಿ 74,234.80 ಪಾಯಿಂಟ್‌ಗಳಿಗೆ ತಲುಪಿದೆ. ನಿಫ್ಟಿ ಕೂಡ 153.65 ಪಾಯಿಂಟ್ (0.69%) ಏರಿಕೆಯಾಗಿ 22,550.85 ಪಾಯಿಂಟ್‌ಗಳೊಂದಿಗೆ ವಹಿವಾಟು ನಡೆಸುತ್ತಿದೆ. ಇದರಿಂದಾಗಿ, ಭಾರತೀಯ ಮಾರುಕಟ್ಟೆಗಳು ಹೂಡಿಕೆದಾರರ ಭರವಸೆಯನ್ನು ಹೆಚ್ಚಿಸಿವೆ.
ಒಟ್ಟಿನಲ್ಲಿ ರೂಪಾಯಿ ಮೌಲ್ಯದಲ್ಲಿ ಇತ್ತೀಚೆಗೆ ನಿರಂತರ ಏರಿಳಿತಗಳು ಕಂಡುಬಂದಿದೆ. ಆದರೆ ಇಂದಿನ (ಮಾರ್ಚ್ 17)ರ 25 ಪೈಸೆಗಳಷ್ಟು ಏರಿಕೆಯಾಗಿದ್ದು ಖುಷಿಯ ಸಂಗತಿಯಾಗಿದೆ. ಇದು ಅಮೆರಿಕನ್ ಡಾಲರ್ ಮೇಲೆ ಒತ್ತಡ ಹೆಚ್ಚಿರುವುದು, ಆರ್‌ಬಿಐ ಹಸ್ತಕ್ಷೇಪ, ಮತ್ತು ಜಾಗತಿಕ ತೈಲ ದರಗಳು ರೂಪಾಯಿ ಮೇಲೆ ಪ್ರಭಾವ ಬೀರುತ್ತವೆ. ದೇಶೀಯ ಷೇರು ಮಾರುಕಟ್ಟೆಯು ಸಹ ಆರ್ಥಿಕ ಬಲವರ್ಧನೆಯತ್ತ ಸಾಗುತ್ತಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications