ಬೆಳಾಗಾದ್ರೆ ಸಾಕು, ಇಂದಿನ ಷೇರು ಮಾರುಕಟ್ಟೆ (Stock Market) ಹೇಗಿರುತ್ತೆ ಎಂಬ ಯೋಚನೆಯಲ್ಲಿರುತ್ತಾರೆ. ಆದ್ರೆ ಇದೀಗ ಡಿಸೆಂಬರ್ 8, ಸೋಮವಾರದಿಂದ, ಭಾರತೀಯ ಷೇರು ಮಾರುಕಟ್ಟೆಯ ಇಕ್ವಿಟಿ ಡೆರಿವೇಟಿವ್ಸ್ (F&O) ವಿಭಾಗದಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ. ಎನ್‌ಎಸ್‌ಇ ಪ್ರಕಾರ, ಈ ವಿಭಾಗಕ್ಕಾಗಿ ಪೂರ್ವ-ತೆರೆಯುವಿಕೆ ಅವಧಿಯನ್ನು (Pre-open Session) ಪರಿಚಯಿಸಲಾಗುತ್ತಿದೆ. ಇದು ಹರಾಜು ಪ್ರಕ್ರಿಯೆ ಮೂಲಕ ನಡೆಯುತ್ತದೆ. ಪರ್ಸನಲ್ ಸ್ಟಾಕ್ ಫ್ಯೂಚರ್ಸ್ ಮತ್ತು ಇಂಡೆಕ್ಸ್ ಫ್ಯೂಚರ್ಸ್ ಎರಡಕ್ಕೂ ಅನ್ವಯವಾಗುವ ಈ ಅವಧಿಯು ಬೆಳಗ್ಗೆ 9:00 ರಿಂದ 9:15 ರವರೆಗೆ ಒಟ್ಟು 15 ನಿಮಿಷಗಳ ಕಾಲ ಇರುತ್ತದೆ.

ಮೊದಲ ಹಂತವಾದ ಆರ್ಡರ್ ಎಂಟ್ರಿ ಪಿರೆಡ್ ಬೆಳಿಗ್ಗೆ 9:00 ರಿಂದ 9:08 ರವರೆಗೆ ನಡೆಯುತ್ತದೆ. ವ್ಯಾಪಾರಿಗಳು ಈ ಸಮಯದಲ್ಲಿ ಆರ್ಡರ್ ಪ್ರಕ್ರಿಯೆಗೆ ಮುಂದಾಗಬಹುದು, ಬದಲಾಯಿಸಬಹುದು ಅಥವಾ ರದ್ದುಗೊಳಿಸಬಹುದು. ಸಿಸ್ಟಮ್ 7ನೇ ಮತ್ತು 8ನೇ ನಿಮಿಷಗಳ ನಡುವೆ ಮುಕ್ತಾಯವನ್ನು ಅನ್ವಯಿಸುತ್ತದೆ. ಪ್ರೀ ಓಪನ್ ಈಕ್ವಿಟಿ ಮತ್ತು ಈಕ್ವಿಟಿ ಡೆರಿವೇಟಿವ್ಸ್ ಗಳಿಗೆ ಈ ಮುಕ್ತಾಯ ಅವಧಿ ಪ್ರತ್ಯೇಕವಾಗಿರುತ್ತದೆ.
ಆರ್ಡರ್ ಎಂಟ್ರಿ ಪಿರೇಡ್ ಹಂತದ ನಂತರ, ಬೆಳಗ್ಗೆ 9:08 ರಿಂದ 9:12 ರವರೆಗೆ ಆರ್ಡರ್ ಮ್ಯಾಚಿಂಗ್ ಮತ್ತು ವ್ಯಾಪಾರ ದೃಢೀಕರಣ ಅವಧಿ ಆರಂಭವಾಗುತ್ತದೆ. ಈ ಅವಧಿಯಲ್ಲಿ, ಸಿಸ್ಟಮ್ ಸಮತೋಲನ ಬೆಲೆಯ ಆಧಾರದ ಮೇಲೆ ಆರಂಭಿಕ ಬೆಲೆಯನ್ನು ಲೆಕ್ಕಾಚಾರ ಮಾಡಿ, ಮ್ಯಾಚಿಂಗ್ ಆರ್ಡರ್‌ಗಳನ್ನು ಕಾರ್ಯಗತಗೊಳಿಸುತ್ತದೆ.
ಬಫರ್ ಟೈಮ್:
ಬೆಳಗ್ಗೆ 9:12 ರಿಂದ 9:15 ರವರೆಗಿನ ಅಂತರವು ಬಫರ್ ಆಗಿ, ಮಾರುಕಟ್ಟೆಯನ್ನು ಪ್ರೀ ಓಪನಿಂಗ್ ಹಂತದಿಂದ ಸಾಮಾನ್ಯ ನಿರಂತರ ವಹಿವಾಟು ಅವಧಿಗೆ ವರ್ಗಾಯಿಸುತ್ತದೆ.
ಇನ್ನು ಪ್ರೀ ಓಪನ್ ಅವಧಿಯನ್ನು ಆರ್ಡರ್ ಕಲೆಕ್ಷನ್ ಪಿರೆಡ್ ಮತ್ತು ಆರ್ಡರ್ ಮ್ಯಾಚಿಂಗ್ ಅವಧಿ ಎಂಬ ಎರಡು ಹಂತಗಳಾಗಿ ವಿಂಗಡಿಸಲಾಗಿದೆ.
ಆದೇಶ ಕಲೆಕ್ಷನ್ ಟೈಮ್‌ನಲ್ಲಿ, ವ್ಯಾಪಾರಿಗಳು ಆರ್ಡರ್‌ಗಳನ್ನು ಇಟ್ಟುಕೊಳ್ಳಲು, ಬದಲಾಯಿಸಲು ಅಥವಾ ರದ್ದುಗೊಳಿಸಲು ಅವಕಾಶವಿದೆ. ಲಿಮಿಟ್ ಮತ್ತು ಮಾರ್ಕೆಟ್ ಆರ್ಡರ್‌ಗಳಿಗೂ ಅನುಮತಿ ನೀಡಲಾಗಿದ್ದು, ಆದರೆ ಸ್ಟಾಪ್-ಲಾಸ್ ಮತ್ತು ಐಒಸಿ ಸ್ಟಾಕ್‌ಗಳನ್ನು ಆರ್ಡರ್ ಮಾಡಲು ಅವಕಾಶ ಇಲ್ಲ. ಭಾಗವಹಿಸುವವರು ರಿಯಲ್ ಟೈಮ್ ಇಂಡಿಕೇಟಿವ್ ಬೆಲೆಗಳು, ಸಮತೋಲನ ಲೆಕ್ಕಾಚಾರಗಳು, ಬೇಡಿಕೆ-ಪೂರೈಕೆ ದತ್ತಾಂಶವನ್ನೂ ವೀಕ್ಷಿಸಬಹುದು.
ಎನ್‌ಎಸ್‌ಇ ಪ್ರಕಾರ, ಪ್ರೀ ಓಪನಿಂಗ್ ಆರ್ಡರ್‌ಗಳನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಮಾರ್ಜಿನ್ ಪರಿಶೀಲಿಸಲಾಗುತ್ತದೆ. ಸದಸ್ಯರಲ್ಲಿ ಮಾರ್ಜಿನ್ ಪೂರೈಸುವ ಬಂಡವಾಳ ಇಲ್ಲದಿದ್ದರೆ, ಆ ಆರ್ಡರ್‌ಗಳು ಪ್ರೀ ಓಪನಿಂಗ್ ಸೆಷನ್‌ನಲ್ಲಿ ರಿಜೆಕ್ಟ್ ಮಾಡಲಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications