ಯುಗಾದಿ ಹಬ್ಬ ಸೇರಿದಂತೆ ದೇಶದಲ್ಲಿ ವಿವಿಧ ಹಬ್ಬಗಳ ಋತು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂಬಂಧ ನಾಗರಿಕರು ತಮ್ಮ ತಮ್ಮ ಊರುಗಳಿಗೆ ವಿಮಾನ ಟಿಕೆಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಯ್ದಿರಿಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ 28: ಯುಗಾದಿ ಹಬ್ಬ ಸೇರಿದಂತೆ ದೇಶದಲ್ಲಿ ವಿವಿಧ ಹಬ್ಬಗಳ ಋತು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂಬಂಧ ನಾಗರಿಕರು ತಮ್ಮ ತಮ್ಮ ಊರುಗಳಿಗೆ ವಿಮಾನ ಟಿಕೆಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಯ್ದಿರಿಸುತ್ತಿದ್ದಾರೆ.
ಈ ವಿಮಾನ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಕಹಿ ಸುದ್ದಿಯೊಂದನ್ನು ನೀಡಲಿದೆ. ದೇಶದ ಸಣ್ಣ ಸಣ್ಣ ಪಟ್ಟಣಗಳಿಗೆ ವಿಮಾನ ಟಿಕೆಟ್ ಮೇಲಿನ ಶುಲ್ಕವನ್ನು ಶೀಘ್ರದಲ್ಲೇ ಹೆಚ್ಚಿಸುವ ನಿರೀಕ್ಷೆಯಿದೆ.

ಒಂದು ವೇಳೆ ದರ ಏರಿಕೆ ಆದರೆ ಸಣ್ಣ-ಪಟ್ಟಣ ವಿಮಾನ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ಹಾರಾಟವು ಮೊದಲಿಗಿಂತ ಹೆಚ್ಚು ವೆಚ್ಚವಾಗಲಿದೆ. ಏಕೆಂದರೆ ಸರ್ಕಾರವು ಈ ಬೆಲೆ ಏರಿಕೆ ಬಗ್ಗೆ ಈಗಾಗಲೇ ಪ್ರಸ್ತಾಪ ಮಾಡಿದೆ. ಇದರಿಂದಾಗಿ ಸದ್ಯದಲ್ಲೇ ವಿಮಾನಯಾನ ದುಬಾರಿಯಾಗಲಿದೆ ಎಂದು ಸಚಿವಾಲಯದ ಇತ್ತೀಚಿನ ಪ್ರಕಟಣೆ ತಿಳಿಸಿದೆ.
ವಿಮಾನದ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಶುಲ್ಕವನ್ನು ಶೇಕಡಾ 30 ರಷ್ಟು ಹೆಚ್ಚಿಸಲಿದೆ. ಇನ್ನೂ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ಸರಿಸುಮಾರು ನಾಲ್ಕು ಪಟ್ಟು ಹೆಚ್ಚಿಸುವ ನಿರೀಕ್ಷೆ. ಇದರ ಹೊರೆ ಸಣ್ಣ ಪಟ್ಟಣಗಳಿಗೆ ತೆರಳುವ ಹಾಗೂ ಹೊರಗಿನ ಬರುವ ವಿಮಾನಯಾನ ಪ್ರಯಾಣಿಕರ ಮೇಲೆ ಬೀಳಲಿದೆ.

ಸರ್ಕಾರವು ಹೊಸ ಶುಲ್ಕದ ಜಾರಿಗೆ ಅನುಮೋದನೆ ನೀಡಿದರೆ, ವಿಮಾನ ಟಿಕೆಟ್‌ಗಳ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಇದು ಸುಮಾರು 3.5 ಮಿಲಿಯನ್ ಪ್ರಯಾಣಿಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ವಲಯವಾರು ವಿಮಾನ ಸೇವೆ ಎಷ್ಟಿದೆ
ದೇಶದ ಮೊದಲ ವಲಯದಲ್ಲಿ 13 ವಿಮಾನ ನಿಲ್ದಾಣಗಳು ವರ್ಷಕ್ಕೆ 1 ಮಿಲಿಯನ್ ಮತ್ತು ಹೆಚ್ಚಿನ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ವಲಯ 2ರಲ್ಲಿ ಒಟ್ಟು 32 ವಿಮಾನ ನಿಲ್ದಾಣಗಳು ವರ್ಷಕ್ಕೆ 0.1 ರಿಂದ 1 ಮಿಲಿಯನ್ ಪ್ರಯಾಣಿಕರು ಹಾಗೂ ಮೂರನೇ ವಲಯದಲ್ಲಿನ 32 ವಿಮಾನ ನಿಲ್ದಾಣಗಳು ವರ್ಷಕ್ಕೆ 0.1 ದಶಲಕ್ಷಕ್ಕಿಂತ ಕಡಿಮೆ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವ ಕಾರ್ಯ ಮಾಡುತ್ತವೆ.
ವಿಮಾನ ನಿಲ್ದಾಣಗಳ ಮುಖ್ಯಸ್ಥರು ಹಾಗೂ ವಿಮಾನಗಳ ಮಧ್ಯಸ್ಥಗಾರರು ಫೆಬ್ರವರಿ 28ರ ಮಂಗಳವಾರದ ಒಳಗಾಗಿ ಬೆಲೆ ಏರಿಕೆ ಬಗ್ಗೆ ಸಲಹೆಗಳನ್ನು ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ. ಬಳಿಕವೇ ವಿಮಾನ ಟಿಕೆಟ್‌ಗಳ ಬೆಲೆಯಲ್ಲಿ ಹೆಚ್ಚಳದ ಅಂತಿಮ ನಿರ್ಧಾರ ಹೊರಬೀಳಲಿದೆ.


Click it and Unblock the Notifications