ಬೆಂಗಳೂರು, ಏಪ್ರಿಲ್ 3: ಕರ್ನಾಟಕದವರೇ ಆದ ಝೆರೋಧಾ ಸಂಸ್ಥಾಪಕ ನಿತಿನ್ ಮತ್ತು ನಿಖಿಲ್ ಕಾಮತ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರು ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಪಟ್ಟಿಯಲ್ಲಿ ಕಂಡು ಬಂದಿದ್ದಾರೆ.
37 ವರ್ಷದ ನಿಖಿಲ್ ಕಾಮತ್ ಅವರು ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ 2024 ರ ಪ್ರಕಾರ $ 3.1 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಖೇಶ್ ಅಂಬಾನಿ 116 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಉಳಿದಿದ್ದಾರೆ. ಅವರ ನಂತರ ಗೌತಮ್ ಅದಾನಿ 84 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ 17ನೇ ಸ್ಥಾನದಲ್ಲಿದ್ದಾರೆ.

ನಿಖಿಲ್ ಕಾಮತ್ ಅವರು ಫೋರ್ಬ್ಸ್ ಪಟ್ಟಿಯಲ್ಲಿ 1062ನೇ ಸ್ಥಾನದಲ್ಲಿದ್ದಾರೆ. ಅವರು $ 3.1 ಬಿಲಿಯನ್ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ. 41 ವರ್ಷದ ಬಿನ್ನಿ ಬನ್ಸಾಲ್ $1.4 ಶತಕೋಟಿ ನಿವ್ವಳ ಮೌಲ್ಯ 2152 ರ ಸ್ಥಾನದಲ್ಲಿದ್ದಾರೆ. ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್ ಅವರು $ 1.4 ಶತಕೋಟಿ ನಿವ್ವಳ ಮೌಲ್ಯ 2,410 ರ ಸ್ಥಾನದಲ್ಲಿದ್ದಾರೆ.
ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥಾಪಕ ಶಂಶೀರ್ ವಯಾಲಿಲ್ $3.5 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಅಗ್ರ ಐದು (ವಯಸ್ಸಿಗೆ ಅನುಗುಣವಾಗಿ) ಮತ್ತು ಒಟ್ಟಾರೆ 920 ಸ್ಥಾನದಲ್ಲಿ ಇದ್ದಾರೆ. ವೇದಾಂತ್ ಫ್ಯಾಶನ್ಸ್‌ನ 47 ವರ್ಷದ ರವಿ ಮೋದಿ $2.6 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ನಿಖಿಲ್ ಕಾಮತ್ ಅವರು ತಮ್ಮ ಹಿರಿಯ ಸಹೋದರ ನಿತಿನ್ ಕಾಮತ್ ಅವರೊಂದಿಗೆ 2010 ರಲ್ಲಿ ಡಿಸ್ಕೌಂಟ್ ಬ್ರೋಕರೇಜ್ ಜೆರೋಧಾವನ್ನು ಸ್ಥಾಪಿಸಿದರು. ಬೆಂಗಳೂರು ಮೂಲದ ಜೆರೋಧಾ ಈಗ 10 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಇದು ದೇಶದ ಅತಿದೊಡ್ಡ ಬ್ರೋಕರೇಜ್ ಸಂಸ್ಥೆಗಳಲ್ಲಿ ಒಂದಾಗಿದೆ. ಅವರು ಜೂನ್ 2023 ರಲ್ಲಿ ತಮ್ಮ ಅರ್ಧದಷ್ಟು ಸಂಪತ್ತನ್ನು ನೀಡಲು ಬದ್ಧರಾಗಿ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಹಾಕಿದ ಅತ್ಯಂತ ಕಿರಿಯ ಭಾರತೀಯರಾಗಿದ್ದಾರೆ ಎಂದು ಫೋರ್ಬ್ಸ್ ನಲ್ಲಿ ತಿಳಿಸಲಾಗಿದೆ.
ಫೋರ್ಬ್ಸ್‌ನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಹಲವಾರು ಪ್ರಮುಖ ಉದ್ಯಮಿಗಳು ಕಾಣಿಸಿಕೊಂಡಿದ್ದಾರೆ. ಇದರಲ್ಲಇ 66 ವರ್ಷದ ಮುಖೇಶ್ ಅಂಬಾನಿ ಅವರು 9ನೇ ಶ್ರೇಯಾಂಕದಲ್ಲಿದ್ದಾರೆ. ಅವರ ಬಳಿಕ ಭಾರತದ ಗೌತಮ್ ಅದಾನಿ 17ನೇ ಸ್ಥಾನದಲ್ಲಿದ್ದಾರೆ (ನಿವ್ವಳ ಮೌಲ್ಯ $ 84 ಬಿಲಿಯನ್), ಶಿವ ನಾಡಾರ್ 39 ನೇ ಸ್ಥಾನದಲ್ಲಿದ್ದಾರೆ (ನಿವ್ವಳ ಮೌಲ್ಯ $ 36.9 ಬಿಲಿಯನ್). ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ $33.5 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ 46 ನೇ ಸ್ಥಾನದಲ್ಲಿದ್ದಾರೆ.


Click it and Unblock the Notifications