ಬೆಂಗಳೂರು, ಆಗಸ್ಟ್ 24: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಿದೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ.
ಕಳೆದ ದಶಕದಲ್ಲಿ ರಕ್ಷಣಾ ರಫ್ತು 30 ಪಟ್ಟು ಹೆಚ್ಚಾಗಿದೆ ಎಂದು ಅಂಕಿ -ಅಂಶಗಳು ಹೇಳಿವೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದಂತಹ ಸಂಗತಿಗಳು ಈ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಎನ್ನಲಾಗಿದೆ. ಭಾರತವು ಈಗ ದೇಶವು 90 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಕ್ಷಣಾ ಉತ್ಪನ್ನಗಳನ್ನು ಪೂರೈಸುತ್ತದೆ.

ರಷ್ಯಾ-ಉಕ್ರೇನ್ ಯುದ್ಧದ ವಾತಾವರಣದ ಪರಿಣಾಮ ಇತರೆ ದೇಶಗಳು ತಮ್ಮ ರಕ್ಷಣೆಗೆ ಬೇಕಾದ ಸಲಕರಣೆಗಳನ್ನು ಹೆಚ್ಚು ಮಾಡಿಕೊಳ್ಳಲು ಮುಂದಾಗಿದ್ದು ತಮ್ಮ ಮಿಲಿಟರಿ ಸಾಮರ್ಥ್ಯಗಳನ್ನು ಬಲಪಡಿಸಲು ಕಾರಣವಾಗಿದೆ. ಇದರ ಪರಿಣಾಮ ರಕ್ಷಣಾ ರಫ್ತು ಕ್ಷೇತ್ರದಲ್ಲಿ ಈಗ ಭಾರತವು ಪ್ರಮುಖ ಪೂರೈಕೆದಾರನಾಗಿ ಹೊರಹೊಮ್ಮಿದೆ.
2024-2025 ರ ಮೊದಲ ತ್ರೈಮಾಸಿಕದಲ್ಲಿ ಭಾರತದ ರಕ್ಷಣಾ ರಫ್ತುಗಳು 78% ರಷ್ಟು ಏರಿಕೆಯಾಗಿದ್ದು, 6,915 ಕೋಟಿ ರೂ.ಗೆ ತಲುಪಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 3,885 ಕೋಟಿ ರೂ. ಇತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.
ಉತ್ತೇಜನ ನೀಡಿದ ಸರ್ಕಾರದ ನೀತಿಗಳು:
ಈ ರಫ್ತು ಏರಿಕೆಯ ಹಿಂದೆ ಸರ್ಕಾರ ತೆಗೆದುಕೊಂಡ ರೂಪುರೇಷೆಗಳು ಪರಿಣಾಮ ಬೀರಿವೆ. ಪರವಾನಗಿ ಮತ್ತು ಅನುಮೋದನೆಗಳನ್ನು ಸರಳಗೊಳಿಸುವ ನೀತಿ ರಫ್ತು ಏರಿಕೆಗೆ ದೊಡ್ಡ ಕೊಡುಗೆ ನೀಡಿದೆ. ಶಸ್ತ್ರಾಸ್ತ್ರಗಳ ಪೂರೈಗೆಗೆ ಇದ್ದ ಅನೇಕ ತೊಡಕುಗಳು ನಿವಾರಣೆಯಾಗಿವೆ.
2020 ರಲ್ಲಿ ನರೇಂದ್ರ ಮೋದಿ ಸರ್ಕಾರವು ಐದು ವರ್ಷಗಳಲ್ಲಿ ರಕ್ಷಣಾ ವಲಯದ ರಫ್ತುಗಳಲ್ಲಿ 35,000 ಕೋಟಿ ($ 5 ಬಿಲಿಯನ್) ಗುರಿ ಸಾಧಿಸುವ ಗುರಿಯನ್ನು ಹೊಂದಿತ್ತು. ಇದು 2025 ರ ವೇಳೆಗೆ ರಕ್ಷಣಾ ಉತ್ಪಾದನೆಯಲ್ಲಿ 1.75 ಲಕ್ಷ ಕೋಟಿ ($ 25 ಶತಕೋಟಿ) ವಹಿವಾಟು ನಡೆಸುವ ಕಾರ್ಯತಂತ್ರದ ಒಂದು ಭಾಘವಾಗಿತ್ತು. ರಕ್ಷಣಾ ಸಚಿವಾಲಯದ ಇತ್ತೀಚಿನ ಮಾಹಿತಿಯು 2023-2024 ರಲ್ಲಿ ಭಾರತದ ರಕ್ಷಣಾ ರಫ್ತುಗಳು ದಾಖಲೆಯ ರೂ 21,083 ತಲುಪಿದೆ ಎಂದು ತಿಳಿಸುತ್ತದೆ. ಈ ಪ್ರಮಾಣ ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇ. 32.5 ರಷ್ಟು ಹೆಚ್ಚಳವಾಗಿದೆ.
ಸೇನೆಯ ನಿವೃತ್ತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹೆಚ್ ಎಸ್ ಪನಾಗ್ ಈ ಬಗ್ಗೆ ತಮ್ಮ ವಿಶ್ಲೇಷಣೆ ತರೆದಿಡುತ್ತಾರೆ. 2013-14 ರ ವೇಳೆ ನಮ್ಮ ರಕ್ಷಣಾ ವಲಯದ ರಫ್ತುಗಳು 110 ಮಿಲಿಯನ್ ಡಾಲರ್ ಮಾತ್ರವಾಗಿತ್ತು. (ಆಗ ಚಾಲ್ತಿಯಲ್ಲಿದ್ದ ವಿನಿಮಯ ದರದಲ್ಲಿ). ಆಗಸ್ಟ್ 2014ರ ವರೆಗೂ ರಕ್ಷಣಾ ವಲಯದ ರಫ್ತಿಗೆ ಸಂಬಂಧಿಸಿ ಸ್ಟ್ರಾಟಜಿ ಇರಲಿಲ್ಲ. ರಕ್ಷಣಾ ಸಚಿವಾಲಯದಿಂದ [MoD] ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಪಡೆದ ನಂತರ ವಿದೇಶಿ ವ್ಯಾಪಾರ ನೀತಿಯ ಅಡಿಯಲ್ಲಿ ರಫ್ತುಗಳನ್ನು ನಡೆಸಬೇಕಾಗಿತ್ತು. ಆದರೆ 2014 ರ ಸೆಪ್ಟೆಂಬರ್ ನಲ್ಲಿ ಮೋಸಿ ಸರ್ಕಾರ ರಕ್ಷಣಾ ರಫ್ತಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ರೂಪಿಸಿತು. ಇದು ರಫ್ತು ಹೆಚ್ಚಳ ಮತ್ತು ನಿರಂತರತೆ ಬಗ್ಗೆ ವಿಶೇಷ ಗಮನ ನೀಡುವಂತೆ ಮಾಡಿತು.
ಭಾರತೀಯ ರಕ್ಷಣಾ ಸರಕುಗಳ ಪ್ರಮುಖ ಖರೀದಿದಾರ ಯುಎಸ್!
ಯುನೈಟೆಡ್ ಸ್ಟೇಟ್ಸ್ ಭಾರತದ ರಕ್ಷಣಾ ಉತ್ಪನ್ನಗಳ ಅತಿ ದೊಡ್ಡ ಆಮದುದಾರನಾಗಿ ಹೊರಹೊಮ್ಮಿದೆ, ಇದು ಭಾರತದ ಒಟ್ಟು ರಕ್ಷಣಾ ರಫ್ತಿನ ಸುಮಾರು ಶೇ. 50 ರಷ್ಟಿದೆ. ಅಂದರೆ ಅರ್ಧದಷ್ಟು ಪಾಲನ್ನು ಯುಎಸ್ ಎ ಖರೀದಿ ಮಾಡುತ್ತಿದೆ. ಈ ಬಲವಾದ ವ್ಯಾಪಾರ ಸಂಬಂಧವು ದೃಢಗೊಳ್ಳಲು ಹೆಚ್ಚಾಗಿ ಅಮೇರಿಕನ್ ಕಂಪನಿಗಳು ಪ್ರಮುಖ ಕಾರಣವಾಗಿವೆ. ಬೋಯಿಂಗ್ ಮತ್ತು ಲಾಕ್ಹೀಡ್ ಮಾರ್ಟಿನ್ ಈ ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಟಾಟಾ ಗ್ರೂಪ್ ಬೋಯಿಂಗ್ ಜಾಯಿಂಟ್ ವೆಂಚರ್, ಟಾಟಾ ಬೋಯಿಂಗ್ ಏರೋಸ್ಪೇಸ್ ಲಿಮಿಟೆಡ್ (TBAL), ಹೈದರಾಬಾದ್‌ನಲ್ಲಿರುವ ಬೋಯಿಂಗ್‌ನ AH-64 ಅಪಾಚೆ ಹೆಲಿಕಾಪ್ಟರ್‌ಗಾಗಿ ಏರೋ-ಸ್ಟ್ರಕ್ಚರ್‌ಗಳ ತಯಾರಿಕೆ ಎಲ್ಲವೂ ರಫ್ತು ಏರಿಕೆಗೆ ಪ್ರಮುಖ ಕಾರಣವಾಗಿವೆ. ಹೈದರಾಬಾದ್ ಘಟಕ 200 ಕ್ಕೂ ಹೆಚ್ಚು ಅಪಾಚೆ ಫ್ಯೂಸ್ಲೇಜ್‌ಗಳು ಮತ್ತು ಇತರ ವಿಮಾನ ಘಟಕಗಳನ್ನು ಪೂರೈಸುತ್ತ ಬಂದಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ನೊಂದಿಗೆ ಲಾಕ್‌ಹೀಡ್ ಮಾರ್ಟಿನ್ ಪಾಲುದಾರಿಕೆ ಸಹ ರಫ್ತು ಹೆಚ್ಚಲು ಕಾರಣವಾಗಿದೆ. ಇದರಲ್ಲಿನ ಒಂದು ಉದ್ಯಮವು C-130J ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ಘಾಗಾಗಿ 200 ಕ್ಕೂ ಹೆಚ್ಚು ಎಂಪೆನೇಜ್‌ಗಳನ್ನು ಉತ್ಪಾದಿಸುತ್ತದೆ ಮತ್ತು ಇನ್ನೊಂದು ಘಟಕ S-92 ಹೆಲಿಕಾಪ್ಟರ್‌ಗಾಗಿ 157 ಕ್ಕೂ ಹೆಚ್ಚು ಕ್ಯಾಬಿನ್ ಉತ್ಪಾದಿಸಿ ನೀಡುತ್ತಿದೆ.
ವೈವಿಧ್ಯಮಯ ಉತ್ಪನ್ನಗಳು:
ಭಾರತದ ರಕ್ಷಣಾ ವಲಯ ವೈವಿಧ್ಯಮಯ ಸಾಮಗ್ರಿಗಳನ್ನು ತಯಾರಿಸುತ್ತಿದೆ. ಮದ್ದುಗುಂಡುಗಳು ಮತ್ತು ಸ್ನೈಪರ್ ರೈಫಲ್‌ಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳಂತಹ ಸಣ್ಣ ಶಸ್ತ್ರಾಸ್ತ್ರಗಳಿಂದ ಹಿಡಿದು ಹಗುರವಾದ ಟಾರ್ಪಿಡೊಗಳು, ಡ್ರೋನ್‌ಗಳು ಮತ್ತು ವೇಗದ ದಾಳಿಯ ಹಡಗುಗಳಂತಹ ಹೆಚ್ಚು ಸುಧಾರಿತ ವಸ್ತುಗಳ ಉತ್ಪಾದನೆ ಮಾಡುತ್ತಿದೆ. ಬೆಂಗಳೂರು ಮೂಲದ ಇಂಡೋ ಎಂಐಎಂ ಯುರದ್ಧ ಸಾಮಗ್ರಿ ತಯಾರಿಕೆಯಲ್ಲಿ ಹೆಸರು ಪಡೆದುಕೊಂಡಿದೆ. 50 ಕ್ಕೂ ಹೆಚ್ಚು ದೇಶಗಳಿಗೆ ನಿಖರ ಮತ್ತು ಪರಿಣಾಮಕಾರಿ ಸಾಮಗ್ರಿಗಳನ್ನು ರೈಕೆ ಮಾಡುವುದರಲ್ಲಿ ಭಾರತ ಮೊದಲನೇ ಸ್ಥಾನ ಈ ಕಾರಣದಿಂದಲೇ ಪಡೆದುಕೊಂಡಿದೆ.
ಮಯಾನ್ಮಾರ್ ನಂತಹ ಸಾಂಪ್ರದಾಯಿಕ ಮಾರುಕಟ್ಟೆ, ಇಸ್ರೇಲ್ ಮತ್ತು ಅರ್ಮೇನಿಯಾದೊಂದಿಗಿನ ಹೊಸ ಪಾಲುದಾರಿಕೆ ಒಪ್ಪಂದ ಸಹ ಇಲ್ಲಿ ಮುಖ್ಯವಾಗುತ್ತದೆ. ಈ ಎಲ್ಲ ಕಾರಣಗಳು ಭಾರತದ ರಕ್ಷಣಾ ವಲಯದ ಮಾರುಕಟ್ಟೆ ವಿಸ್ತಾರಗೊಳ್ಳಲು ಕಾರಣವಾಗಿದೆ.


Click it and Unblock the Notifications