ರಾಜಧಾನಿ ಬೆಂಗಳೂರು ಈಗಾಗಲೇ ಐಟಿ ವಲಯದಲ್ಲಿ ಉನ್ನತ ಸಾಧನೆ ಮಾಡಿ, ಇಡೀ ದೇಶದ ಗಮನ ಸೆಳೆದಿದೆ. ಕಣ್ಣು ಕುಕ್ಕುವಂತಿರುವ ಬೆಂಗಳೂರಿನ ಅಭಿವೃದ್ಧಿ ಈಗ ಮತ್ತೊಂದು ಹಂತಕ್ಕೆ ತಲಯಪುತ್ತಿದೆ. ಅಂದರೆ ಬೆಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಿಡದಿಯಲ್ಲಿ ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಚಾಲಿತ ಸಮಗ್ರ ನಗರವನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಅನಾವರಣಗೊಳಿಸಿದೆ.

ಈ ಹೊಸ ನಗರವು ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಎಂದು ಕರೆಯಲ್ಪಡಲಿದೆ ಮತ್ತು 9,000 ಎಕರೆ ಪ್ರದೇಶವನ್ನು ಆವರಿಸುತ್ತದೆ. GBIT ಅನ್ನು ಬೆಂಗಳೂರು ನಗರದ ಎರಡನೇ ಕೇಂದ್ರ ವ್ಯಾಪಾರ ಕೇಂದ್ರ (CBD) ಮತ್ತು AI-ಆಧಾರಿತ ಕೈಗಾರಿಕೆಗಳಿಗೆ ಜಾಗತಿಕ ಕೇಂದ್ರವಾಗಿ ರೂಪಿಸಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿವರಿಸಿದಂತೆ, GBIT ಯೋಜನೆಯ ವಿನ್ಯಾಸವು "ಕೆಲಸ-ಜೀವನ-ಆಟ" ತತ್ತ್ವದ ಮೇಲೆ ನಿರ್ಮಿಸಲಾಗಿದೆ. ಇದು ಉದ್ಯಮಗಳು ಮತ್ತು ಸಮುದಾಯಗಳಿಗೆ ಸುಗಮವಾದ ಪರಿಸರವನ್ನು ಒದಗಿಸುತ್ತದೆ. 9,000 ಎಕರೆ ಪ್ರದೇಶವು ವಸತಿ, ವ್ಯಾಪಾರ, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾಗಿದ್ದು, ಹೆಚ್ಚುವರಿ 2,000 ಎಕರೆ ಪ್ರದೇಶವನ್ನು AI-ಆಧಾರಿತ ಕೈಗಾರಿಕೆಗಳಿಗೆ ಮೀಸಲಾಗಿಸಿದೆ.
GBIT ಯೋಜನೆ 300 ಮೀಟರ್ ಅಗಲದ ವ್ಯಾಪಾರ ಕಾರಿಡಾರ್ ಮೂಲಕ ಪ್ರಮುಖ ಹೆದ್ದಾರಿಗಳಾದ STRR, NH-209, NH-275 ಮತ್ತು NICE ರಸ್ತೆಗೆ ಸಂಪರ್ಕ ಹೊಂದಿದೆ. IT, AI ಕೈಗಾರಿಕೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸೇವಾ ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. "ಸ್ಥಳೀಯರಿಗೆ ಮೊದಲ ಉದ್ಯೋಗ ನೀತಿ" ಮೂಲಕ ರಾಜ್ಯದ ಯುವಕರಿಗೆ ಆದ್ಯತೆ ನೀಡಲಾಗುತ್ತದೆ.
ಸಾರಿಗೆ ಮತ್ತು ಮೂಲಸೌಕರ್ಯ:
GBIT ನಲ್ಲಿ 70 ಮೀಟರ್ ಅಗಲದ ರಸ್ತೆಗಳು, ರಿಂಗ್ ರಸ್ತೆ ಮತ್ತು ಎಕ್ಸ್‌ಪ್ರೆಸ್‌ವೇ ಸಂಪರ್ಕಗಳನ್ನು ಹೊಂದಿರುವುದರಿಂದ, ಬೆಂಗಳೂರಿನ ವ್ಯಾಪಾರದ ಹೆಚ್ಚಿನ ಭಾಗವನ್ನು ಹೊರಗೆ ಸ್ಥಳಾಂತರಿಸುವ ಮೂಲಕ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮಗ್ರ ಪಟ್ಟಣದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಗಮವಾಗಿದ್ದು, 1,100 ಎಕರೆ ಹಸಿರು ಪ್ರದೇಶಗಳು, ಉದ್ಯಾನಗಳು, ವಸತಿ ಸಮೂಹಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳು ಕೂಡ ನಿರ್ಮಿಸಲಾಗಿವೆ.
ಹಣಕಾಸು ಮತ್ತು ಅಭಿವೃದ್ಧಿ:
BMRDA 2,950 ಕೋಟಿ ರೂ. ಆಂತರಿಕ ನಿಧಿಯನ್ನು ಹೊಂದಿದ್ದು, ಹೆಚ್ಚುವರಿ 17,500 ಕೋಟಿ ರೂ. ಹಣಕಾಸು ಸಂಸ್ಥೆಗಳ ಮೂಲಕ ಸಂಗ್ರಹಿಸುವ ಯೋಜನೆಯಾಗಿದೆ. ಒಟ್ಟಾರೆ GBIT ಯೋಜನೆ 20,000 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಭೂಸ್ವಾಧೀನ, ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಹಣಕಾಸು ಲಭ್ಯವಿದೆ.
ರೈತ ಮತ್ತು ಭೂಮಾಲೀಕರ ಪಾಲುದಾರಿ:
GBIT ಯೋಜನೆಗಳಲ್ಲಿ ರೈತರು ಮತ್ತು ಭೂಮಾಲೀಕರು ಪಾಲುದಾರರಾಗಿ ಭಾಗವಹಿಸುತ್ತಾರೆ. ಪರಿಹಾರವು 2013ರ ಕಾಯ್ದೆಯಂತೆ ನೀಡಲಾಗುತ್ತದೆ. ಭೂಮಾಲೀಕರು ಪ್ರತಿ ಎಕರೆಗೆ ವರ್ಷಕ್ಕೆ 30,000-50,000 ರೂ. ಪರಿಹಾರ ಪಡೆಯುತ್ತಾರೆ. ಭೂರಹಿತ ಕುಟುಂಬಗಳಿಗೆ ವಾರ್ಷಿಕ 25,000 ರೂ. ಸೌಲಭ್ಯ ನೀಡಲಾಗುತ್ತದೆ.
ಸ್ಮಾರ್ಟ್ ಸಿಟಿ ಮತ್ತು ಸುಸ್ಥಿರತೆ:
GBIT ನಲ್ಲಿ ಎಲ್ಲಾ ಹಳ್ಳಿಗಳ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಹಳ್ಳಿಗಳನ್ನು ಸ್ವಾಧೀನ ಮಾಡುವಾಗ, ವಸತಿ ರಹಿತರು ಮತ್ತು ಸ್ಥಳಾಂತರಗೊಂಡವರಿಗೆ ವಸತಿ ನೀಡಲಾಗುತ್ತದೆ. ತರುವಾಯ, ತೆರಿಗೆ ವಿನಾಯಿತಿ, ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ ನೀಡಲಾಗುತ್ತದೆ. ಹಳ್ಳಿಗಳ ಹೊರಗಿನ ಪ್ರದೇಶದಲ್ಲಿ ರಸ್ತೆ, ವಿದ್ಯುತ್, ಉದ್ಯಾನ, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ಲಭ್ಯವಾಗುತ್ತವೆ.
GBIT ಯೋಜನೆ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದು "ಗೇಮ್-ಚೇಂಜರ್" ಯೋಜನೆಯಾಗಿ ಗುರುತಿಸಲ್ಪಟ್ಟಿದ್ದು, ಬೆಂಗಳೂರಿನ IT ಕ್ಷೇತ್ರದಲ್ಲಿ ತೋರಿದ ಯಶಸ್ಸಿನಂತೆ, AI ಕ್ಷೇತ್ರದಲ್ಲಿ ಮುನ್ನಡೆತೆಯನ್ನು ಸಾಧಿಸುವ ನಗರವಾಗಲಿದೆ.


Click it and Unblock the Notifications