ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇಕಡ 7.80ಕ್ಕೆ ಏರಿಕೆಯಾಗಿದೆ. ಜಿಡಿಪಿ ಶೇಕೆ 7.7ಕ್ಕೆ ಏರಿಕೆಯಾಗುವ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಯಿಗಿಂತ ಜಿಡಿಪಿ ಕೊಂಚಮಟ್ಟ ಏರಿಕೆ ಕಂಡಿದೆ. ಈ ನಡುವೆ ಗ್ರಾಸ್ ವ್ಯಾಲ್ಯೂ ಆಡೆಡ್ (ಜಿವಿಎ/ gross value added) ಮೊದಲ ತ್ರೈಮಾಸಿಕದಲ್ಲಿ ಶೇಕಡ 7.8ರಷ್ಟಿದೆ, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಜಿವಿಎ ಶೇಕಡ 11.9 ಆಗಿತ್ತು.
ಇತ್ತೀಚಿನ ಬೆಳವಣಿಗೆ ದರವು ಹಿಂದಿನ ಹಣಕಾಸು ವರ್ಷದ Q1 ರಲ್ಲಿ ಕಂಡುಬಂದ ಶೇಕಡ 13.1ಕ್ಕಿಂತ ಕಡಿಮೆಯಾಗಿದೆ. ಹಣಕಾಸು ವರ್ಷ 2022ರಲ್ಲಿ ರಿಯಲ್ ಜಿಡಿಪಿ ಶೇಕಡ 9.1 ರಷ್ಟಿದ್ದು, ಹಣಕಾಸು ವರ್ಷ 2023ರಲ್ಲಿ ಶೇಕಡ 7.2 ರಷ್ಟು ರಿಯಲ್ ಜಿಡಿಪಿ ಬೆಳವಣಿಗೆ ದಾಖಲಾಗಿದೆ. ಹಣಕಾಸು ವರ್ಷ 2023ರ ರ ನಾಲ್ಕನೇ ತ್ರೈಮಾಸಿಕದಲ್ಲಿ, ಬೆಳವಣಿಗೆಯು ಶೇಕಡ 6.1ರಷ್ಟಿದ್ದು, ನಿರೀಕ್ಷೆಗಿಂತ ಹೆಚ್ಚಾಗಿತ್ತು. ಆದರೆ ಜಿವಿಎ ಶೇಕಡ 6.5ರಷ್ಟು ಬೆಳವಣಿಗೆ ಕಂಡಿತ್ತು.

ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಪ್ರಕಾರ ಹಣಕಾಸು ವರ್ಷ 2023-24 ರ ಮೊದಲ ತ್ರೈಮಾಸಿಕದಲ್ಲಿ ಭಾರತದ ರಿಯಲ್ ಜಿಡಿಪಿ ಅಥವಾ ಜಿಡಿಪಿ ಅಟ್ ಕಾನ್‌ಸ್ಟಾಂಟ್ (2011-12) ದರವು 40.37 ಲಕ್ಷ ಕೋಟಿ ರೂಪಾಯಿ ಆಗಿರುವ ಅಂದಾಜು ಇತ್ತು. ಆದರೆ ಹಣಕಾಸು ವರ್ಷ 2022-23ರ ಮೊದಲ ತ್ರೈಮಾಸಿಕದಲ್ಲಿ 37.44 ಲಕ್ಷ ಕೋಟಿ ರೂಪಾಯಿ ಆಗಿದೆ. ಬೆಳವಣಿಗೆಯು ಶೇಕಡ 13.1ಕ್ಕೆ ಹೋಲಿಕೆ ಮಾಡಿದಾಗ ಶೇಕಡ 7.8 ಆಗಿದೆ.
ಭಾರತದ ಆರ್ಥಿಕ ಬೆಳವಣಿಗೆಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡ 7.8 ರಷ್ಟಿತ್ತು. ಒಂದು ವರ್ಷದಲ್ಲಿ ಅತ್ಯಂತ ವೇಗವಾದ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. ಸೇವಾ ವಲಯದ ದೃಢವಾದ ಕಾರ್ಯಕ್ಷಮತೆಯು ಜಿಡಿಪಿ ಬೆಳವಣಿಗೆಯ ಪ್ರಮುಖ ಆಧಾರವಾಗಿದೆ.
ಇದಲ್ಲದೆ, ಹಣಕಾಸು ವರ್ಷ 2023-24ರ ತ್ರೈಮಾಸಿಕ ಒಂದರಲ್ಲಿ ಪ್ರಸ್ತುತ ಬೆಲೆಗಳಲ್ಲಿ ನಾಮಿನಲ್ ಜಿಡಿಪಿ 70.67 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆದರೆ ಹಣಕಾಸು ವರ್ಷ 2022-23 ರ ಮೊದಲ ತ್ರೈಮಾಸಿಕದಲ್ಲಿ 65.42 ಲಕ್ಷ ಕೋಟಿ ರೂಪಾಯಿ ಆಗಿತ್ತು. ಹಾಗೆಯೇ ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 8ರಷ್ಟು ಜಿಡಿಪಿಯ ಅಂದಾಜನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾಡಿತ್ತು, ಆದರೆ ಅಂದಾಜಿಗಿಂತ ಕಡಿಮೆಯಾಗಿದೆ.


Click it and Unblock the Notifications