ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡ 7.6 ರಷ್ಟು ಬೆಳವಣಿಗೆ ಕಂಡಿದೆ. ಇಕಾನಮಿ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದ 10 ಅರ್ಥಶಾಸ್ತ್ರಜ್ಞರು ಈ ತ್ರೈಮಾಸಿಕದಲ್ಲಿ ಶೇಕಡ 6.7 ರಷ್ಟು ಜಿಡಿಪಿ ಬೆಳವಣಿಗೆ ಅಂದಾಜು ವ್ಯಕ್ತಪಡಿಸಿದ್ದರು.
ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಶೇಕಡ 7.6 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ವಿಶ್ಲೇಷಕರ ನಿರೀಕ್ಷೆಗಳನ್ನು ಮೀರಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಗುರುವಾರ ಬಿಡುಗಡೆ ಮಾಡಿದೆ.

ಇಕಾನಮಿಕ್ಸ್ ಟೈಮ್ಸ್ ಪ್ರಕಾರ 10 ಅರ್ಥಶಾಸ್ತ್ರಜ್ಞರ ಸರಾಸರಿ ಸಮೀಕ್ಷೆಯು ಆರ್ಥಿಕತೆಯು ಶೇಕಡ 6.7 ರಷ್ಟು ಬೆಳವಣಿಗೆಯ ಅಂಕಿಅಂಶಗಳನ್ನು ತೋರಿಸಿದೆ. ತ್ರೈಮಾಸಿಕದಲ್ಲಿ ಆರ್‌ಬಿಐ ಅಂದಾಜಿಗಿಂತ 20 ಬೇಸಿಸ್ ಪಾಯಿಂಟ್‌ಗಳು ಹೆಚ್ಚಳವಾಗಿದೆ.
ಎರಡನೇ ತ್ರೈಮಾಸಿಕದ ಆಶಾವಾದಿ ದೃಷ್ಟಿಕೋನವು ಸರ್ಕಾರದ ಬಂಡವಾಳದ ವೆಚ್ಚದಲ್ಲಿನ ಏರಿಕೆಯಿಂದ ಭಾಗಶಃ ಉತ್ತೇಜನಗೊಂಡಿದೆ. ಹಿಂದಿನ ವರ್ಷದ 3.43 ಟ್ರಿಲಿಯನ್ ರೂಪಾಯಿಗಳನ್ನು ಮೀರಿಸಿ, ಹಣಕಾಸಿನ ವರ್ಷದ ಮೊದಲಾರ್ಧದಲ್ಲಿ 4.91 ಟ್ರಿಲಿಯನ್ ಭಾರತೀಯ ರೂಪಾಯಿಗಳನ್ನು ($58.98 ಶತಕೋಟಿ) ತಲುಪಿದೆ.
ಈ ಹಿಂದಿನ ತ್ರೈಮಾಸಿಕದ ಜಿಡಿಪಿ
ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇಕಡ 7.80ಕ್ಕೆ ಏರಿಕೆಯಾಗಿದೆ. ಜಿಡಿಪಿ ಶೇಕೆ 7.7ಕ್ಕೆ ಏರಿಕೆಯಾಗುವ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಯಿಗಿಂತ ಜಿಡಿಪಿ ಕೊಂಚಮಟ್ಟ ಏರಿಕೆ ಕಂಡಿದೆ. ಈ ನಡುವೆ ಗ್ರಾಸ್ ವ್ಯಾಲ್ಯೂ ಆಡೆಡ್ (ಜಿವಿಎ/ gross value added) ಮೊದಲ ತ್ರೈಮಾಸಿಕದಲ್ಲಿ ಶೇಕಡ 7.8ರಷ್ಟಿದೆ, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಜಿವಿಎ ಶೇಕಡ 11.9 ಆಗಿತ್ತು.


Click it and Unblock the Notifications