ಎರಡನೇ ತ್ರೈಮಾಸಿಕದಲ್ಲಿ ಭಾರತದ GDP ಬೆಳವಣಿಗೆ ದರ 5.4% ಕ್ಕೆ ಇಳಿಕೆ

ಉತ್ಪಾದನೆ, ಬಳಕೆ ಮತ್ತು ಗಣಿಗಾರಿಕೆಯಲ್ಲಿನ ಕುಸಿತದ ಬೆಳವಣಿಗೆಯ ದರದಿಂದಾಗಿ 2024-25 ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜುಲೈನಿಂದ ಸೆಪ್ಟೆಂಬರ್'ವರೆಗೆ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು 5.4% ಕ್ಕೆ ಇಳಿದಿದೆ. ಒಟ್ಟಾರೆ ಗಮನಿಸುವುದಾದರೆ, ಎರಡನೇ ತ್ರೈಮಾಸಿಕದಲ್ಲಿ ಏಳು ತ್ರೈಮಾಸಿಕಗಳಲ್ಲಿ ಅದರ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO), ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಶುಕ್ರವಾರ, ನವೆಂಬರ್ 29, 2024 ರಂದು ಬಿಡುಗಡೆ ಮಾಡಿದ ಸರ್ಕಾರಿ ಮಾಹಿತಿಯ ಪ್ರಕಾರ ಜಿಡಿಪಿ ಬೆಳವಣಿಗೆ ದರವು 2023-24ರ ಎರಡನೇ ತ್ರೈಮಾಸಿಕದಲ್ಲಿ 8.1% ರಷ್ಟಿತ್ತು. ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ದೇಶದ ಜಿಡಿಪಿಯು 7.2 ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿತ್ತು. ಆದರೆ ಈ ಅಂದಾಜನ್ನು ತಲುಪಲು ಸಾಧ್ಯವಾಗಿಲ್ಲ.

ಎರಡನೇ ತ್ರೈಮಾಸಿಕದಲ್ಲಿ ಭಾರತದ GDP 5.4% ಕ್ಕೆ ಇಳಿಕೆ

ಮೊದಲ ತ್ರೈ ಮಾಸಿಕದಲ್ಲಿ ಜಿಡಿಪಿಯು ಶೇ6.7 ರಷ್ಟು ದಾಖಲಾಗಿತ್ತು. ಎರಡನೇ ತ್ರೈ ಮಾಸಿಕದ ಅಧಿಕೃತ ವರದಿಯನ್ನು ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯು ನ.30 ರಂದು ಅಂದರೆ ನಾಳೆ ಬಿಡುಗಡೆ ಮಾಡಲಿದೆ.

2024-25 ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ GDP ಕುಸಿಯಲು ಕಾರಣವೇನು?

ಎಲ್ಲಾ ಕ್ಷೇತ್ರಗಳನ್ನು ಗಮನಿಸುವುದಾದರೆ ಉತ್ಪಾದನೆ ಮತ್ತು ಗಣಿಗಾರಿಕೆಯು ಇತರ ಕ್ಷೇತ್ರಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಉತ್ಪಾದನಾ ವಲಯದ ಒಟ್ಟು ಮೌಲ್ಯವರ್ಧಿತ (GVA) ದರವು ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹೋಲಿಸಿದರೆ 14.3% ರಿಂದ ಕೇವಲ 2.2% ಕ್ಕೆ ಕುಸಿದಿದೆ.

ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ವಲಯ ಮಾತ್ರ ಈ ಬಾರಿ ಋಣಾತ್ಮಕ GVA ದರವನ್ನು -0.1% ದಾಖಲಿಸಿದೆ. ಕಳೆದ ವರ್ಷ ಇದು 11.1% ರಷ್ಟು ಪ್ರಗತಿ ಕಂಡಿತ್ತು. ಇದಲ್ಲದೇ ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳ ಬೆಳವಣಿಗೆಯ ದರವು ಕೂಡ ಕುಸಿತ ಕಂಡಿದೆ. ಇದು ಗ್ರಾಹಕ ಬಳಕೆಯ ಬೆಳವಣಿಗೆಯಲ್ಲಿ ಇಳಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ಕಳೆದ ವರ್ಷದ 10.4% ರಿಂದ ಈ ವರ್ಷ ಕೇವಲ 3.3% ಕ್ಕೆ ಕುಸಿದಿದೆ.

ಕಳೆದ ಬಾರಿ ಶೇಕಡಾ 13.6 ರಷ್ಟು ಬೆಳವಣಿಗೆಯನ್ನು ಕಂಡ ನಿರ್ಮಾಣ ಕ್ಷೇತ್ರವು ಈ ಬಾರಿ ಬೆಳವಣಿಗೆಯಲ್ಲಿ ಶೇಕಡಾ 7.7 ಕ್ಕೆ ಕುಸಿದಿದೆ.ಕೃಷಿ, ಜಾನುವಾರು, ಅರಣ್ಯ ಮತ್ತು ಮೀನುಗಾರಿಕೆ ಕ್ಷೇತ್ರವು ಸಕಾರಾತ್ಮಕ ಲಕ್ಷಣಗಳನ್ನು ತೋರಿಸಿದೆ. ಖಾಸಗಿ ಬಳಕೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದರೂ, ನಗರ ಪ್ರದೇಶಗಳಲ್ಲಿನ ವೆಚ್ಚವು ನಿಧಾನವಾಗಿದೆ. ಇದಕ್ಕೆ ಕಾರಣವೆಂದರೆ ಹೆಚ್ಚಿನ ಆಹಾರದ ಬೆಲೆಗಳು, ಸಾಲದ ಮೇಲಿನ ಹೆಚ್ಚಿನ ಬಡ್ಡಿ ಮತ್ತು ನಿಜವಾದ ವೇತನದ ಬೆಳವಣಿಗೆ ಕುಂಠಿತವಾಗಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ GDP ಯ 60% ರಷ್ಟಿರುವ ಖಾಸಗಿ ಬಳಕೆಯ ಮೇಲೆ ಪರಿಣಾಮ ಬೀರಿವೆ.

ಕೋವಿಡ್ ಸಂಕಷ್ಟದಿಂದ ಚೇತರಿಸಿಕೊಂಡ ಭಾರತೀಯ ಆರ್ಥಿಕತೆ ಈಗ ಮಂದಗತಿಯ ಹಾದಿಯಲ್ಲಿದೆ. ಕಾರ್ಪೊರೇಟ್ ಲಾಭದಲ್ಲಿನ ಕುಸಿತವು ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ತಜ್ಞರು ಹೇಳಿದ್ದಾರೆ. ಮುಕ್ತ ಮಾರುಕಟ್ಟೆಗಳಲ್ಲಿ ಇಂತಹ ಏರಿಳಿತಗಳು ಸಾಮಾನ್ಯವಾಗಿದ್ದರೂ, ಅಲ್ಪಾವಧಿಯಲ್ಲಿ ಮಧ್ಯಮ ವರ್ಗದ ಖರ್ಚಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.

2024-25 ಹಣಕಾಸು ವರ್ಷದ ಬಜೆಟ್ ನಲ್ಲಿ ಸರ್ಕಾರ ಬಂಡವಾಳ ವೆಚ್ಚವನ್ನು11.11 ಲಕ್ಷ ಕೋಟಿ ರೂಪಾಯಿಗಳಿಗೆ ನಿಗದಿಪಡಿಸಿತ್ತು. ಆದರೆ ಈ ಗುರಿ ತಲುಪುವುದು ಕಷ್ಟಸಾಧ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+