ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಸರಕು ಟರ್ಮಿನಲ್‌ನ ಪ್ರಾರಂಭಕ್ಕೆ ಸಜ್ಜಾಗುತ್ತಿದ್ದು ಉದ್ಘಾಟನೆ ನಡೆದಿದೆ. ಇದನ್ನು ಪ್ರಾರಂಭಿಸಲು ಮೆನ್ಜೀಸ್ ಏವಿಯೇಷನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಸುಮಾರು 2 ಲಕ್ಷ 45,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಅತ್ಯಾಧುನಿಕ ಸೌಲಭ್ಯ ನಿರ್ಮಾಣವಾಗುತ್ತಿದೆ. ಇದು ಕೆಂಪೇಗೌಡ ವಿಮಾನ ನಿಲ್ದಾಣದ ಸರಕು ನಿರ್ವಹಣಾ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎನ್ನಲಾಗಿದೆ.
ಅಲ್ಲದೇ ಈ ಅತ್ಯಾಧುನಿಕ ಸೌಲಭ್ಯವು ದಕ್ಷತೆ, ಸಂಪರ್ಕ ಮತ್ತು ಸುಸ್ಥಿರತೆಯನ್ನು ಸುಧಾರಿಸುತ್ತದೆ. ಏಳು ಎಕರೆ ವಿಸ್ತೀರ್ಣದಲ್ಲಿ ವರ್ಧಿತ ಸಾಮರ್ಥ್ಯ ಮತ್ತು ಸುಧಾರಿತ ಮೂಲಸೌಕರ್ಯಗಳಿದ್ದು, ಈ ಟರ್ಮಿನಲ್ 3 ಲಕ್ಷ 60,000 ಮೆಟ್ರಿಕ್ ಟನ್‌ಗಳ ಗರಿಷ್ಠ ನಿರ್ವಹಣಾ ಸಾಮರ್ಥ್ಯ ಹೊಂದಿದೆ. ಮತ್ತು ಇದು ನಾಲ್ಕು ಲಕ್ಷ ಮೆಟ್ರಿಕ್ ಟನ್‌ಗಳಿಗೆ ವಿಸ್ತರಿಸಬಹುದಾಗಿದೆ. ಇಲ್ಲಿ 42 ಟ್ರಕ್ ಡಾಕ್‌ಗಳು, 400ಕ್ಕೂ ಹೆಚ್ಚು ವಿಶೇಷ ಸರಕು ಬಿನ್‌ಗಳು, ಎಕ್ಸ್-ರೇ-ಇಂಟಿಗ್ರೇಟೆಡ್ ಕನ್ವೇಯರ್‌ಗಳು ಮತ್ತು 30 ಯುಎಲ್‌ಡಿ ಬಿಲ್ಡ್-ಅಪ್/ಬ್ರೇಕ್‌ಡೌನ್ ಸ್ಟೇಷನ್‌ಗಳನ್ನು ಹೊಂದಿರುವ ಈ ಸೌಲಭ್ಯವನ್ನು ವಿನ್ಯಾಸಗೊಳಿಸಲಾಗಿದೆ. ತಡೆರಹಿತ ಸರಕು ಚಲನೆ ಮತ್ತು ತಿರುವುಗಳನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಈ ವಿನ್ಯಾಸ ಮಾಡಲಾಗಿದೆ.

ಬಾರ್‌ಕೋಡ್ ಮತ್ತು QR ಕೋಡ್-ಸಕ್ರಿಯಗೊಳಿಸಿದ ನಂತರ ಡೇಟಾ ವಿನಿಮಯ ಮತ್ತು ಸ್ವಯಂಚಾಲಿತ ಸ್ವ-ಸೇವಾ ಕಿಯೋಸ್ಕ್‌ಗಳು ಸೇರಿದಂತೆ ಡಿಜಿಟಲ್ ಪರಿಹಾರಗಳ ಏಕೀಕರಣವಿದೆ. ಇದು ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಪಾರದರ್ಶಕ ಸರಕು ನಿರ್ವಹಣೆಯನ್ನು ಖಾತ್ರಿಗೊಳಿಸುತ್ತದೆ. ಇದರ ಜೊತೆಗೆ ತಾಜಾ ಉತ್ಪನ್ನಗಳು, ಬೆಲೆಬಾಳುವ ವಸ್ತುಗಳು, ಜೀವಂತ ಪ್ರಾಣಿಗಳು ಮತ್ತು ಅಪಾಯಕಾರಿ ಸರಕುಗಳ ನಿರ್ವಹಣೆಯನ್ನು ಹೆಚ್ಚಿಸುತ್ತದೆ. ಈ ಟರ್ಮಿನಲ್ ವಿಶೇಷ ಸರಕುಗಳಿಗಾಗಿ ಮೀಸಲಾದ ಸಂಗ್ರಹಣೆಯನ್ನು ಒಳಗೊಂಡಿದೆ. ಅಲ್ಲದೇ ಇದು ವಾಯು ಸರಕು ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾತ್ರವನ್ನು ಬಲಪಡಿಸುತ್ತದೆ.
ಹಾಳಾಗುವ ವಸ್ತುಗಳ ನಿರ್ವಹಣೆ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಪ್ರಮುಖ, ಹಾಳಾಗುವಂತಹ ವಸ್ತುಗಳ ನಿರ್ವಹಣೆ ಮಾಡುವ ಸಾಗಣಾ ಕೇಂದ್ರವಾಗಿದೆ. ಅಂದರೆ ಈ ಹೊಸ ಕಾರ್ಗೊ ಟರ್ಮಿನಲ್ ತಾಜಾ ಹಣ್ಣು-ತರಕಾರಿಗಳಂತಹ ಅಮೂಲ್ಯ ವಸ್ತುಗಳು ಜೀವಂತ ಪ್ರಾಣಿಗಳು ಮತ್ತು ಅಪಾಯಕಾರಿ ಸರಕುಗಳ ಸಂಗ್ರಹಣೆಯನ್ನು ಮತ್ತಷ್ಟು ಉತ್ತಮವಾಗಿ ಸುಧಾರಿಸುತ್ತದೆ. ವಿಶೇಷ ಕೋಲ್ಡ್ ಸ್ಟೋರೇಜ್ ಹೊಂದಿರುವುದರಿಂದ ಹಾನಿ ತಡೆಗಟ್ಟುವ ಘಕಟಗಳೊಂದಿಗೆ ವಸ್ತು ಸಂಗ್ರಹಣೆ ಅನುಕೂಲವಾಗಿದೆ.
ಪರಿಸರದ ಮೇಲೆ ಕಡಿಮೆ ಪರಿಣಾಮ:
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಾರಂಭವಾಗುತ್ತಿರುವ ಈ ಹೊಸ ದೇಶೀಯ ಸರಕು ಟರ್ಮಿನಲ್, ಭಾರತೀಯ ಹಸಿರು ಕಟ್ಟಡ ಪರಿಷತ್ ಮಾನದಂಡಗಳನ್ನು ಅನುಸರಿಸಿ ನಿರ್ಮಿಸಲಾಗಿದೆ. ಇದರಿಂದ ಪರಿಸರದ ಮೇಲೆ ಅತಿಹೆಚ್ಚು ಕೆಟ್ಟ ಪರಿಣಾಮ ಬೀರುವುದಿಲ್ಲ. ನಿಜ ಹೇಳಬೇಕೆಂದರೆ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀಳಬಾರದೆನ್ನುವ ಉದ್ದೇಶದಿಂದಲೂ ಇದನ್ನು ಪ್ರಾರಂಭಿಸಲಾಗುತ್ತಿದೆ. ಅಲ್ಲದೇ ಕಾರ್ಯಾಚರಣೆಯ ದಕ್ಷತೆಯನ್ನು ಮತ್ತು ಕಾರ್ಮಿಕರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲಾಗಿದೆ.
ಇದು ಪರಿಸರದ ಮೇಲೆ ಹೇಗೆ ಪರಿಣಾಮ ಬೀರುವುದಿಲ್ಲವೆಂದರೆ, ಪ್ರತಿದಿನ ಬೆಳಕನ್ನು ಉತ್ತಮವಾಗಿ ಬಳಸುವಂತೆ ವಿನ್ಯಾಸಗೊಳಿಸಿರುವ Skylight Lights, ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಶಕ್ತಿ ಸಂಚಯಕ್ಕೆ ಅನುಗುಣವಾಗಿ ಶುದ್ಧ ಗಾಳಿಯ ಹರಿಸುವ ಸುಧಾರಿತ ಹವಾನಿಯಂತ್ರಣ ಮತ್ತು ಗಾಳಿ ಪ್ರಸರಣ ವ್ಯವಸ್ಥೆ ತಂತ್ರಜ್ಞಾನವನ್ನು ಕೂಡ ಇರಿಸಲಾಗುತ್ತದೆ. : ಮಳೆ ನೀರಿನ ಸಂಗ್ರಹಣೆ ಮತ್ತು ಮತ್ತೆ ಬಳಕೆ ಮಾಡಬಹುದಾದ ನೀರು ಶುದ್ಧೀಕರಣ ವ್ಯವಸ್ಥೆಗಾಗಿ, ಜಲ ಸಂರಕ್ಷಣೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಡಿಮೆ ವಿದ್ಯುತ್ ಬಳಸುವ LED ದೀಪಗಳು ಮತ್ತು ತಾಪಮಾನ ನಿಯಂತ್ರಣ ತಂತ್ರಜ್ಞಾನ ಹೊಂದಿದೆ. ಸೌರಶಕ್ತಿ ಮತ್ತು ಇತರ ಹಸಿರು ಶಕ್ತಿಯ ಬಳಕೆಯಿಂದ ಶುದ್ಧ ಪರಿಸರ ಪ್ರಚಾರ ಸಿಗುತ್ತದೆ. ಈ ಮೂಲಕ ಪರಿಸರದ ಶುದ್ಧತೆಯನ್ನು ನಿರ್ವಹಣೆ ಮಾಡಲಾಗುತ್ತದೆ.
BIAL ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದೇನು..?
ಈ ಬಗ್ಗೆ BIAL ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೊಸ ದೇಶೀಯ ಸರಕು ಟರ್ಮಿನಲ್ ನಮ್ಮ ಸುಸ್ಥಿರ ಬೆಳವಣಿಗೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮತ್ತು ಇದು ಪರಿಸರ ಸ್ನೇಹಿ ಕ್ರಮಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸುತ್ತದೆ. ಈ ಮೂಲಕ ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಮೆನ್ಜೀಸ್ ಏವಿಯೇಷನ್‌ನ EVP ಚಾರ್ಲ್ಸ್ ವೈಲಿ ಹೇಳಿದ್ದೇನು..?
ಇನ್ನು ಇದರ ಪಾಲುದಾರಿಕೆ ಹೊಂದಿರುವ ಮೆನ್ಜೀಸ್ ಏವಿಯೇಷನ್‌ನ EVP ಚಾರ್ಲ್ಸ್ ವೈಲಿ ಮಾತನಾಡಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮ್ಮ ಹೊಸ ಗ್ರೀನ್‌ಫೀಲ್ಡ್ ಸರಕು ಟರ್ಮಿನಲ್ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭವಾಗುತ್ತಿದೆ. ಇದು ದಕ್ಷ, ವಿಶ್ವಾಸಾರ್ಹ ಮತ್ತು ಸ್ಮಾರ್ಟ್ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ವಾಯು ಸರಕು ಸಾಗಣೆ 2029ರ ವೇಳೆಗೆ 5.8 ಮಿಲಿಯನ್ ಮೆಟ್ರಿಕ್ ಟನ್ ತಲುಪುವುದರಲ್ಲಿ ಅನುಮಾನವಿಲ್ಲ. ಹೀಗಾಗಿಯೇ ನಮ್ಮ ಹೊಸ ಸೌಲಭ್ಯ ಇಂದಿನ ಬೇಡಿಕೆಯನ್ನು ಪೂರೈಸುತ್ತದೆ. ಇದರ ಜೊತೆಗೆ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಇದು ವಿಸ್ತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.


Click it and Unblock the Notifications