ನವದೆಹಲಿ, ಮಾರ್ಚ್ 10: ವ್ರತಿಕಾ ಗುಪ್ತಾ ಅವರು ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್‌ಯುವಿ ಕಾರ್ ನ ಮೊದಲ ಮಹಿಳಾ ಮಾಲೀಕರಲ್ಲಿ ಒಬ್ಬರಾಗಿದ್ದಾರೆ. ಅಂದ ಹಾಗೆ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ದೇಶದ ಅತ್ಯಂತ ದುಬಾರಿ ಎಸ್‌ಯುವಿಯಾಗಿದೆ.
ಈ ವಾಹನದ ಆರಂಭಿಕ ಬೆಲೆ ರೂ 12.25 ಕೋಟಿಯಾಗಿದೆ. ಮತ್ತು ಖರೀದಿದಾರರ ಬೇಡಿಕೆಗೆ ಅನುಗುಣವಾಗಿ ಕಸ್ಟಮೈಜ್ ಮಾಡಿಕೊಳ್ಳುವಾಗ ಇದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಭಾರತದಲ್ಲಿ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್‌ನ ಕೆಲವೇ ಕೆಲವು ಮಾಲೀಕರಿದ್ದು ಇವರಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಕೂಡಾ ಒಬ್ಬರಾಗಿದ್ದಾರೆ. ಆದರೆ ಭಾರತದಲ್ಲಿ ಈ ಸೂಪರ್ ಐಷಾರಾಮಿ ಎಸ್‌ಯುವಿಯ ಮಹಿಳಾ ಮಾಲೀಕರಿರಲಿಲ್ಲ. ವ್ರತಿಕಾ ಗುಪ್ತಾ ಅವರೇ ಭಾರತದಲ್ಲಿ ಈ ಲಕ್ಸುರಿ ಕಾರ್ ನ ಮಹಿಳಾ ಮಾಲೀಕರಾಗಿದ್ದಾರೆ.

IndexTap.com ವರದಿಯ ಪ್ರಕಾರ, ವ್ರತಿಕಾ ಗುಪ್ತಾ ಇತ್ತೀಚೆಗೆ ಮುಂಬೈನಲ್ಲಿ 116 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಮುಂಬೈನ ಲೋವರ್ ಪರೇಲ್‌ನಲ್ಲಿರುವ ಕಟ್ಟಡ ಸಂಕೀರ್ಣದ 49 ನೇ ಮಹಡಿಯಲ್ಲಿ ಇವರು ಫ್ಲಾಟ್ ಖರೀದಿ ಮಾಡಿದ್ದಾರೆ.
ಮಾರಾಟ ಒಪ್ಪಂದದ ಪ್ರಕಾರ, ಖರೀದಿದಾರರು ಈ ಒಪ್ಪಂದಕ್ಕಾಗಿ 5.82 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ.
ವ್ರತಿಕಾ ಗುಪ್ತಾ ಓರ್ವ ವಾಣಿಜ್ಯೋದ್ಯಮಿಯಾಗಿದ್ದು, ಇದೀಗ ಅವರು ಹಳದಿ ಬಣ್ಣದ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್‌ಯುವಿಯ ಹೆಮ್ಮೆಯ ಮಾಲೀಕರಾಗಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ವ್ರತಿಕಾ ಗುಪ್ತಾ "ಇಂಟೀರಿಯರ್ ಡಿಸೈನರ್ / ಫ್ಯಾಶನ್ ಡಿಸೈನರ್, ಡೈ ಹಾರ್ಡ್ ಫ್ಯಾಶನ್ ಅಡಿಕ್ಟ್ !! ಪ್ರೀತಿಯಿಂದ ಪ್ರೇರಿತ: ಲೈಫ್ ಎಂದು ಬರೆದುಕೊಂಡಿದ್ದಾರೆ.
NIFT ಮತ್ತು ಪರ್ಲ್ ಅಕಾಡೆಮಿ ಆಫ್ ಫ್ಯಾಶನ್‌ನ ವಿದ್ಯಾರ್ಥಿನಿಯಾಗಿದ್ದವ್ರತಿಕಾ ಗುಪ್ತಾ ಇಂದು ವೃತ್ತಿಪರವಾಗಿ ಫ್ಯಾಷನ್ ಡಿಸೈನರ್ ಆಗಿದ್ದು, ಫ್ಯಾಶನ್ಸ್ ಲಿಮಿಟೆಡ್‌ನಲ್ಲಿ ಅಪ್ಯಾರಲ್ ಡಿಸೈನರ್ ಆಗಿ ಫ್ಯಾಷನ್ ಜಗತ್ತಿನಲ್ಲಿ ವೃತಿಪರ ಪ್ರಯಾಣ ಆರಂಭಿಸಿದರು. ಅವರ ಸೃಜನಶೀಲತೆಯಿಂದ ಮುಂದೆ ಪ್ರಖ್ಯಾತ ಬ್ರ್ಯಾಂಡ್ ಅಂಜು ಮೋದಿ ಯೊಂದಿಗೆ 2009 ರಿಂದ 2011 ರವರೆಗೆ ವಿನ್ಯಾಸಕರಾಗಿ ಕೆಲಸ ಮಾಡಿದರು. ವ್ರತಿಕಾ ಅವರು ನಕುಲ್ ಅಗರ್ವಾಲ್ ಅವರನ್ನು ವಿವಾಹವಾಗಿದ್ದಾರೆ.
2022 ರಲ್ಲಿ, ಅವರು "ಮೈಸನ್ ಸಿಯಾ" ಎಂಬ ಐಷಾರಾಮಿ ಗೃಹಾಲಂಕಾರ ಮಳಿಗೆಯನ್ನು ಸ್ಥಾಪಿಸಿದ್ದು, ಇದು ಅನೇಕ ಡೆಕೋರ್ ಬ್ರ್ಯಾಂಡ್ ಗಳನ್ನು ಇದು ತನ್ಮೂಲಕ ಭಾರತಕ್ಕೆ ತರುತ್ತದೆ. ಮೈಸನ್ ಸಿಯಾ ಪ್ರಾರಂಭವಾಗುವ ಮೊದಲು, ವ್ರತಿಕಾ ಗುಪ್ತಾ ಹಲವಾರು ಇತರ ಕಂಪನಿಗಳೊಂದಿಗೆ ಡಿಸೈನರ್ ಮತ್ತು ಸಹ-ಸಂಸ್ಥಾಪಕರಾಗಿ ಕೆಲಸ ಮಾಡಿದ್ದರು.


Click it and Unblock the Notifications