ಮತ್ತೆ ಬಂಪರ್ ಜಾಕ್‌ಪಾಟ್‌ ಹೊಡೆದ ಭಾರತದ ನೆರೆರಾಷ್ಟ್ರಗಳು: 168 ಟನ್‌ ಚಿನ್ನದ ನಿಕ್ಷೇಪ ಪತ್ತೆ

ಹೌದು, ಚೀನಾಗೆ ಅಕ್ಷರಶಃ ಲಾಟರಿ ಹೊಡೆದಿದೆ. ಬರೋಬ್ಬರಿ 168 ಟನ್‌ ಚಿನ್ನದ ನಿಕ್ಷೇಪವನ್ನು ಚೀನಾದ ಕಮ್ಯುನಿಸ್ಟ್‌ ಸರ್ಕಾರ ಪತ್ತೆ ಹಚ್ಚಿದೆ. ದೇಶದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ಪ್ರಕಾರ ಚಿನ್ನದ ನಿಕ್ಷೇಪ ಗನ್ಸು ಪ್ರಾಂತ್ಯ (ವಾಯುವ್ಯ ಚೀನಾ), ಇನ್ನರ್ ಮಂಗೋಲಿಯಾ (ಉತ್ತರ ಚೀನಾ), ಮತ್ತು ಹೀಲಾಂಗ್‌ಜಿಯಾಂಗ್ ಪ್ರಾಂತ್ಯ (ಈಶಾನ್ಯ ಚೀನಾ) ಗಳಲ್ಲಿ ಕಂಡುಬಂದಿದೆ. ಇದು ಜಾಗತಿಕ ಮಟ್ಟದಲ್ಲಿ ಮತ್ತೆ ಭಾರೀ ಸಂಚಲನ ಸೃಷ್ಟಿಸಿದೆ. ಈ ಹಿಂದೆಯೂ ಬಹುದೊಡ್ಡ ಚಿನ್ನದ ಅದಿರು ನಿಕ್ಷೇಪವನ್ನು ಚೀನಾ ತನ್ನೊಡಲಿನಲ್ಲಿ ಪತ್ತೆ ಹಚ್ಚಿತ್ತು. ಹಿಂದಿನ ಶೋಧನೆಯ ಪ್ರಕಾರ ಇಲ್ಲಿ ಸುಮಾರು US$83 ಶತಕೋಟಿ ಮೌಲ್ಯದ ಅಂದರೆ 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೊನ್ನಿನ ಅದಿರು ಇದೆ ಎನ್ನಲಾಗಿದೆ.

ಹೊಸ ಚಿನ್ನದ ನಿಕ್ಷೇಪದಲ್ಲಿ ಹಳದಿ ಲೋಹದ ಒಟ್ಟು ಪ್ರಮಾಣ 168 ಟನ್‌ಗಳಷ್ಟಿದೆ ಎಂದು ಚೀನಾದ ರಾಜ್ಯ ಮಾಧ್ಯಮ ವರದಿ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾವು ಹುನಾನ್ ಪ್ರಾಂತ್ಯದಲ್ಲಿ ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಕಂಡುಹಿಡಿದು ಜಾಗತಿಕ ಗಮನವನ್ನು ಸೆಳೆದಿತ್ತು.

ಚೀನಾ, ಪಾಕ್‌ಗೆ ಜಾಕ್‌ಪಾಟ್‌: ಚಿನ್ನದ ನಿಕ್ಷೇಪ ಪತ್ತೆ

ಫೋರ್ಬ್ಸ್ ವರದಿಯ ಪ್ರಕಾರ, ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಹೊಂದಿರುವ ಮೊದಲ ಮೂರು ದೇಶಗಳೆಂದರೆ ಯುನೈಟೆಡ್ ಸ್ಟೇಟ್ಸ್, ಜರ್ಮನಿ ಮತ್ತು ಇಟಲಿ. ಈ ಪೈಕಿ ಅಮೇರಿಕಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ ಪಟ್ಟಿಯಲ್ಲಿರುವ ಮುಂದಿನ ಮೂರು ದೇಶಗಳು ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ನಲ್ಲಿ ಒಟ್ಟುಗೂಡಿಸಿದಷ್ಟು ಚಿನ್ನವನ್ನು ಅಮೇರಿಕಾ ದೇಶವೊಂದೇ ಹೊಂದಿದೆ.

ಚೀನಾ 2,264.32 ಟನ್ ಚಿನ್ನದ ನಿಕ್ಷೇಪಗಳೊಂದಿಗೆ ಜಾಗತಿಕವಾಗಿ ಆರನೇ ಸ್ಥಾನದಲ್ಲಿದೆ, 840.76 ಟನ್ ಹೊಂದಿರುವ ಭಾರತಕ್ಕಿಂತ ಮುಂದಿದೆ. ಆದರೆ ಚೀನಾ ಜಾಗತಿಕವಾಗಿ ಚಿನ್ನದ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿದ್ದು ವಿಶ್ವದ ಪ್ರಮುಖ ಚಿನ್ನದ ಉತ್ಪಾದಕನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಸರಿಸುಮಾರು 375 ಟನ್‌ಗಳ ಉತ್ಪಾದನೆಯೊಂದಿಗೆ, ಚೀನಾವು 2022 ರಲ್ಲಿ ಜಾಗತಿಕ ಚಿನ್ನದ ಉತ್ಪಾದನೆಯಲ್ಲಿ 10% ನಷ್ಟು ಭಾಗ ತನ್ನ ಕೊಡುಗೆ ನೀಡುತ್ತಿದ್ದು, ಇದು ತನ್ನ ವ್ಯಾಪಕವಾದ ಗಣಿಗಾರಿಕೆ ಕಾರ್ಯಾಚರಣೆಗಳಿಂದ ಚಿನ್ನದ ಅದಿರು ಹೊರತೆಗೆಯುತ್ತಿದೆ.

ಪಾಕಿಸ್ತಾನದಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆ

ಪಾಕಿಸ್ತಾನದಲ್ಲಿ ಇತ್ತೀಚೆಗೆ 2.8 ಮಿಲಿಯನ್ ಟೋಲಾಸ್ ಚಿನ್ನವನ್ನುನಿಕ್ಶೇಪ ಇರುವುದು ಪತ್ತೆಹಚ್ಚಲಾಗಿದೆ, ಇದರ ಮೌಲ್ಯ 800 ಶತಕೋಟಿ ಪಾಕಿಸ್ತಾನಿ ರೂಪಾಯಿಗಳು. ಪಂಜಾಬ್‌ನ ಮಾಜಿ ಗಣಿಗಾರಿಕೆ ಸಚಿವ ಇಬ್ರಾಹಿಂ ಹಸನ್ ಮುರಾದ್ ಘೋಷಿಸಿದಂತೆ ಅಟಾಕ್‌ನಲ್ಲಿ 32 ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾಗಿವೆ. ಹೆಚ್ಚಿನ ಹಣದುಬ್ಬರ ಮತ್ತು ಆರ್ಥಿಕ ಅಸ್ಥಿರತೆ ಸೇರಿದಂತೆ ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಈ ಆವಿಷ್ಕಾರವು ಪ್ರಮುಖವಾಗಿದೆ. ಸಿಂಧೂ ನದಿಯ ಉದ್ದಕ್ಕೂ ಕಂಡುಬರುವ ಚಿನ್ನವು ಹಿಮಾಲಯದಂತಹ ಉತ್ತರದ ಪರ್ವತಗಳಿಂದ ಹುಟ್ಟಿಕೊಂಡಿರಬಹುದು ಎಂದು ತಜ್ಞರು ನಂಬುತ್ತಾರೆ. ಲಕ್ಷಾಂತರ ವರ್ಷಗಳಲ್ಲಿ, ನೈಸರ್ಗಿಕ ಶಕ್ತಿಗಳು ಚಿನ್ನದ ಕಣಗಳನ್ನು ಕೆಳಕ್ಕೆ ಹರಿಯುವಂತೆ ಮಾಡಿತು, ನದಿಯ ದಡದಲ್ಲಿ ನಿಕ್ಷೇಪಗಳನ್ನು ರೂಪಿಸಿರಬಹುದು ಎಂಬುವುದು ತಜ್ಞರ ಅಂಬೋಣವಾಗಿದೆ

"ಪಂಜಾಬ್‌ನ ಮಾಜಿ ಗಣಿಗಾರಿಕೆ ಸಚಿವ ಇಬ್ರಾಹಿಂ ಹಸನ್ ಮುರಾದ್ ಅವರು ಭೂವೈಜ್ಞಾನಿಕ ತನಿಖೆಯ ನಂತರ ಬಂಗಾರದ ನಿಕ್ಷೇಪ ಇರುವುದನ್ನು ಖಚಿತಪಡಿಸಿದ್ದು, ಪಾಕಿಸ್ತಾನ ಸರ್ಕಾರವು ಈಗ ಚಿನ್ನವನ್ನು ಹೊರತೆಗೆಯಲು ಮತ್ತು ಹರಾಜು ಮಾಡಲು ನಿಯಮಗಳನ್ನು ರೂಪಿಸುತ್ತಿದ್ದು, ಈ ಪ್ರಕ್ರಿಯೆಯು ಒಂದು ತಿಂಗಳೊಳಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

800 ಬಿಲಿಯನ್ ಪಿಕೆಆರ್ ಮೌಲ್ಯದ 2.8 ಮಿಲಿಯನ್ ಟೋಲಾಸ್ ಚಿನ್ನವು ಅಟಾಕ್‌ನಲ್ಲಿ 32 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದ್ದು ಇದು ಪಂಜಾಬ್‌ನ ನೈಸರ್ಗಿಕ ಸಂಪನ್ಮೂಲಗಳ ಅಪಾರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ: ವಿಸ್ತೃತ ಸಂಶೋಧನೆಯ ಮೂಲಕ ಇದನ್ನು ದೃಢೀಕರಿಸಲಾಗಿದೆ" ಎಂದು ಎಕ್ಸ್‌ನಲ್ಲಿ ಮಾಜಿ ಸಚಿವರ ಹೇಳಿಕೆ ತಿಳಿಸಿದೆ. ಆರ್ಥಿಕ ಮಂದಗತಿಯ ಮೂಲಕ ಸಾಗುತ್ತಿರುವ ಪಾಕಿಸ್ತಾನಕ್ಕೆ ಚಿನ್ನದ ನಿಕ್ಷೇಪಗಳು ಪತ್ತೆಯೂ ಗೇಮ್ ಚೇಂಜರ್ ಆಗಿದ್ದು 800 ಶತಕೋಟಿ PKR ಮೌಲ್ಯದ ಮೀಸಲು ಚಿನ್ನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಕಾರಣವಾಗಬುದು ಎಂದು ಅಂದಾಜಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+