ದೇಶದ ಏಕೈಕ ಆದಿವಾಸಿ 'ರಾಜ' ಕೇರಳದ 'ರಾಮನ್ ರಾಜಮನ್ನನ್ : ಗಣರಾಜ್ಯೋತ್ಸಕ್ಕೆ ವಿಶೇಷ ಆಹ್ವಾನವೇಕೆ?

ಕೇರಳದ ಏಕೈಕ ಬುಡಕಟ್ಟು ರಾಜ ರಾಮನ್ ರಾಜಮನ್ನನ್ ಹಾಗೂ ಮನ್ನನ್ ಸಮುದಾಯದ ರಾಜ ದೆಹಲಿಯ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯಿಂದ ರಾಜ ಮತ್ತು ಅವರ ಪತ್ನಿಯನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಬುಡಕಟ್ಟು ರಾಜರೊಬ್ಬರು ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವುದು ಇದೇ ಮೊದಲು. ರಾಜಮನ್ನನ್ ಮತ್ತು ಅವರ ಪತ್ನಿ ಬಿನುಮೋಳ್ ಅವರ ಪ್ರಯಾಣ ವೆಚ್ಚವನ್ನು ಎಸ್‌ಸಿ ಅಭಿವೃದ್ಧಿ ಇಲಾಖೆ ಭರಿಸಲಿದೆ.

ದೇಶದ ಏಕೈಕ ಆದಿವಾಸಿ 'ರಾಜ' ರಾಮನ್ ರಾಜಮನ್ನನ್

ಹಾಗಿದ್ರೆ ಈ ರಾಜ ಯಾರು?

ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ ಬಳಿಯ ಕಂಚಿಯಾರ್ ಗ್ರಾಮಪಂಚಾಯತ್‌ನ ಕೋವಿಲ್ಮಲ, ಸ್ಥಳೀಯವಾಗಿ ಕೊಝಿಮಲ ಎಂದು ಕರೆಯಲ್ಪಡುವ ಈ ಸಣ್ಣ ಗ್ರಾಮವು ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಬುಡಕಟ್ಟು ಸಾಮ್ರಾಜ್ಯವಾಗಿದೆ. ಮನ್ನನ್ ಸಮುದಾಯವು ದಕ್ಷಿಣ ಭಾರತದಲ್ಲಿ ಪ್ರಸ್ತುತ ರಾಜತ್ವವನ್ನು ಹೊಂದಿರುವ ಏಕೈಕ ಆದಿವಾಸಿ ಬುಡಕಟ್ಟು ರಾಜವಂಶವಾಗಿದೆ. ಕುಮಿಲಿ ಪಂಚಾಯತ್‌ನ ಮನ್ನನಕುಡ್ಡಿಯಲ್ಲಿಯೂ ಮನ್ನನ್‌ಗಳು ಕಂಡುಬರುತ್ತಾರೆ.

ಮನ್ನನ್ ಸಮುದಾಯದ ರಾಜನ ಅಧಿಕೃತ ಸಂಕೇತಗಳಲ್ಲಿ ಶಂಖ ಅಳವಡಿಸಿದ ಮತ್ತು ಮುತ್ತುಗಳಿಂದ ಅಲಂಕರಿಸಿದ ಪೇಟ ಕೈಯಲ್ಲಿ ಧರಿಸುವ ಒಣಹುಲ್ಲಿನ ಕಡಗಗಳು, ಅಧಿಕಾರದ ಸಂಕೇತವಾಗಿರುವ ಅಧಿಕಾರದ ರಾಜ ದಂಡ, ಭುಜದ ಮೇಲೆ ಧರಿಸುವ ತೋಳಿನ ಪಟ್ಟಿ ಮುಂತಾದವು ಸೇರಿವೆ. ಭಾರತದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಎರಡು ಬುಡಕಟ್ಟು ರಾಜವಂಶಗಳಲ್ಲಿ ಮನ್ನನ್ ಬುಡಕಟ್ಟು ಸಮುದಾಯವೂ ಒಂದು. ಕೋವಿಲ್ಮಲದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ತಮ್ಮ ಜನರ ಮೇಲೆ ಆಳ್ವಿಕೆ ನಡೆಸುತ್ತಿರುವ ರಾಮನ್ ರಾಜಮನ್ನನ್ ಈ ಸಮುದಾಯದ ಪ್ರಸ್ತುತ ರಾಜರಾಗಿದ್ದಾರೆ.

ರಾಮನ್ ರಾಜಮನ್ನನ್ ಅವರು ಮನ್ನನ್ ಸಮುದಾಯದ ಹದಿನೇಳನೇ ರಾಜ. ಹದಿನಾಲ್ಕನೆಯ ರಾಜ ನಯನ ರಾಜಮನ್ನನ ಕಾಲದಿಂದಲೇ ಈ ಬುಡಕಟ್ಟಿನ ಬಗ್ಗೆ ಜಗಜ್ಜಾಹೀರವಾಯಿತು. ಅವರು ಒಂದು ದಶಕದ ಕಾಲ ರಾಜ ಆಳಿವ್ಕೆ ನಡೆಸಿದ್ದು ಹೊರಗಿನ ಪ್ರಪಂಚದೊಂದಿಗೆ ಅತ್ಯುತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದರು. ಅವರ ಮುತುವರ್ಜಿಯಿಂದಲೇ ಕಂಚಿಯಾರ್‌ನಲ್ಲಿ ಸ್ಥಾಪಿಸಲಾದ ಏಕ ಶಿಕ್ಷಕರ ಶಾಲೆ ಇಂದು ಬುಡಕಟ್ಟು ಶಾಲೆಯಾಗಿದೆ. ಅವರ ಪ್ರಯತ್ನದಿಂದಾಗಿಯೇ ಮನ್ನಾನ್ ಸಮುದಾಯ ಈಗ ಶಿಕ್ಷಣ ಪಡೆದುಕೊಂಡಿದೆ. ಈಗಿನ ಮಹಾರಾಜ ಮನ್ನನ್ ಸಮುದಾಯದಲ್ಲಿ ಒಬ್ಬ ಪ್ರಥಮ ಶಿಕ್ಷಿತ ನಾಯಕರಾಗಿದ್ದು, ಇವರು ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇವರ ಆಡಳಿತಕ್ಕೆ ಸುಮಾರು 48 ಕ್ಕೂ ಹೆಚ್ಚು ಬುಡಕಟ್ಟುಶಾಖೆಗಳನ್ನು ಹೊಂದಿದೆ.

ರಾಜಮನ್ನನ್ 2012 ರಲ್ಲಿ ಅರಿಯನ್ ರಾಜಾ ಮನ್ನನ್ ನಂತರ ಬುಡಕಟ್ಟಿನ ರಾಜನಾದರು. ಮಾರ್ಚ್ 1995 ರಲ್ಲಿ ನಯನ್ ರಾಜಮನ್ನನ್ ಅವರ ಮರಣದ ನಂತರ, ತೇವನ್ ರಾಜಮನ್ನನ್ ರಾಜರಾದರು. ಅವರ ಮರಣದ ನಂತರ, ಕೇವಲ 26 ವರ್ಷ ವಯಸ್ಸಿನ ಆರ್ಯನ್ ರಾಜಮನ್ನನ್ ಅವರು ರಾಜರಾಗಿ ಅಧಿಕಾರ ವಹಿಸಿಕೊಂಡರು. 2011 ರಲ್ಲಿ ಆರ್ಯನ್ ರಾಜಮನ್ನನ್ ನಿಧನರಾದ ನಂತರ, ರಮಣ್ ರಾಜಮನ್ನನ್ 2012 ರಲ್ಲಿ ಪಟ್ಟಾಭಿಷೇಕ ಮಾಡಲಾಯಿತು.

ಕೇರಳದ ಮನ್ನನ್ ಬುಡಕಟ್ಟಿನ 39 ವರ್ಷದ ರಾಜ ರಾಮನ್ ರಾಜಮನ್ನನ್ ಅವರು ಸರಳ ಜೀವನ ನಡೆಸುವ ಒಬ್ಬ ಕೃಷಿಕರಾಗಿದ್ದಾರೆ. ಅವರು ತಮ್ಮ ಬುಡಕಟ್ಟಿನ ಸಂಸ್ಕೃತಿಯನ್ನು ಬಹಳ ಹೆಮ್ಮೆಯಿಂದ ಪಾಲಿಸುತ್ತಾರೆ. ತಾಳಪ್ಪವು ಎಂಬ ಸಾಂಪ್ರದಾಯಿಕ ಕಿರೀಟವನ್ನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಧರಿಸುತ್ತಾರೆ.

ಈಗಾಗಲೇ ಈ ರಾಜ ಮತ್ತು ಪತ್ನಿ ಬಿನುಮೋಳ್ ಈಗ ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ತೆರಳಿದ್ದು, ಆ ಬಳಿಕ ಆಗ್ರಾ ಮತ್ತು ರಾಷ್ಟ್ರದ ರಾಜಧಾನಿಯ ಇತರ ಮಹತ್ವದ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಲಿದ್ದು ಫೆಬ್ರವರಿ 2 ರಂದು ಕೇರಳಕ್ಕೆ ಹಿಂದಿರುಗುವ ಮೊದಲು, ಅವರು ರಾಷ್ಟ್ರಪತಿ ದ್ರೌಪದಿ ಮುರ್ಮುಮತ್ತು ಇತರ ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+