ಸೀಮಿತ ಪೂರೈಕೆ ಮತ್ತು ಏಷ್ಯನ್, ಆಫ್ರಿಕನ್ ಖರೀದಿದಾರರಿಂದ ಬೇಡಿಕೆ ಅಧಿಕವಾದ ಕಾರಣದಿಂದಾಗಿ ಭಾರತದ ಅಕ್ಕಿ ರಫ್ತು ದರಗಳು ಈ ವಾರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಪಾರ್ಬಾಯಿಲ್ಡ್ ಅಕ್ಕಿ ಪ್ರತಿ ಟನ್‌ಗೆ ಶೇಕಡ 5 ರಷ್ಟು ಹೆಚ್ಚಾಗಿ $533-$542 ಗೆ ತಲುಪಿದೆ.
ಕಳೆದ ವಾರದಲ್ಲಿ ಪಾರ್ಬಾಯಿಲ್ಡ್ ಅಕ್ಕಿ $525- $535 ಆಗಿತ್ತು. ಸರ್ಕಾರದ ಭತ್ತ ಖರೀದಿ ಮತ್ತು ನಡೆಯುತ್ತಿರುವ ಅಕ್ಕಿ ಗಿರಣಿ ಲಭ್ಯತೆ ಕಡಿಮೆಯಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿದ ಓಲಂ ಅಗ್ರಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ನಿತಿನ್ ಗುಪ್ತಾ, "ಸರಕಾರದ ಭತ್ತ ಖರೀದಿಯು ಖಾಸಗಿಯವರಿಗೆ ಸ್ವಲ್ಪಮಟ್ಟಿಗೆ ಬಿಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸರಬರಾಜು ಸೀಮಿತವಾಗಿದೆ," ಎಂದು ಹೇಳಿದ್ದಾರೆ.

ಭಾರತದ ಅಕ್ಕಿ ಉತ್ಪಾದನೆಯು ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಈ ಆರ್ಥಿಕ ವರ್ಷದಲ್ಲಿ ಕುಸಿಯುವ ನಿರೀಕ್ಷೆಯಿದೆ. ಚುನಾವಣೆಯ ಮೊದಲು ಆಹಾರ ಬೆಲೆಗಳನ್ನು ನಿಯಂತ್ರಿಸಲು ಸಂಭಾವ್ಯ ರಫ್ತು ನಿರ್ಬಂಧಗಳ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ವಿಯೆಟ್ನಾಂನ 5 ಪ್ರತಿಶತ ಮುರಿದ ಅಕ್ಕಿಯನ್ನು ಪ್ರತಿ ಮೆಟ್ರಿಕ್ ಟನ್‌ಗೆ $ 630 ಕ್ಕೆ ನೀಡಲಾಯಿತು. ಹಿಂದಿನ ವಾರ $ 653 ರಷ್ಟಿದ್ದು, ಅದಕ್ಕಿಂತ ಕಡಿಮೆ ಇದಾಗಿದೆ. ಮೆಕಾಂಗ್ ಡೆಲ್ಟಾದಲ್ಲಿ ಮುಂಬರುವ ಚಳಿಗಾಲದ ಕಾರಣ ವ್ಯಾಪಾರಿಗಳು ಬಲವಾದ ಸರಬರಾಜುಗಳನ್ನು ನಿರೀಕ್ಷಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಬ್ಯಾಂಕಾಕ್ ಮೂಲದ ವ್ಯಾಪಾರಿಯ ಪ್ರಕಾರ, ಥೈಲ್ಯಾಂಡ್ 5 ಪ್ರತಿಶತ ಬ್ರೀಕನ್ ರೈಸ್ ಬೆಲೆಯಲ್ಲಿ ಸ್ವಲ್ಪ ಕುಸಿತವಾಗಿದೆ. ಬಹ್ತ್ ಮೌಲ್ಯ ದುರ್ಬಲಗೊಳ್ಳುತ್ತಿರುವ ಕಾರಣ ಪ್ರತಿ ಟನ್‌ಗೆ $663-$665 ಆಗಿದೆ. ಆದರೆ ದೇಶೀಯ ಚಟುವಟಿಕೆ ಮತ್ತು ಇಂಡೋನೇಷ್ಯಾದಿಂದ 0.5 ಮಿಲಿಯನ್ ಟನ್‌ಗಳಿಗೆ ಹೊಸ ಆರ್ಡರ್ ಬೆಂಬಲ ಬೆಲೆಯನ್ನು ಹೊಂದಿದೆ ಎಂದು ಬ್ಯಾಂಕಾಕ್ ಮೂಲದ ವ್ಯಾಪಾರಿ ತಿಳಿಸಿದ್ದಾರೆ.
ಈ ನಡುವೆ ಉತ್ತಮ ಇಳುವರಿ ಮತ್ತು ದಾಖಲೆಯ ಮೀಸಲುಗಳ ಹೊರತಾಗಿಯೂ ಬಾಂಗ್ಲಾದೇಶದಲ್ಲಿ ಅಕ್ಕಿ ಬೆಲೆಗಳು ಹೆಚ್ಚಾಗಿ ಉಳಿದಿದೆ. ಇದಾದ ಬಳಿಕ ಅಕ್ಕಿ ಸಂಗ್ರಹಕಾರರ ವಿರುದ್ಧ ಪ್ರಧಾನಿ ಶೇಖ್ ಹಸೀನಾ ಆದೇಶವನ್ನು ನೀಡಿದರು. ಇನ್ನು ಕರ್ನಾಟಕದಲ್ಲಿಯೂ ಅಕ್ಕಿ ಶೇಖರಣೆ ಅಧಿಕವಾಗಿದ್ದು, ಇದರಿಂದಾಗಿ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಬೆಲೆ ಏರಿಕೆ?
ಕರ್ನಾಟಕದ ಅಧಿಕವಾಗಿ ಭತ್ತವನ್ನು ಬೆಳೆಯುವ ಪ್ರದೇಶ ಎಂದು ಪರಿಗಣಿಸಲಾದ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭತ್ತದ ಉತ್ಪಾದನೆಯಲ್ಲಿ ಶೇಕಡ 15 ರಷ್ಟು ಹೆಚ್ಚಳ ಕಂಡು ಬಂದಿದೆ. ಆದರೂ ಭತ್ತದ ಬೆಲೆ ಮಾತ್ರ ಕರ್ನಾಟಕದಲ್ಲಿ ಶೇಕಡ 25 ರಷ್ಟು ಏರಿಕೆಯಾಗಿದೆ.
ಈ ಭತ್ತದ ಬೆಲೆ ಏರಿಕೆಯಿಂದಾಗಿ ಅಕ್ಕಿ ಬೆಲೆಯು ಕೂಡಾ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಈಗಾಗಲೇ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಪ್ರತಿ ನಿತ್ಯ ಒಂದು ಪ್ಲೇಟ್ ಊಟದ ಬೆಲೆಯೂ ಗಗನಕೇರುತ್ತಿದೆ.


Click it and Unblock the Notifications