20ನೇ ಶತಮಾನವು ಯುರೋಪ್‌ನ ಯುಗವೆಂದು ಪರಿಗಣಿಸಲ್ಪಟ್ಟಿದ್ದರೆ 21ನೇ ಶತಮಾನವು ಏಶ್ಯಾ, ಅದರಲ್ಲೂ ಭಾರತದ ಸಮಯವೆಂದು ಗುರುತಿಸಲಾಗುತ್ತದೆ. ಅದರಲ್ಲೂ ಒಂದು ಕಾಲದಲ್ಲಿ ಜನಸಂಖ್ಯೆಯನ್ನು ಋಣಾತ್ಮಕವಾಗಿ ಬಿಂಬಿಸುವ ಸಮಯ ಕೂಡ ಇತ್ತು. ಆದರೆ ಈಗ ಹಾಗಿಲ್ಲ. ಒಂದು ದೇಶವು ತನ್ನ ಜನಸಂಖ್ಯೆಯನ್ನು ಸರಿಯಾದ ರೀತಿ ನೀತಿಗಳ ಮೂಲಕ ಮುನ್ನಡೆಸಿದರೆ ನಾಗರಿಕರನ್ನು ದೇಶದ ಬಹುದೊಡ್ಡ ಆಸ್ತಿಗಳನ್ನಾಗಿ ಮಾಡಬಹುದು ಎಂಬುದು ಇದೀಗ ಸಾಬೀತಾಗುತ್ತಿದೆ. ಇನ್ನು ಭಾರತದಲ್ಲಿ ಇತ್ತೀಚಿಗಿನ ವರ್ಷದವರೆಗೂ ಜನಸಂಖ್ಯೆಯ ತೀವ್ರ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಲಾಗುತ್ತಿದ್ದು, ಇನ್ನೂ ಮುಂದುವರೆದಿದೆ.
ಆದರೆ ಇತ್ತೀಚಿಗಿನ ದಿನಗಳಲ್ಲಿ ಜನಸಂಖ್ಯೆ ದರವು ಕೊಂಚ ಕಡಿಮೆಯಾಗಿದ್ದು, ಅಲ್ಲದೆ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು,ಜೊತೆಗೆ ಕೌಶಲದ ವಿಚಾರದಲ್ಲೂ ಮುಂದುವರೆಯುತ್ತಿರುವುದು ಉತ್ತಮ ಸಂಗತಿ. ಅದರಲ್ಲೂ ಭಾರತದಲ್ಲಿ ಸದ್ಯ ಶ್ರೀಮಂತರ ಸಂಖ್ಯೆಯಲ್ಲೂ ವೃದ್ದಿಯಾಗುತ್ತಿದ್ದು, ದೇಶ ಮುಂದುವರೆಯುತ್ತಿರುವುದಕ್ಕೆ ಉದಾಹರಣೆ ಎಂಬಂತಿದೆ. ಆದರೆ ದೇಶದಲ್ಲಿ ಬಡತನ ನಿರ್ಮೂಲನೆಯಾಯಿತು ಎಂದಲ್ಲ. ಭಾರತದಲ್ಲಿ ಬಡತನ ಇನ್ನೂ ಜೀವಂತವಾಗಿದ್ದರೂ ನಿಧಾನವಾಗಿ ಮಧ್ಯಮ ವರ್ಗದ ಜನತೆ ಶ್ರೀಮಂತರಾಗುತ್ತಿದ್ದಾರೆ.

ಇನ್ನು ಇತ್ತೀಚಿಗಿನ ದಾಖಲೆ ಪ್ರಕಾರ ದೇಶದಲ್ಲ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಸದ್ಯ ಅಮೆರಿಕಾ, ಚೀನಾ ಬಳಿಕ ಮೂರನೇ ಸ್ಥಾನದಲ್ಲಿದೆ. ಇನ್ನು ಪ್ರತೀ ವರ್ಷದಂತೆ ಈ ವರ್ಷವೂ ಫೋರ್ಬ್ಸ್ ಭಾರತದ ಅಗ್ರ ಹತ್ತು ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಮುಖೇಶ್ ಅಂಬಾನಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಸದ್ಯ ಈ ಟಾಪ್ ಟೆನ್‌ಗಳ ಪಟ್ಟಿಯನ್ನೊಮ್ಮೆ ನೋಡೋಣ.
1. ಮುಖೇಶ್ ಅಂಬಾನಿ
ಧೀರೂಬಾಯಿ ಅಂಬಾನಿ ಹಾಕಿಕೊಟ್ಟ ಮಾರ್ಗದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೇರ್ಮನ್ ಮುಖೇಶ್ ಅಂಬಾನಿ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ 119.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಪೆಟ್ರೋಲಿಯಂ, ಅನಿಲ, ರಿಟೈಲ್, ಟೆಲಿಕಾಂ ಹೀಗೆ ಮುಖೇಶ್ ಅಂಬಾನಿಯವರ ಕಂಪೆನಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಜೊತೆಗೆ ಲೆಕ್ಕವಿಲ್ಲದಷ್ಟು ಸ್ಟಾರ್ಟಪ್‌ಗಳಲ್ಲಿ ಸಂಸ್ಥೆ ಹೂಡಿಕೆ ಕೂಡ ಮಾಡಿಕೊಂಡಿದೆ. ಮುಖೇಶ್ ಅವರ ಮೂವರು ಮಕ್ಕಳಾದ ಆಕಾಶ್, ಅನಂತ್ ಮತ್ತು ಇಶಾ ಅವರು ಕಂಪೆನಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
2. ಗೌತಮ್ ಅದಾನಿ
61ರ ಹರೆಯದ ಗೌತಮ್ ಅದಾನಿ ಅವರು 116 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅದಾನಿ ಗ್ರೂಪ್‌ನ ಮುಖ್ಯಸ್ಥರಾಗಿರುವ ಗೌತಮ್ ಅವರು ಭಾರತದ ಬಂದರು ಕಾರ್ಯಾಚರಣೆಗಳು ಮತ್ತು ಅಭಿವೃದ್ಧಿ ವಲಯದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೇವಲ ಭಾರತವಲ್ಲದೆ ವಿದೇಶಿ ರಾಷ್ಟ್ರಗಳ ಬಂದರುಗಳ ಮೇಲೆ ಕೂಡ ಅದಾನಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಅದೂ ಅಲ್ಲದೆ ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ, ನವೀಕರಿಸಬಹುದಾದ ಶಕ್ತಿ ಮುಂತಾದ ಕ್ಷೇತ್ರಗಳಲ್ಲೂ ಅದಾನಿ ಹೂಡಿಕೆ ಮಾಡುತ್ತಿದ್ದು, ಜಗತ್ತಿನ ಗಮನ ಸೆಳೆದಿದೆ. ಇತ್ತೀಚಿಗೆ ಹಿಂಡನ್ ಬರ್ಗ್ ವರದಿಯಿಂದ ಅದಾನಿ ಅವರ ಷೇರುಗಳಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿತ್ತಲ್ಲದೆ ಅವರ ಸಂಪತ್ತು ಕೂಡ ಕಡಿಮೆಯಾಗಿತ್ತು.
3. ಸಾವಿತ್ರಿ ಜಿಂದಾಲ್ ಹಾಗೂ ಕುಟುಂಬ
73ರ ಹರೆಯದ ಸಾವಿತ್ರಿ ಜಿಂದಾಲ್ ಅವರು ಒಪಿ ಜಿಂದಾಲ್ ಗ್ರೂಪ್‌ನ ಮುಖ್ಯಸ್ಥರಾಗಿದ್ದು, ಒಟ್ಟು 43.7 ಬಿಲಿಯನ್ ಡಾಲರ್ ಸಂಪತ್ತಿನ ಮಾಲಕರಾಗಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ವರು ಪುತ್ರರಾದ ಪೃಥ್ವಿರಾಜ್, ಸಜ್ಜನ್, ರತನ್ ಮತ್ತು ನವೀನ್ ಜಿಂದಾಲ್ ಅವರು JSW ಸ್ಪೋರ್ಟ್ಸ್ ಸೇರಿದಂತೆ ಕಂಪೆನಿಯ ವಿವಿಧ ಹುದ್ದೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದೂ ಅಲ್ಲದೆ ಜೆಎಸ್‌ಡಬ್ಲ್ಯು ಸಂಸ್ಥೆಯು ಕ್ರೀಡೆಗೆ ಹೆಚ್ಚಿನ ಪ್ರಧಾನ್ಯತೆ ನೀಡುತ್ತಿದ್ದು, ಕ್ರೀಡಾಳುಗಳಿಗೆ ಸ್ಪಾನ್ಸರ್ ನೀಡುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗುತ್ತಿದೆ.
4. ಶಿವ ನಾಡಾರ್
ಭಾರತದ ಪ್ರಮುಖ ಐಟಿ ಕಂಪೆನಿಗಳಲ್ಲಿ ಒಂದಾಗಿರುವ HCL Enterprise ನ ಮುಖ್ಯಸ್ಥರಾಗಿರುವ ಶಿವ ನಡಾರ್ ಅವರು ಒಟ್ಟು 40.2 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನಿಯಾಗಿದ್ದಾರೆ. HCL Enterprise ಸಂಸ್ಥೆಯು ಜಗತ್ತಿನ ಖ್ಯಾತನಾಮ ಕಂಪೆನಿಗಳಾಗಿರುವ ಸಿಸ್ಕೋ, ಮೈಕ್ರೋಸಾಫ್ಟ್ ಮತ್ತು ಬೋಯಿಂಗ್‌ನಂತಹ ಸಂಸ್ಥೆಗಳಿಗೆ ಸೇವೆಗಳನ್ನು ನೀಡುತ್ತಿದೆ. ಇನ್ನು 2008 ರಲ್ಲಿ ಭಾರತ ಸರ್ಕಾರವು ನಾಡಾರ್ ಅವರಿಗೆ ರಾಷ್ಟ್ರದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿತ್ತು.
5. ದಿಲೀಪ್ ಸಾಂಘ್ವಿ
67ರ ಹರೆಯದ ದಿಲೀಪ್ ಸಾಂಘ್ವಿ ಅವರು ಸನ್ ಫಾರ್ಮಾಸ್ಯುಟಿಕಲ್ಸ್ ನ ಮಾಲಕರಾಗಿದ್ದು, ಒಟ್ಟು 32.4 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ದಿಲೀಪ್ ಮಾರ್ಗದರ್ಶನದಲ್ಲೇ ಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯು ಐದು ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದ ಭಾರತದ ಮೊದಲ ಔಷಧ ಕಂಪೆನಿ ಎಂಬ ಹೆಗ್ಗಲಿಕೆಗೆ ಪಾತ್ರವಾಗಿತ್ತು. ಅದೂ ಅಲ್ಲದೆ 2014 ರಲ್ಲಿ $4 ಬಿಲಿಯನ್ ಡಾಲರ್‌ಗೆ Ranbaxy ಲ್ಯಾಬೊರೇಟರೀಸ್ ಸಂಸ್ಥೆಯನ್ನು ಖರೀದಿಸುವ ಮೂಲಕ ಸನ್ ಫಾರ್ಮಾಸ್ಯುಟಿಕಲ್ಸ್ ಎಲ್ಲರ ಗಮನ ಸೆಳೆದಿತ್ತು.
6. ರಾಧಾಕಿಶನ್ ಶಿವಕಿಶನ್ ಧಮಾನಿ
ಭಾರತದ ರಿಟೇಲ್ ಕಿಂಗ್ ಎಂದೇ ಗುರುತಿಸಿಕೊಳ್ಳುವ ರಾಧಾಕಿಶನ್ ಅವರು ಪ್ರಖ್ಯಾತ ಡಿ ಮಾರ್ಟ್ ಕಂಪೆನಿಯ ಮಾಲಕರಾಗಿದ್ದು, ಸಂಸ್ಥೆಯು ಒಟ್ಟು 31.5 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದೆ. ಅವೆನ್ಯೂ ಸೂಪರ್‌ಮಾರ್ಟ್ ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯು ಭಾರತದಾದ್ಯಂತ ಸುಮಾರು 336ಕ್ಕೂ ಹೆಚ್ಚಿನ ಮಳಿಗೆಗಳನ್ನು ಹೊಂದಿದ್ದು, ಮತ್ತಷ್ಟು ವಿಸ್ತರಣೆಯಾಗುತ್ತಿದೆ.
7. ಸುನಿಲ್ ಮಿತ್ತಲ್
ಭಾರತದಲ್ಲಿ ರಿಲಾಯನ್ಸ್ ಜಿಯೋ ಬರುವುದಕ್ಕೂ ಮುನ್ನ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಏರ್‌ಟೆಲ್ ಸಂಸ್ಥೆಯ ಮುಖ್ಯಸ್ಥರಾಗಿರುವ ಸುನಿಲ್ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ ಕಂಪೆನಿಯು 30.7 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ. ಸದ್ಯ ಏರ್‌ಟೆಲ್ 5ಜಿ ಕ್ಷೇತ್ರದಲ್ಲೂ ಹೂಡಿಕೆ ಮಾಡುತ್ತಿದ್ದು, ಇತ್ತೀಚಿಗೆ ನೋಕಿಯಾ ಜೊತೆ ಉಪಕರಣಗಳ ಪೂರೈಕೆ ವಿಚಾರದಲ್ಲಿ ಒಪ್ಪಂದ ಮಾಡಿಕೊಂಡಿತ್ತು.
8. ಕುಮಾರ್ ಬಿರ್ಲಾ
ಆದಿತ್ಯಾ ಬಿರ್ಲಾ ಗ್ರೂಪ್‌ನ ಮುಖ್ಯಸ್ಥರಾಗಿರುವ ಕುಮಾರ್ ಬಿರ್ಲಾ ಅವರು 24.8 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಸದ್ಯ ಆದಿತ್ಯಾ ಬಿರ್ಲಾ ಸಂಸ್ಥೆಯು ಸುಮಾರು 40 ರಾಷ್ಟ್ರಗಳಲ್ಲಿ ಅಸ್ತಿತ್ವ ಹೊಂದಿದ್ದು, 50 ಪ್ರತಿಶತ ಆದಾಯವನ್ನು ವಿದೇಶಗಳಿಂದ ಪಡೆಯುತ್ತಿದೆ.
9. ಸೈರಸ್ ಪೂನಾವಾಲಾ
ಭಾರತವು ವಿಶ್ವದ ವ್ಯಾಕ್ಸಿನ್ ರಾಜಧಾನಿ ಎಂದು ಗುರುತಿಸಲ್ಪಟ್ಟಿದ್ದು, ಹಲವು ಕಂಪೆನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಕೂಡ ಒಂದಾಗಿದೆ. ಕೋವಿಡ್ ಸಮಯದಲ್ಲಿ ಜಗತ್ತಿಗೆ ವ್ಯಾಕ್ಸಿನ್ ಪೂರೈಸಿದ ಭಾರತದ ಪ್ರಮುಖ ಕಂಪೆನಿಗಳಲ್ಲಿ ಸೀರಮ್ ಕೂಡ ಒಂದಾಗಿದೆ. ಸೈರಸ್ ಪೂನಾವಾಲಾ ಅವರ ನೇತೃತ್ವದಲ್ಲಿ ಕಂಪೆನಿ ಈಗಾಗಲೇ ಹಲವು ಸಾಧನೆಯ ಮಜಲುಗಳನ್ನು ಏರಿದ್ದು, ಇನ್ನೂ ಏರುತ್ತಲೇ ಇದೆ. ಸೀರಮ್ ಸಂಸ್ಥೆಯು 25 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದೆ. ಕಂಪನಿಯು ಪುಣೆಯಲ್ಲಿ ವಾರ್ಷಿಕವಾಗಿ 1.5 ಶತಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಮೂಲಕ ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾಗಿ ಬೆಳೆದಿದೆ. ಸದ್ಯ ಕಂಪೆನಿಯನ್ನು ಸೈರಸ್ ಅವರ ಪುತ್ರ ಆದಾರ್ ಪೂನಾವಾಲಾ ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
10. ಬಜಾಜ್ ಕುಟುಂಬ
ಆಟೋ ಮೊಬೈಲ್, ಫೈನಾನ್ಸ್ ಸರ್ವಿಸ್, ಗೃಹಪಯೋಗಿ ಉಪಕರಣಗಳು ಸೇರಿದಂತೆ 40 ವಿವಿಧ ರೀತಿಯ ವಲಯಗಳಲ್ಲಿ ಗುರುತಿಸಿಕೊಂಡಿರುವ ಬಜಾಜ್ ಸಂಸ್ಥೆಯು ಸುಮಾರು 23.4 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದೆ. ಸಂಸ್ಥೆಯು ವಿಶ್ವದ ನಾಲ್ಕನೇ ಅತೀ ದೊಡ್ಡ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತಯಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
More From GoodReturns

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications