ಬೆಂಗಳೂರು, ಮಾರ್ಚ್ 13: ಭಾರತದ ಆರ್ಥಿಕ ನೀತಿ ನಿರೂಪಣೆಗಳು ಪ್ರಪಂಚದ ಪ್ರತಿಯೊಂದು ದೇಶಕ್ಕೂ ಸ್ನೇಹಮಯಿ ಆಗುತ್ತಿವೆ. ಈ ಕಾರಣಕ್ಕೆ ಇಡೀ ಜಗತ್ತು ಈಗ ಭಾರತದ ಜೊತೆಗೆ, ವ್ಯಾಪಾರ & ವಹಿವಾಟು ನಡೆಸಲು ಮುಗಿ ಬೀಳುತ್ತಿದೆ. ಅದರಲ್ಲೂ ಇಷ್ಟು ದಿನ ಅಮೆರಿಕನ್ ಡಾಲರ್ ಬೇಕು ನಮಗೆ ಎಂದು ಕೇಳುತ್ತಿದ್ದ ದೇಶಗಳು, ಈಗ ಭಾರತದ ರೂಪಾಯಿ ಲೆಕ್ಕದಲ್ಲೇ ವ್ಯಾಪಾರ ನಡೆಸಲು ಮುಂದಾಗುತ್ತಿವೆ. ಆ ಮೂಲಕ ಭಾರತದ ರೂಪಾಯಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗುತ್ತಿದೆ.
ಈ ಬೆಳವಣಿಗೆ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಈಗ ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾ, ಗಲ್ಫ್ ದೇಶಗಳು ರಫ್ತು, ಆಮದು ವಹಿವಾಟು ನಡೆಸಲು ಭಾರತದ ರೂಪಾಯಿಗೆ ಮೌಲ್ಯ ನೀಡಲು ಮುಂದಾಗಿವೆ ಅಂತ ಹೇಳಿದ್ದಾರೆ. ಮುಂದೆ ಇದು ಭಾರತದ ರೂಪಾಯಿಗೆ ಬಲ ನೀಡುವ ಮೂಲಕ ನಮ್ಮ ದೇಶವು ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಡಿಕೊಳ್ಳಲಿದೆ. ಹೀಗಾಗಿ ಈ ಬೆಳವಣಿಗೆ ಸಾಕಷ್ಟು ಗಮನವನ್ನು ಸೆಳೆಯುತ್ತಿದೆ. ಇನ್ನು ಕೇಂದ್ರ ಸಚಿವರಾದ ಪೀಯೂಷ್ ಗೋಯಲ್ ಅವರು ಈ ವಿಚಾರವಾಗಿ ಮತ್ತಷ್ಟು ಮಾಹಿತಿಯನ್ನು ನೀಡಿದ್ದಾರೆ.

ಶ್ರೀಘ್ರದಲ್ಲೇ ಭಾರತಕ್ಕೆ ಸಿಹಿಸುದ್ದಿ:
ಬಾಂಗ್ಲಾದೇಶ & ಶ್ರೀಲಂಕಾ ಮಾತ್ರವಲ್ಲ, ಈಗಾಗಲೇ ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳು & ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕೂಡ ಈ ವಿಚಾರದಲ್ಲಿ ಈಗ ಭಾರತಕ್ಕೆ ಸಹಾಯಕವಾಗುವ ರೀತಿಯೇ ನಡೆ ಮುಂದಿಟ್ಟಿದ್ದಾರೆ. ಹೀಗೆ ದ್ವಿಪಕ್ಷೀಯ ವ್ಯಾಪಾರ ನಡೆಸಲು ಭಾರತದ ರೂಪಾಯಿ ಬಳಸಿದರೆ ಅದರಿಂದ ನಿರ್ವಹಣಾ ವೆಚ್ಚ ತಗ್ಗಲಿದೆ ಎಂಬುದು ಕೇಂದ್ರ ಸಚಿವರ ವಿವರಣೆ.
ಮತ್ತೊಂದು ಕಡೆ ಈ ಸಂಬಂಧ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಭಾರತದ ಜೊತೆಗೆ ಮಾತುಕತೆ ನಡೆಸಿವೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಆರಂಭ ಆಗಲಿದೆ. ಜೊತೆಗೆ ಗಲ್ಫ್ ದೇಶಗಳು ಕೂಡ ಇದೇ ಹಾದಿ ಎದುರು ನೋಡುತ್ತಿವೆ ಎಂದಿದ್ದಾರೆ ಕೇಂದ್ರ ಸಚಿವರಾದ ಪೀಯೂಷ್ ಗೋಯಲ್. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಇನ್ನುಮುಂದೆ ಆಮದು & ರಫ್ತು ವ್ಯವಹಾರ ಸುಲಭವಾಗಲಿದೆ.
ಬಲಿಷ್ಠ ಭಾರತದ ಲಕ್ಷಣ ಇದು?
ಈಗಿನ ಬೆಳವಣಿಗೆ ನೋಡುತ್ತಿದ್ದರೆ ಭಾರತ ಜಾಗತಿಕವಾಗಿ ಬಲಿಷ್ಠ ಆರ್ಥಿಕತೆಯಾಗಿ ಇದೀಗ ಬೆಳವಣಿಗೆ ಕಾಣುತ್ತಿರುವುದರ ಲಕ್ಷಣ ಎಂದು ಕೂಡ, ಆರ್ಥಿಕ ತಜ್ಞರು ಈಗ ವಿವರಣೆಯನ್ನು ನೀಡುತ್ತಿದ್ದಾರೆ. ಮತ್ತೊಂದು ಕಡೆ ಸ್ಥಳೀಯ ಕರೆನ್ಸಿಗಳಲ್ಲಿ, ದ್ವಿಪಕ್ಷೀಯ ವ್ಯಾಪಾರ ನಡೆಸಿದರೆ ಎರಡೂ ದೇಶಗಳಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಇನ್ನೊಂದು ಕಡೆ ಯುಎಇ ಮೂಲಕವಾಗಿ ಕಚ್ಚಾ ತೈಲ ಆಮದು ಮಾಡಿಳ್ಳುತ್ತಿರುವ ಭಾರತ ಈಗಾಗಲೇ ರೂಪಾಯಿ ಮೂಲಕವೇ ಹಣದ ವಹಿವಾಟು ನಡೆಸುತ್ತಿದೆ.

ಟಾಪ್-5 ಆರ್ಥಿಕತೆ ಭಾರತ
ಈಗಾಗಲೇ ಭಾರತ ದೇಶವು, ಜಾಗತಿಕವಾಗಿ ಟಾಪ್-5 ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಇನ್ನೂ ಕೆಲವೇ ವರ್ಷದಲ್ಲಿ ಭಾರತ ಟಾಪ್-3ಗೆ ತಲುಪುವ ನಿರೀಕ್ಷೆಗಳು ಈಗ ದಟ್ಟವಾಗಿವೆ. ಹೀಗಾಗಿ ದೇಶದ ಬಲಿಷ್ಠ ಆರ್ಥಿಕತೆಗೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನೂ ಕೇಂದ್ರ ಸರ್ಕಾರ ಈಗ ಕೈಗೊಳ್ಳುತ್ತಿದೆ. ಅದರಲ್ಲೂ ಒಂದು ಕಡೆ ಅಮೆರಿಕದ ಆರ್ಥಿಕತೆಯ ಕುಸಿತ ಇನ್ನೊಂದು ಕಡೆ ಜಾಗತಿಕವಾಗಿ ದೊಡ್ಡ ಬದಲಾವಣೆಗೆ ಕಾರಣ ಆಗುತ್ತಿದೆ. ಹೀಗೆಲ್ಲ ಭಾರತ ತನ್ನ ಆರ್ಥಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ.


Click it and Unblock the Notifications