ಬೆಂಗಳೂರು (Bengaluru) ಮಾತ್ರವಲ್ಲದೇ ದೇಶದ ಹಲವು ಕಡೆಗಳಲ್ಲಿ ಈ ವಾರ ವಿಮಾನ ಹಾರಾಟದಲ್ಲಿ ಹಲವು ವ್ಯತ್ಯಯಗಳಾಗಿದೆ. ಹೈದರಾಬಾದ್, ಮಂಗಳೂರು, ಕೇರಳ, ದೆಹಲಿ ಹೀಗೆ ಹಲವು ಕಡೆ ಫ್ಲೈಟ್‌ಗಳು ಕ್ಯಾನ್ಸಲ್ ಆಗಿದ್ದು, ಇನ್ನೂ ಕೆಲವು ಕಡೆ ಸಮಯದಲ್ಲಿ ಬದಲಾವಣೆಯಾಗಿದೆ. ಅದರಲ್ಲೂ ವಿಶೇಷವಾಗಿ ಇಂಡಿಗೋ ವಿಮಾನಗಳೇ (IndiGo Flights) ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ.

62 ಇಂಡಿಗೋ ವಿಮಾನಗಳು ರದ್ದು!
ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು 62 ಇಂಡಿಗೋ ವಿಮಾನಗಳು ರದ್ದುಗೊಂಡಿದ್ದು, ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಡಿಸೆಂಬರ್ 3 ರಂದು ಒಂದೇ ದಿನ 42 ಇಂಡಿಗೋ ವಿಮಾನಗಳು ರದ್ದಾಗಿವೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದ್ದು, ಇವುಗಳಲ್ಲಿ 22 ಆಗಮನ ಮತ್ತು 20 ನಿರ್ಗಮನ ವಿಮಾನಗಳು ಸೇರಿವೆ ಎನ್ನಲಾಗಿದೆ.
ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ, ಗೋವಾ, ಕೋಲ್ಕತ್ತಾ ಮತ್ತು ಲಕ್ನೋನಂತಹ ನಗರಗಳಿಂದ ಬೆಂಗಳೂರಿಗೆ ಆಗಮಿಸಬೇಕಾಗಿದ್ದ ವಿಮಾನಗಳೂ, ಹಾಗೆಯೇ ಮುಂಬೈ, ದೆಹಲಿ, ಗೋವಾ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಅಹಮದಾಬಾದ್‌ಗೆ ಪ್ರಯಾಣ ಬೆಳೆಸಬೇಕಿದ್ದ ವಿಮಾನಗಳೂ ಕೂಡಾ ರದ್ದಾಗಿದೆ ಎಂದು ವರದಿಯಾಗಿದೆ. ಇನ್ನು ಡಿಸೆಂಬರ್ 2 ರಂದು ಸಹ 20 ಇಂಡಿಗೋ ವಿಮಾನಗಳು ರದ್ದುಗೊಂಡಿದ್ದವು ಎಂದು ಹೇಳಲಾಗಿದೆ.
ಕಾರಣವೇನು?
ಇನ್ನು ಅಷ್ಟೊಂದು ವಿಮಾನಗಳು ರದ್ದಾಗಲು ಕಾರಣವೇನು ಕಂಡುಕೊಳ್ಳಲು ಹೊರಟಾಗ, ಈ ವಿಮಾನಗಳ ರದ್ದತಿಗೆ ಕಾರ್ಯಾಚರಣೆಯೇ ಮುಖ್ಯ ಕಾರಣಗಳು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿಮಾನಗಳ ರದ್ದತಿಯಿಂದ ಉಂಟಾ ಸಮಸ್ಯೆಯ ಬಗ್ಗೆ ಅನೇಕ ಪ್ರಯಾಣಿಕರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಕಾರಣವನ್ನು ಇಂಡಿಗೋ ಕಂಪನಿ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ನೀಡಿಲ್ಲ.
ಇದೇ ವೇಳೆ, ಡಿಸೆಂಬರ್ 2 ರಂದು ಬೆಂಗಳೂರಿನಿಂದ ಹೈದರಾಬಾದ್, ವಿಜಯವಾಡ ಮತ್ತು ನಾಗ್‌ಪುರಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮೂರು ವಿಮಾನಗಳು ತಾಂತ್ರಿಕ ದೋಷಗಳಿಂದಾಗಿ ವಿಳಂಬದ ಸಮಸ್ಯೆಯನ್ನು ಎದುರಿಸಿದೆ.
ನವೆಂಬರ್ 29 ರಂದು ಇಂಡಿಗೋ ಹೊರಡಿಸಿದ್ದ ಹೇಳಿಕೆಯಲ್ಲಿ, EASA ಮತ್ತು ಏರ್‌ಬಸ್ ನೀಡಿರುವ ನಿರ್ದೇಶನಗಳ ಅಡಿ ತಮ್ಮ A320 ವರ್ಗದ ವಿಮಾನಗಳ ಟೆಸ್ಟಿಂಗ್ ಮತ್ತು ಸಾಫ್ಟ್‌ವೇರ್ ಅಪ್ಡೇಟ್ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿತ್ತು. ಒಟ್ಟು 200 ವಿಮಾನಗಳನ್ನು ಪರಿಶೀಲನೆಗೆ ಗುರುತಿಸಲಾಗಿದ್ದು, ನವೆಂಬರ್ 29 ರ ಮಧ್ಯಾಹ್ನ 12 ಗಂಟೆಯೊಳಗೆ 160 ವಿಮಾನಗಳ ಕಾರ್ಯ ಮುಗಿದಿದೆ ಎಂದು ಕಂಪನಿ ಸ್ಪಷ್ಟಪಡಿಸಿತ್ತು.
ಅಲ್ಲದೇ ಆ ತಪಾಸಣೆಗಳಿಂದ ಯಾವುದೇ ವಿಮಾನಗಳು ರದ್ದಾಗಿಲ್ಲ, ಆದರೆ ಹಾರಾಟದ ಸಮಯದಲ್ಲಿ ವಿಳಂಬಗಳಾಗಬಹುದು ಎಂದು ಇಂಡಿಗೋ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ, ತಮ್ಮ ವಿಮಾನದ ಅಪ್ಡೇಟ್ ಅನ್ನೂ ಚೆಕ್ ಮಾಡಲು ಅಥವಾ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಮನವಿ ಮಾಡಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications