ಹಕ್ಕಿಯಂತೆ ಬಾನದಲ್ಲಿ ಸ್ವತಂತ್ರವಾಗಿ ಹಾರಾಡುತ್ತಿದ್ದ ಇಂಡಿಗೋ ವಿಮಾನ (IndiGo Flight), ಸದ್ಯ ರೆಕ್ಕೆ ಕಟ್ಟಿದ ಪಕ್ಷಿಯಂತೆ ನಿಂತಲ್ಲೇ ನಿಂತು ಬಿಟ್ಟಿದೆ. ದಿನಕ್ಕೆ ನೂರಾರು ವಿಮಾನಗಳು ರದ್ದಾಗುತ್ತಿದೆ. ಪ್ರಯಾಣಿಕರ ಪರದಾಟ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಸಂಚಾರ ದಟ್ಟಣೆ. ಅಂತೂ ಇಂತೂ ವಿಮಾನ ಪ್ರಯಾಣಿಕರಂತೂ ಸುಸ್ತೋ ಸುಸ್ತು.

ಹೌದು, ಭಾರತೀಯ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ, ಇದೀಗ ಸಂಕಷ್ಟದಲ್ಲಿದೆ. ತನ್ನ ಕಾರ್ಯಾಚರಣೆಯಲ್ಲಾದ ಬಿಕ್ಕಟ್ಟಿನಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಇದೀಗ 6 ನೇ ದಿನ ಅಂದರೆ ಭಾನುವಾರವೂ ಇಂಡಿಗೋ ಬಿಕ್ಕಟ್ಟಿನಲ್ಲಿದ್ದು, ಒಂದೇ ದಿನ 200 ಕ್ಕೂ ಅಧಿಕ ವಿಮಾನಗಳು ರದ್ದಾಗಿದೆ ಎಂದು ವರದಿಯಾಗಿದೆ. ದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲಿ ಗೊಂದಲದ ಪರಿಸ್ಥಿತಿ ಎದುರಾಗಿದೆ.
ಡಿ. 6ರಂದು ವಿಮಾನ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡ ನಂತರ, ಡಿ. 7ರ ಭಾನುವಾರವೂ ಅದೇ ಪರಿಸ್ಥಿತಿ ಮುಂದುವರೆದಿದೆ. ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ (IndiGo) ಸಂಸ್ಥೆಯು ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಒಟ್ಟು 220ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಎಲ್ಲೆಲ್ಲಿ, ಎಷ್ಟೆಷ್ಟು ವಿಮಾನ ರದ್ದು?
ಇಂಡಿಗೋ ಪ್ರಕಟಿಸಿದ ವಿವರಗಳ ಪ್ರಕಾರ, ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 112 ವಿಮಾನಗಳು (ಬರುವ ಮತ್ತು ಹೋಗುವ ವಿಮಾನಗಳು) ರದ್ದುಗೊಂಡಿವೆ. ಇದೇ ರೀತಿ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 109 ವಿಮಾನ ಹಾರಾಟಗಳು ರದ್ದುಗೊಂಡಿವೆ.
ಹಿಂದಿನ 5 ದಿನಗಳಿಗೆ ಹೋಲಿಸಿದ್ರೆ, ಇಂದು ಸ್ವಲ್ಪ ಸುಧಾರಿಸಿದೆ. ಶುಕ್ರವಾರ 2,300 ವಿಮಾನಗಳಲ್ಲಿ 1,600 ಹಾರಾಟಗಳನ್ನು ರದ್ದುಗೊಳಿಸಲಾಗಿತ್ತು. ಶನಿವಾರ ಸುಮಾರು 800 ವಿಮಾನ ಸೇವೆಗಳು ರದ್ದುಗೊಂಡಿದ್ದವು. ಈ ರದ್ದತಿಗಳನ್ನು ಪರಿಗಣಿಸಿದರೆ, ಭಾನುವಾರದ ರದ್ದತಿ ಸಂಖ್ಯೆ ಕಡಿಮೆ ಇದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 124 ವಿಮಾನಗಳು (63 ನಿರ್ಗಮನ, 61 ಆಗಮನ), ಮುಂಬೈನಲ್ಲಿ 109 ವಿಮಾನಗಳು (51 ನಿರ್ಗಮನ, 58 ಆಗಮನ), ದೆಹಲಿಯಲ್ಲಿ 106 ವಿಮಾನಗಳು (54 ನಿರ್ಗಮನ, 52 ಆಗಮನ) ಮತ್ತು ಹೈದರಾಬಾದ್‌ನಲ್ಲಿ 66 ವಿಮಾನಗಳು ರದ್ದುಗೊಂಡಿದೆ ಎಂದು ವರದಿಯಾಗಿದೆ.
ಶೋಕಾಸ್ ನೋಟಿಸ್!
ದೊಡ್ಡ ಮಟ್ಟದ ರದ್ಧತಿ ಬೆನ್ನಲ್ಲೇ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಶನಿವಾರ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮತ್ತು ಸಿಒಒ ಪೊರ್ಕ್ವೆರಾಸ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 24 ಗಂಟೆಗಳ ಒಳಗೆ ವಿಮಾನ ರದ್ದತಿ ಬಗ್ಗೆ ಮತ್ತು ಮುಂದಿನ ಯೋಜನೆ, ಮೇಲ್ವಿಚಾರಣೆ ಹಾಗೂ ಸಂಪನ್ಮೂಲ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ಸಮಗ್ರ ವಿವರಣೆ ನೀಡುವಂತೆ ಸೂಚಿಸಿದೆ.
ಇನ್ನು ಬೃಹತ್ ಪ್ರಮಾಣದಲ್ಲಾದ ವಿಮಾನ ರದ್ದತಿಗಳಿಂದಾಗಿ ವಿಮಾನ ಟಿಕೆಟ್ ದರಗಳು ಸಹ ಗಗನಕ್ಕೇರಿದ್ದವು. ಆದರೆ ಇದನ್ನು ನಿಯಂತ್ರಿಸುವ ಉದ್ದೇಶದಿಂದ ಅಧಿಕಾರಿಗಳು ಮಧ್ಯಪ್ರವೇಶಿಸಿ, ಭಾನುವಾರ ರಾತ್ರಿ 8 ಗಂಟೆಯೊಳಗೆ ರದ್ದುಗೊಂಡ ಅಥವಾ ವಿಳಂಬವಾದ ವಿಮಾನಗಳ ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ಟಿಕೆಟ್ ದರ ಮರುಪಾವತಿ ಮಾಡುವಂತೆ ಸೂಚನೆ ನೀಡಿದರು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications