ಇತ್ತೀಚೆಗೆ ವಿಮಾನ ದುರಂತಗಳು ಸಂಭವಿಸುತ್ತಲೇ ಇವೆ. ಇಂಥ ಹೊತ್ತಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಬಳಿ, ದುರಂತವೊಂದು ತಪ್ಪಿದೆ ಎನ್ನಬಹುದಾಗಿದೆ. ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ನ 6E498 ವಿಮಾನವು, ಲ್ಯಾಂಡ್ ಆಗುವ ಸಮಯ ಬಂದರೂ ಲ್ಯಾಂಡ್ ಆಗದೇ ಗೋ-ಅರೌಂಡ್ ಎಂದು ಹಾರಾಡಿದೆ. ಇದರಿಂದ ಪ್ರಯಾಣಿಕರು ತಾತ್ಕಾಲಿಕ ಆತಂಕಕ್ಕೀಡಾಗಿದ್ದರು. ಐದಾರು ಸೆಕೆಂಡುಗಳ ಕಾಲ ನಿಲುಗಡೆ ಹಂತಕ್ಕೆ ಬಂದು ವಿಮಾನ ಹಾರಾಡಿದ್ದು ನಿಜಕ್ಕೂ ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿತ್ತು. ಬಳಿಕ ಬಳಿಕ 20 ನಿಮಿಷಗಳ ನಂತರ, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯ್ತು.

ಗೋ ಅರೌಂಡ್ ಎಂದರೆ, ವಿಮಾನ ಲ್ಯಾಂಡ್ ಆಗುವ ವೇಳೆ ಕಂಡಿಷನ್ ಸರಿಯಾಗಿಲ್ಲದಿದ್ದರೆ, ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡುವುದನ್ನು ರದ್ದುಗೊಳಿಸುತ್ತಾರೆ. ಮತ್ತೊಮ್ಮೆ ವಿಮಾನ ಹಾರಿಸಿ, ಮತ್ತೊಂದು ಸುರಕ್ಷಿತವಾಗಿ ಇಳಿಯಲು ಪ್ರಯತ್ನಿಸುತ್ತಾರೆ. ಆದರೆ ಈ ಪ್ರಕ್ರಿಯೆ ಕಂಡು ಆತಂಕಗಗೊಂಡ ಪ್ರಯಾಣಿಕರೊಬ್ಬರು ಆತಂಕಗೊಂಡಿದ್ದರು. ಏನಾಯ್ತು ಎಂದು ಕೇಳಿದಾಗ, ಇದು ಸಾಮಾನ್ಯ ಪ್ರಕ್ರಿಯೆ ಎಂದು ಪೈಲಟ್ ತಿಳಿಸಿದ್ದಾರೆ. ಅಂದರೆ ಇದರಲ್ಲಿ ಗಾಬರಿ ಪಡುವಂತದ್ದೇನು ಇಲ್ಲ. ಆ ಸಮಯದಲ್ಲಿ ಲ್ಯಾಂಡ್ ಆಗಲು ಸೂಕ್ತ ಎನಿಸಲಿಲ್ಲ. ಹಾಗಿದ್ದಾಗ ಲ್ಯಾಂಡ್ ಮಾಡದೇ ಇರುವುದೇ ಉತ್ತಮ. ಹೀಗಾಗಿ ವಿಮಾನವನ್ನು ಮತ್ತೊಮ್ಮೆ ಹಾರಿಸಿ ಸರಿಯಾಗಿ ಇಳಿಸುತ್ತೇನೆ ಎಂದರು.
ಒಮ್ಮೊಮ್ಮೆ ಹವಾಮಾನ ಸ್ಪಷ್ಟವಾಗಿಲ್ಲದಿದ್ದಾಗ, ಅಥವಾ ಮತ್ತೊಂದು ವಿಮಾನ ರನ್‌ವೇ ಮೇಲೆ ಇದ್ದಾಗ ಪೈಲಟ್‌ಗಳು ವಿಮಾನ ಲ್ಯಾಂಡ್ ಮಾಡಲು ಸುರಕ್ಷಿತವಲ್ಲ ಎಂದು ಭಾವಿಸುತ್ತಾರೆ. ಅಂತಹ ಸಮಯದಲ್ಲಿ ಅವರು ಸಮಯ ತೆಗೆದುಕೊಳ್ಳುವುದೇ ಸರಿಯಾದ ಮಾರ್ಗ. ಏಕೆಂದರೆ ಸೂಕ್ತವಲ್ಲದಿದ್ದಾಗ ವಿಮಾನ ಲ್ಯಾಂಡ್ ಮಾಡುವುದು ಕೆಲವೊಮ್ಮೆ ದುರಂತಕ್ಕೆ ಎಡೆ ಮಾಡಿಕೊಡಬಹುದು. ಹೀಗಾಗಿ ಸುರಕ್ಷಿತ ಲ್ಯಾಂಡಿಂಗ್‌ನ ಪೂರ್ಣಗೊಳಿಸಲು, ಪೈಲಟ್‌ಗಳು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂಡಿಗೋ ಏರ್‌ಲೈನ್ಸ್ ಮೂಲಗಳು ಈ ಬದಲಾವಣೆಗೆ ಅಸ್ಥಿರ ವಿಧಾನವೇ ಕಾರಣ ಎಂದು ಹೇಳಿದ್ದು, ಪ್ರಯಾಣಿಕರ ಸುರಕ್ಷತೆಗೆ ಅವರ ಬದ್ಧತೆಯನ್ನು ಪ್ರಾಥಮಿಕ ಪರಿಗಣನೆಯಾಗಿ ಒತ್ತಿಹೇಳಿದೆ. ಅಲ್ಲದೇ ಹಾರಾಟದ ಸಮಯದಲ್ಲಿ ವಿಮಾನವು ಯಾವುದೇ ತಾಂತ್ರಿಕ ದೋಷಗಳನ್ನು ಎದುರಿಸಿಲ್ಲ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ.
ಇದೇ ರೀತಿಯ ಘಟನೆಯಿಂದ ಇಬ್ಬರು ಪೈಲಟ್‌ಗಳು ಸಸ್ಪೆಂಡ್:
ಇನ್ನು ಇದೇ ರೀತಿಯ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಅಂದರೆ ಸೆಪ್ಟೆಂಬರ್ 9, 2024 ರಂದು, ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ 6E6054 ವಿಮಾನ, ದೆಹಲಿ ಏರ್‍ಪೋರ್ಟ್‌ನಲ್ಲಿ ಒಂದು ಗಂಭೀರ ಪರಿಸ್ಥಿತಿಗೆ ಗುರಿಯಾಯಿತು. ಇದಕ್ಕೆ ನಿಖರ ಕಾರಣ ಏನು ಎಂದು ಸದ್ಯ ತನಿಖೆಯ ಮೂಲಕ ತಿಳಿದುಕೊಳ್ಳಲಾಗುತ್ತಿದೆ. ಆದರೆ ಅಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ, ಇಂಡಿಗೋ ಏರ್‌ಲೈನ್ಸ್‌ನ ಇಬ್ಬರು ಪೈಲಟ್‌ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತು. ಈಗಲೂ ಆ ಅಮಾನತು ಚಾಲ್ತಿಯಲ್ಲಿದ್ದು, ಇದು ಎಷ್ಟು ದಿನಗಳ ಕಾಲ ಇರಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.ತನಿಖೆ ಮುಗಿಯುವವರೆಗೆ ಪೈಲಟ್‌ಗಳನ್ನು ಡ್ಯೂಟಿ ಮೆಟೀರಿಯಲ್ ನಿಲ್ದಾಣದಲ್ಲಿಯೇ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದಲ್ಲದೇ ಈ ಘಟನೆಯ ನಂತರ, ವಿಮಾನವನ್ನು 8 ದಿನಗಳ ಕಾಲ ಬಳಕೆ ಮಾಡಲಾಗಿಲ್ಲ ಎಂದೂ ತಿಳಿದುಬಂದಿದೆ. ಅಲ್ಲದೇ ಆ ವಿಮಾನವನ್ನು ನಿಲ್ದಾಣದಲ್ಲಿಯೇ ಉಳಿಸಲಾಯಿತು. ಈ ಅವಧಿಯಲ್ಲಿ, ತಾಂತ್ರಿಕ ತಪಾಸಣೆ ಮತ್ತು ವಿಮಾನ ದೋಷ ಪರೀಕ್ಷೆಗಳು ನಡೆದಿರುವ ಸಾಧ್ಯತೆ ಇದೆ. ಹಾಗೆಯೇ ಘಟನೆ ನಂತರ, DGCA ಇಬ್ಬರು ಪೈಲಟ್‌ಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ. ಪೈಲಟ್‌ಗಳು ತಮ್ಮ ಕಾರ್ಯಾಚರಣೆಯಲ್ಲಿ ಯಾವುದೇ ತಪ್ಪು ಮಾಡಿದ್ದಾರಾ ಎಂಬುದನ್ನು ಪ್ರಾಥಮಿಕ ತನಿಖೆ ಮೂಲಕ ಪರಿಶೀಲಿಸಲಾಗುತ್ತಿದೆ.
ಡಿಜಿಸಿಎ ಪ್ರತೀ ದೊಡ್ಡ ವಿಮಾನಾಯಾನ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಆದರೆ ಪೈಲಟ್‌ಗಳನ್ನು ಅಮಾನತುಗೊಳಿಸಿದ್ದರಿಂದ, ಈ ಪ್ರಕರಣ ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ತೀವ್ರಗೊಳ್ಳಬಹುದು. DGCA ತನಿಖೆ ಮುಗಿದ ನಂತರ, ಪೈಲಟ್‌ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಹುದು ಅಥವಾ ಅವರ ಅಮಾನತು ತೆರವುಗೊಳ್ಳಲೂಬಹುದು.


Click it and Unblock the Notifications