ಬೆಂಗಳೂರು, ಆಗಸ್ಟ್ 7: ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯೂ ಹೊಸ ಲಾಯಲ್ಟಿ ಪ್ರೋಗ್ರಾಂ "ಇಂಡಿಗೋ ಬ್ಲೂಚಿಪ್" ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದ್ದು ಇದರ ಮುಂಗಡ ನೋಂದಣಿ ಅ. 5 ರಿಂದ ಪ್ರಾರಂಭವಾಗಿದೆ. ಇಂಡಿಗೋ ಲಾಯಲ್ಟಿ ಪ್ರೋಗ್ರಾಂ ಬ್ಲೂಚಿಪ್ ಅಡಿಯಲ್ಲಿ, ಪ್ರತಿ ಪ್ರಯಾಣಿಕರು ಹಾರಾಟದ ಮಾರ್ಗ ಮತ್ತು ಅವಧಿಯನ್ನು ಪ್ರತಿ ಬಾರಿಯೂ ಅಂಕಗಳನ್ನು ಗಳಿಸಬಹುದಾಗಿದೆ.
ಇಂಡಿಗೋ ಲಾಯಲ್ಟಿ ಪ್ರೋಗ್ರಾಂ ಬ್ಲೂಚಿಪ್ ಎಂದರೇನು?
ಬ್ಲೂಚಿಪ್ ಪ್ರೋಗ್ರಾಂ ಅಸ್ತಿತ್ವದಲ್ಲಿರುವ ರಿವಾರ್ಡ್ ಪ್ರೋಗ್ರಾಂ, 6E ರಿವಾರ್ಡ್‌ಗಳಿಗಿಂತ ಭಿನ್ನವಾಗಿರುತ್ತದೆ. ಪ್ರಸ್ತುತ 6E ರಿವಾರ್ಡ್ಸ್ ಪ್ರೋಗ್ರಾಂ ಮೂಲಭೂತವಾಗಿದ್ದು ಇದು ವಿಶಿಷ್ಟವಾದ ಏರ್‌ಲೈನ್ ಲಾಯಲ್ಟಿ ಪ್ರೋಗ್ರಾಂ ಅನ್ನು ಹೋಲುವುದಿಲ್ಲ. ಇಂಡಿಗೋ ಬ್ಲೂಚಿಪ್ ಎನ್ನುವುದು ಇಂಡಿಗೋ ವಿಮಾನಯಾನ ಸಂಸ್ಥೆಯ ಲಾಯಲ್ಟಿ ಪ್ರೋಗ್ರಾಂ ಆಗಿದ್ದು ಇದರ ಮೂಲಕ ಇಂಡಿಗೋ ವಿಮಾನಗಳಲ್ಲಿ ಪ್ರಯಾಣಿಸುವಾಗ ಪ್ರತಿ ಬಾರಿಯೂ ಪಾಯಿಂಟ್‌ಗಳನ್ನು ಗಳಿಸಬಹುದು. ಈ ಪಾಯಿಂಟ್‌ಗಳನ್ನು ನೀವು ನಂತರ ಇಂದಿಗೋದ ಉಚಿತ ವಿಮಾನ ಟಿಕೆಟ್‌ಗಳು ಅಥವಾ ಇತರ ಪ್ರಯೋಜನಗಳಿಗಾಗಿ ಬಳಸಬಹುದು. ಹೊಸ ಪ್ರೋಗ್ರಾಂ ಅನ್ನು ಪ್ರಾರಂಭಿಸಿದ ನಂತರ ಅಸ್ತಿತ್ವದಲ್ಲಿರುವ 6E ರಿವಾರ್ಡ್‌ಗಳ ಸದಸ್ಯರನ್ನು ಅದಕ್ಕೆ ಸ್ಥಳಾಂತರಿಸಲಾಗುತ್ತದೆ ಎನ್ನಲಾಗಿದೆ.

"ಇಂಡಿಗೋದಲ್ಲಿ ಪಾಯಿಂಟ್ ಪಡೆದುಕೊಳ್ಳಲು ವೇಗವಾದ ಮಾರ್ಗ" ಎಂದು ಕರೆದಿರುವ ಏರ್‌ಲೈನ್, ಈ ಬ್ಲೂಚಿಪ್ ಪ್ರೋಗ್ರಾಮ್ ವರ್ಷದ 365 ದಿನಗಳವರೆಗೆ ಲಭ್ಯವಿರುವ "ಕಿರಿಕಿರಿ-ಮುಕ್ತವಾಗಿರುವ(hassle-free redemption)" "ಯಾವುದೇ ಬ್ಲ್ಯಾಕ್‌ಔಟ್ ಮತ್ತು ಯಾವುದೇ ಫ್ಯಾನ್ಸಿ ರೂಲ್ಸ್(no fancy rules) ನಿಯಮಗಳಿರದ" ಪ್ರೋಗ್ರಾಮ್ ಎಂದು ಹೇಳಿದೆ.
ಲಾಯಲ್ಟಿ ಕಾರ್ಯಕ್ರಮದ ಪೂರ್ವ-ನೋಂದಣಿ ಅ.೫ ದಿಂದಲೇ ಆರಂಭವಾಗಿದ್ದು ಏರ್‌ಲೈನ್ಸ್ ಪ್ರಕಾರ, ಇಂಡಿಗೋ ಬ್ಲೂಚಿಪ್ ಅಡಿಯಲ್ಲಿ ನೋಂದಾಯಿಸಿಕೊಂಡ ಪ್ರಯಾಣಿಕರು ಐದು ನಾಮಿನಿಗಳನ್ನು ಪಟ್ಟಿ ಮಾಡಬಹುದು. ಒಬ್ಬ ವ್ಯಕ್ತಿಯು ಆಗಾಗ್ಗೆ ಹಾರಾಟ ನಡೆಸುತ್ತಿದ್ದರೆ ಅಂಕಗಳ ಮುಕ್ತಾಯ ಎಂಬುದೇ ಇರುವುದಿಲ್ಲ ಎಂದು ಹೇಳಿದೆ.
IndiGo ಈ ಕಾರ್ಯಕ್ರಮವನ್ನು ಎಲ್ಲರಿಗೂ ಪರಿಚಯಿಸದಿದ್ದರೂ, ಬ್ಲೂಚಿಪ್ ಈವೆಂಟ್ ಪ್ರಯೋಜನಗಳನ್ನು ಪಡೆದುಕೊಳ್ಳಲು ಗ್ರಾಹಕರು ಪೂರ್ವ-ನೋಂದಣಿಗಳನ್ನು ಮಾಡಬೇಕಾಗುತ್ತದೆ. ಹೀಗೆ ಪ್ರೀ ರಿಜಿಸ್ಟರ್ ಮಾಡಿದ ಓರ್ವ ಗ್ರಾಹಕ 18,000 ಇಂಡಿಗೋ ಬ್ಲೂಚಿಪ್ ಪಾಯಿಂಟ್ ಹಾಗೂ 50 ಸದಸ್ಯರು 1,800 ಚಿಪ್‌ಗಳನ್ನು ಪಡೆಯಲಿದ್ದಾರೆ ಎಂದು ಇಂಡಿಗೋ ಹೇಳಿದೆ.
ಬ್ಲೂಚಿಪ್ ಪ್ರೋಗ್ರಾಂನ ಪ್ರಮುಖ ಪ್ರಯೋಜನಗಳು:
ಉಚಿತ ಏರ್ ಟಿಕೆಟ್ ಗಳು: ನೀವು ಗಳಿಸುವ ಪಾಯಿಂಟ್ ಗಳನ್ನು ಬಳಸಿಕೊಂಡು ಏರ್ ಟಿಕೆಟ್ ಗಳನ್ನು ಬುಕ್ ಮಾಡಬಹುದು.
ಅಪ್ ಗ್ರೇಡ್ ಗಳು: ಕೆಲವೊಮ್ಮೆ ನೀವು ಬುಕ್ ಮಾಡಿದ ಕ್ಲಾಸ್ ಗಿಂತ ಉನ್ನತ ದರ್ಜೆಯ ಕ್ಲಾಸ್ ಉಚಿತವಾಗಿ ಅಪ್ ಗ್ರೇಡ್ ಆಗುವ ಅವಕಾಶವನ್ನು ಪಡೆಯಬಹುದು.
ವಿಶೇಷ ಆಫರ್ ಗಳು: ಬ್ಲೂಚಿಪ್ ಸದಸ್ಯರಿಗೆ ಮಾತ್ರ ವಿಶೇಷ ಆಫರ್ ಗಳು ಮತ್ತು ರಿಯಾಯಿತಿಗಳು ಸಿಗುತ್ತವೆ.
ವಿಶೇಷ ಸೇವೆಗಳು: ವಿಮಾನ ನಿಲ್ದಾಣದಲ್ಲಿ ವಿಶೇಷ ಸೇವೆಗಳು ಮತ್ತು ಲೌಂಜ್ ಪ್ರವೇಶದಂತಹ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಬ್ಲೂಚಿಪ್ ಗೆ ಸೇರುವುದು ಹೇಗೆ?
ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ನೀವು ಬ್ಲೂಚಿಪ್ ಗೆ ಸೇರಬಹುದು. ಅಥವಾ ನೀವು ಇಂಡಿಗೋ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಈ ಲಾಯಲ್ಟಿ ಪ್ರೋಗ್ರಾಮ್ ನ ಪ್ರಯೋಜನ ಪಡೆದುಕೊಳ್ಳಬಹುದು.


Click it and Unblock the Notifications