For Quick Alerts
ALLOW NOTIFICATIONS  
For Daily Alerts

ಚೀನಾ ವಿರುದ್ಧ ಭಾರತದ ಕೈಗಾರಿಕೋದ್ಯಮಿಗಳು ಒಂದಾಗಬೇಕು ಎಂದ ಸಜ್ಜನ್ ಜಿಂದಾಲ್

|

ನವದೆಹಲಿ: ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ನಂತರ ಭಾರತದಲ್ಲಿ ಚೀನಾವನ್ನು ಆರ್ಥಿಕವಾಗಿ ಎದುರಿಸಬೇಕು, ಆ ಮೂಲಕ ಆ ದೇಶಕ್ಕೆ ಬುದ್ದಿ ಕಲಿಸಬೇಕು ಎಂಬ ಕೂಗುಗಳು ಬಲವಾಗಿ ಕೇಳಿ ಬರುತ್ತಿವೆ.

 

ಇದೀಗ ಖ್ಯಾತ ಕೈಗಾರಿಕೋದ್ಯಮಿ ಜೆಎಸ್‌ಡಬ್ಲ್ಯೂ ಗ್ರೂಪ್ ಮುಖ್ಯಸ್ಥ ಸಜ್ಜನ್ ಜಿಂದಾಲ್ ಕೂಡ ಈ ಕೂಗಿಗೆ ದ್ವನಿ ಕೂಡಿಸಿದ್ದಾರೆ.

'ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಚೀನಾ ಆಮದು ಹೆಚ್ಚಾಗಿದೆ''ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಚೀನಾ ಆಮದು ಹೆಚ್ಚಾಗಿದೆ'

ಚೀನಾದಿಂದ ಆಮದು ಮಾಡುವುದನ್ನು ನಿಲ್ಲಿಸಲು ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿರುವ ಜೆಎಸ್‌ಡಬ್ಲ್ಯೂ ಗ್ರೂಪ್ ಮುಖ್ಯಸ್ಥ ಸಜ್ಜನ್ ಜಿಂದಾಲ್ ಗಡಿಯಲ್ಲಿ ಭಾರತೀಯ ಸೈನಿಕರು ಹತ್ಯೆಯಾದರೆ ಚೀನಾದೊಂದಿಗಿನ ವ್ಯವಹಾರವು ಎಂದಿನಂತೆ ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ. ಮುಂದಿನ 24 ತಿಂಗಳಲ್ಲಿ ತಮ್ಮ ವ್ಯವಹಾರವು ಚೀನಾದಿಂದ 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ವಾರ್ಷಿಕ ಆಮದನ್ನು ನಿಲ್ಲಿಸುತ್ತದೆ ಎಂದು ಹೇಳಿದ್ದಾರೆ.

ಭಾರತದ ನೆಲದಲ್ಲಿ ನಷ್ಟ ಮಾಡಿದ ಪರಿಣಾಮವಾಗಿದೆ

ಭಾರತದ ನೆಲದಲ್ಲಿ ನಷ್ಟ ಮಾಡಿದ ಪರಿಣಾಮವಾಗಿದೆ

ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಉಲ್ಲೇಖಿಸಿದ ಅವರು, ಆಮದನ್ನು ನಿಲ್ಲಿಸಬೇಕು ಎನ್ನುವ ಈ ಕ್ರಮವು ಚೀನಾ ಭಾರತದ ನೆಲದಲ್ಲಿ ಮಾಡಿದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.

ನಾವು ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ

ನಾವು ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ

ನಮ್ಮ ಸೈನಿಕರು ಗಡಿಯಲ್ಲಿ ಕೊಲ್ಲಲ್ಪಟ್ಟಾಗ ನಮ್ಮ ವ್ಯವಹಾರಕ್ಕಾಗಿ ಅಗ್ಗದ ಚೀನೀ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ನಾವು ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿ ಬಲಿಷ್ಠ ಆತ್ಮ ನಿರ್ಭರ ಭಾರತ್‌ಗೆ ಒತ್ತು ನೀಡುವ ಅವಕಾಶ ಇದಾಗಿದೆ ಎಂದು ಸಜ್ಜನ್ ಜಿಂದಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶೀಯ ಉತ್ಪಾದಕರಿಗೆ ಬೆಂಬಲ ನೀಡೋಣ
 

ದೇಶೀಯ ಉತ್ಪಾದಕರಿಗೆ ಬೆಂಬಲ ನೀಡೋಣ

ಗುಣಮಟ್ಟ ಮತ್ತು ಪ್ರಮಾಣವನ್ನು ಸಾಧಿಸುವಲ್ಲಿ ನಮ್ಮ ದೇಶೀಯ ಉತ್ಪಾದಕರಿಗೆ ಬೆಂಬಲ ನೀಡೋಣ. ನಾವು ನಮ್ಮ ಸ್ವಂತ ಉತ್ಪನ್ನಗಳಿಗೆ ನಿಷ್ಠೆಯನ್ನು ತೋರಿಸಬೇಕಾಗಿದೆ. ನಾವು ನಮ್ಮ ಸಶಸ್ತ್ರ ಪಡೆ ಮತ್ತು ಸರ್ಕಾರವನ್ನು ಬೆಂಬಲಿಸಬೇಕು ಮತ್ತು ಚೀನೀಯರ ವಿರುದ್ಧದ ಈ ಹೋರಾಟದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಸಾಬೀತುಪಡಿಸಬೇಕು ಎಂದು ಸಜ್ಜನ್ ಜಿಂದಾಲ್ ಹೇಳಿದ್ದಾರೆ.

ಹೀರೋ ಸೈಕಲ್ ಕೂಡ ಚೀನಾಕ್ಕೆ ಬಹಿಷ್ಕಾರ

ಹೀರೋ ಸೈಕಲ್ ಕೂಡ ಚೀನಾಕ್ಕೆ ಬಹಿಷ್ಕಾರ

ಏತನ್ಮಧ್ಯೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಭಾಗವಾಗಿ ಭಾರತದ ಪ್ರಮುಖ ಬೈಸಿಕಲ್ ತಯಾರಕ ಕಂಪನಿಯಾದ ಹೀರೋ ಸೈಕಲ್ಸ್ ಚೀನಾದೊಂದಿಗೆ ಮುಂಬರುವ 900 ಕೋಟಿ ರುಪಾಯಿ ಒಪ್ಪಂದವನ್ನು ರದ್ದುಗೊಳಿಸಲು ಮುಂದಾಗಿದೆ. ಹೀರೋ ಅಧ್ಯಕ್ಷ-ಕಮ್-ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮುಂಜಾಲ್ ಅವರ ಪ್ರಕಾರ, ಕಂಪನಿಯು ಚೀನಾದೊಂದಿಗೆ 900 ಕೋಟಿ ರೂ. ವ್ಯವಹಾರ ನಡೆಸಲು ನಿರ್ಧರಿಸಲಾಗಿತ್ತು ಆದರೆ, ಆ ಯೋಜನೆಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

English summary

Industrialist Sajjan Jindal Calls For Unity Among Industrialists For Chinese Imports Boycott

Industrialist Sajjan Jindal Calls For Unity Among Industrialists For Chinese Imports Boycott
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X