ಬೆಂಗಳೂರು, ಜುಲೈ 8: ಆಕರ್ಷಕ ಪ್ಯಾಕೇಜಿಂಗ್, ಅತ್ಯುತ್ತಮ ರುಚಿ ಮತ್ತು ಬ್ರ್ಯಾಂಡ್ ಜನಪ್ರಿಯತೆ ಇರುವ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳು, ಆರೋಗ್ಯಕ್ಕೆ ಉತ್ತಮವಾಗಿಲ್ಲದಿದ್ದರೂ ಅವುಗಳನ್ನು ಖರೀದಿಸಲು ಮತ್ತು ಸೇವಿಸಲು ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಇವುಗಳಿಗೆ ಬ್ರೇಕ್ ಹಾಕುವ ದೃಷ್ಟಿಯಿಂದ ಪ್ಯಾಕೇಜ್ಡ್ ಆಹಾರದ ಬಗ್ಗೆ ಗ್ರಾಹಕರ ಜಾಗೃತಿಯನ್ನು ಹೆಚ್ಚಿಸುವ ಕ್ರಮದಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹೊಸ ಕ್ರಮವನ್ನು ಕೈಗೊಂಡಿದೆ.
ಎಫ್‌ಎಸ್‌ಎಸ್‌ಎಐ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳ ಮೇಲೆ ಪೌಷ್ಟಿಕಾಂಶದ ಮಾಹಿತಿ ಲೇಬಲಿಂಗ್‌ನಲ್ಲಿ ಬದಲಾವಣೆ ಮಾಡುವಂತೆ ತಿಳಿಸಿದೆ. ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿರುವ ಒಟ್ಟು ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮತ್ತು ದೊಡ್ಡ ಫಾಂಟ್ ನಲ್ಲಿ ಪ್ಯಾಕೆಟ್ನ ಮೇಲೆ ಮುದ್ರಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ಹೊಸ ನಿಯಮದ ಪ್ರಕಾರ ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿನ ಒಟ್ಟು ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಪ್ಯಾಕೆಟ್ನ ಮೇಲೆ ದಪ್ಪ ಅಕ್ಷರಗಳಲ್ಲಿ ಮತ್ತು ತುಲನಾತ್ಮಕವಾಗಿ ದೊಡ್ಡ ಫಾಂಟ್ ಗಾತ್ರದಲ್ಲಿ ಮುದ್ರಿಸುವುದು ಕಡ್ಡಾಯವಾಗಿದ್ದು ಈ ವಿಚಾರವನ್ನು FSSAI ತಮ್ಮ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಇತ್ತೀಚಿನ ತಿದ್ದುಪಡಿ ಪ್ರಕಟಣೆಯನ್ನು ಹಂಚಿಕೊಂಡಿದೆ.
FSSAI ಅಧ್ಯಕ್ಷರಾದ ಅಪೂರ್ವ ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಆಹಾರ ಪ್ರಾಧಿಕಾರದ 44 ನೇ ಸಭೆಯಲ್ಲಿ, ಪೌಷ್ಟಿಕಾಂಶದ ಮಾಹಿತಿ ಲೇಬಲಿಂಗ್‌ಗೆ ಸಂಬಂಧಿಸಿದಂತೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಲೇಬಲಿಂಗ್ ಮತ್ತು ಡಿಸ್ಪ್ಲೇ) ನಿಯಮಗಳು, 2020 ರಲ್ಲಿ ತಿದ್ದುಪಡಿಯನ್ನು ಅನುಮೋದಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ತಿದ್ದುಪಡಿಯ ಕರಡು ಅಧಿಸೂಚನೆಯನ್ನು ಈಗ ಸಾರ್ವಜನಿಕ ಡೊಮೇನ್‌ನಲ್ಲಿ ಸಲಹೆಗಳನ್ನು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲು ಇರಿಸಲಾಗುವುದು. ಈ ಶಿಫಾರಸ್ಸುವಿನಿಂದ ಆಹಾರದಲ್ಲಿನ ಆರ್‌ಡಿಎ (Dietary Reference Intake) ಪ್ರತಿ ಸರ್ವ್ ನಲ್ಲಿ ಶೇಕಡಾವಾರು (%)ವಿನಂತೆ ಸಂಬಂಧಿಸಿದ ಮಾಹಿತಿಯನ್ನು ಒಟ್ಟು ಸಕ್ಕರೆ, ಒಟ್ಟು ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಅಂಶಗಳ ವಿವರಗಳನ್ನು ದಪ್ಪ ಅಕ್ಷರಗಳಲ್ಲಿ ನೀಡಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.
"ಈ ತಿದ್ದುಪಡಿಯಿಂದಾಗಿ ಗ್ರಾಹಕರು ಅವರು ಸೇವಿಸುವ ಉತ್ಪನ್ನದ ಪೌಷ್ಟಿಕಾಂಶದ ಮೌಲ್ಯವನ್ನು ಸವಿವರವಾಗಿ ಅರ್ಥಮಾಡಿಕೊಳ್ಳಲು ಮತ್ತು ತಮಗೆ ಬೇಕಾದ ಆರೋಗ್ಯಕರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ" ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.
ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿರುವ ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳ ಹೆಚ್ಚಿನ ಸೇವನೆಯು ಸಾಂಕ್ರಾಮಿಕವಲ್ಲದ ರೋಗಗಳಿಗೆ (ಎನ್‌ಸಿಡಿ) ಕಾರಣವಾಗುತ್ತಿರುವುದರಿಂದ ಇಂಥ ಆಹಾರ ಪದಾರ್ಥಗಳ ಸೇವನೆಯನ್ನು ನಿಯಂತ್ರಿಸಬೇಕೆಂಬುದು ಪೌಷ್ಟಿಕಾಂಶ ತಜ್ಞರ ಅಭಿಪ್ರಾಯವಾಗಿದೆ. ಈ ಕಾರಣಕ್ಕೆ
ಸ್ಪಷ್ಟವಾದ ಮತ್ತು ಪ್ರತ್ಯೇಕವಾದ ಲೇಬಲಿಂಗ್ ಅವಶ್ಯಕತೆಗಳ ಅಭಿವೃದ್ಧಿಯ ಆದ್ಯತೆಯು ಎನ್‌ಸಿಡಿ ಸಮಸ್ಯೆಗಳನ್ನು ಎದುರಿಸಲು ಜಾಗತಿಕ ಸಹಾಯ ಮಾಡುತ್ತದೆ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಮಾಹಿತಿಗಳನ್ನು ತಡೆಗಟ್ಟಲು ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಿದೆ ಎಂದು FSSAI ಹೇಳಿದೆ.


Click it and Unblock the Notifications