ಇನ್ಫೋಸಿಸ್ ಕಂಪನಿ ಸ್ವೀಡಿಷ್ ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್ ಪೋಲೆಸ್ಟಾರ್ ಜೊತೆ ಕೈ ಜೋಡಿಸಲು ಮುಂದಾಗಿದೆ. ಐಟಿ ಕಂಪನಿಯ ತನ್ನ ಬೆಂಗಳೂರಿನಲ್ಲಿರುವ ಅಭಿವೃದ್ಧಿ ಕೇಂದ್ರದಲ್ಲಿ ಪೋಲೆಸ್ಟಾರ್‌ಗೆ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲಿದೆ.
ಈ ಎರಡೂ ಕಂಪನಿಗಳ ನಡುವಿನ ಒಪ್ಪಂದದಲ್ಲಿ ಇನ್ಫೋಟೈನ್‌ಮೆಂಟ್, ಸಾಫ್ಟ್‌ವೇರ್ ಮತ್ತು ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ (SW&EE) ಎಂಜಿನಿಯರಿಂಗ್, ಬಳಕೆದಾರರ ಅನುಭವ (ಯುಎಕ್ಸ್) ಮತ್ತು ಕ್ಲೌಡ್-ಚಾಲಿತ ಡಿಜಿಟಲ್ ಸೇವೆಗಳ ಅಭಿವೃದ್ಧಿ ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ.

ಈ ಕೇಂದ್ರದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನ ಅಭಿವೃದ್ಧಿ, ಇನ್ಫೋಟೈನ್‌ಮೆಂಟ್, ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲಿದೆ ಎಂದು ಇನ್ಫೋಸಿಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪೋಲೆಸ್ಟಾರ್ ಕಾರುಗಳು ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾ ಪೆಸಿಫಿಕ್‌ನಲ್ಲಿ ಜಾಗತಿಕವಾಗಿ 27 ಮಾರುಕಟ್ಟೆಗಳಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇಂಜಿನಿಯರಿಂಗ್ ಲ್ಯಾಬ್‌ಗಳು, ಡಿಸೈನ್ ಸ್ಟುಡಿಯೋಗಳು ಮತ್ತು ಇನ್ಫೋಸಿಸ್ ಲಿವಿಂಗ್ ಲ್ಯಾಬ್‌ಗಳಂತಹ ಇನ್ಫೋಸಿಸ್‌ನ ಕಾರ್ಯತಂತ್ರದ ಆಸ್ತಿಗಳನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶವನ್ನು ಪೋಲೆಸ್ಟಾರ್ ಹೊಂದಿದೆ.
ಪೋಲೆಸ್ಟಾರ್ ಭಾರತದಲ್ಲಿ ಟೆಕ್ ಹಬ್ ಸ್ಥಾಪಿಸಲು ಇನ್ಫೋಸಿಸ್ ಜೊತೆ ಪಾಲುದಾರಿಕೆ ಕೈ ಜೋಡಿಸಿರುವುದು ಖುಷಿಯ ವಿಚಾರ. ಇನ್ಫೋಸಿಸ್ ಹಲವು ಕಾರ್ಯಾಚರಣೆಗಳನ್ನು ಯಶಸ್ವಿ ಆಗಿ ಮುಗಿಸಿದೆ. ಇನ್ಫೋಸಿಸ್ ನಾವು ಅಂದುಕೊಂಡ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಪೋಲೆಸ್ಟಾರ್‌ನ ಡಿಜಿಟಲ್ ವಿಭಾಗದ ಮುಖ್ಯಸ್ಥೆ ಮಾರಿಯಾ ಲೆಕ್ಸ್ ತಿಳಿಸಿದ್ದಾರೆ.
ಪೋಲೆಸ್ಟಾರ್ ಬೆಂಗಳೂರಿನ ಇನ್ಫೋಸಿಸ್ ಜೊತೆಗೆ ಪಾಲುದಾರಿಕೆ ಹೊಂದಿರುವುದು ಹೊಸ ಅಧ್ಯಾಯ ಪ್ರಾರಂಭಿಸಿದೆ. ನಾವು ಈ ಹಬ್‌ನಲ್ಲಿ ಕಂಪನಿಯ ಬೆಳವಣಿಗೆಗೆ ಪೂರಕವಾದ ಆಟೋಮೋಟಿವ್ ಸಾಮರ್ಥ್ಯವನ್ನು ನಿರ್ಮಿಸಲು ಎದುರು ನೋಡುತ್ತಿದ್ದೇವೆ ಎಂದು ಪೋಲೆಸ್ಟಾರ್‌ನ ಸಾಫ್ಟ್‌ವೇರ್ ಮುಖ್ಯಸ್ಥ ಸ್ವೆನ್ ಬಾಯರ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಒಪ್ಪಂದದಿಂದ ಪೋಲೆಸ್ಟಾರ್ ಹಾಕಿಕೊಂಡ ಗುರಿ ಹಾಗೂ ಡಿಜಿಟಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಹಾಯಕವಾಗುತ್ತದೆ ಎಂದು ಇನ್ಫೋಸಿಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಜಾಗತಿಕ ಉತ್ಪಾದನಾ ಮುಖ್ಯಸ್ಥ ಜಸ್ಮೀತ್ ಸಿಂಗ್ ಹೇಳಿದ್ದಾರೆ. ಆಟೋಮೋಟಿವ್ ಇಂಜಿನಿಯರಿಂಗ್, ಡಿಜಿಟಲ್ ಅಭಿವೃದ್ಧಿಗಳಲ್ಲಿ ಇನ್ಫೋಸಿಸ್ ಅವರೊಂದಿಗೆ ಕೈ ಜೋಡಿಸಬಹುದು. ಮುಂದಿನ ಪೀಳಿಗೆಯ ಮೊಬಿಲಿಟಿಯಲ್ಲಿ ಹೊಸ ಮಾನದಂಡಗಳನ್ನು ರಚಿಸಲು ಕಂಪನಿಯು, ಪೋಲೆಸ್ಟಾರ್ ಜೊತೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications